ಟಿವಿ9 ಪ್ರಾಪರ್ಟಿ ಎಕ್ಸ್​ಪೋ ಆರಂಭ; ಒಳ್ಳೊಳ್ಳೆಯ ರಿಯಲ್ ಎಸ್ಟೇಟ್ ಆಫರ್​ಗಳು; ಜನರಿಂದ ಉತ್ತಮ ಸ್ಪಂದನೆ
ಟಿವಿ9 ಪ್ರಾಪರ್ಟಿ ಎಕ್ಸ್​ಪೋ

ಟಿವಿ9 ಪ್ರಾಪರ್ಟಿ ಎಕ್ಸ್​ಪೋ ಆರಂಭ; ಒಳ್ಳೊಳ್ಳೆಯ ರಿಯಲ್ ಎಸ್ಟೇಟ್ ಆಫರ್​ಗಳು; ಜನರಿಂದ ಉತ್ತಮ ಸ್ಪಂದನೆ

Updated on: Nov 15, 2024 | 3:07 PM

TV9 Sweet Home Real Estate Expo 2024: ಟಿವಿ9 ಕನ್ನಡ ಮತ್ತು ಸ್ವೀಟ್ ಹೋಂ ಜಂಟಿಯಾಗಿ ಆಯೋಜಿಸಿರುವ ರಿಯಲ್ ಎಸ್ಟೇಟ್ ಎಕ್ಸ್​ಪೋ 2024 ಚಾಲನೆಗೊಂಡಿದೆ. ಸಚಿವ ಭೈರತಿ ಸುರೇಶ್ ಅವರು ಇಂದು ಶುಕ್ರವಾರ ಈ ಪ್ರಾಪರ್ಟಿ ಎಕ್ಸ್​ಪೋ ಉದ್ಘಾಟನೆ ನೆರವೇರಿಸಿದ್ದಾರೆ.

ಬೆಂಗಳೂರು, ನವೆಂಬರ್ 15: ಟಿವಿ9 ಕನ್ನಡ ಮತ್ತು ಸ್ವೀಟ್ ಹೋಂ ಜಂಟಿಯಾಗಿ ಆಯೋಜಿಸಿರುವ ರಿಯಲ್ ಎಸ್ಟೇಟ್ ಎಕ್ಸ್​ಪೋ 2024 ಚಾಲನೆಗೊಂಡಿದೆ. ಸಚಿವ ಭೈರತಿ ಸುರೇಶ್ ಅವರು ಇಂದು ಶುಕ್ರವಾರ ಈ ಪ್ರಾಪರ್ಟಿ ಎಕ್ಸ್​ಪೋ ಉದ್ಘಾಟನೆ ನೆರವೇರಿಸಿದರು. ಭಾನುವಾರದವರೆಗೆ ಮೂರು ದಿನಗಳ ಕಾಲ ಈ ಎಕ್ಸ್​ಪೋ ಇರಲಿದ್ದು, ನಗರದ ಹಲವು ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಡೆವಲಪರ್​ಗಳು ಭಾಗವಹಿಸಿದ್ದಾರೆ. ನಗರದ ವಿವಿಧೆಡೆ ಇರುವ ಪ್ರಾಜೆಕ್ಟ್​​ಗಳ ಬಗ್ಗೆ, ವಿವಿಧ ಬೆಲೆಗಳ ಸೈಟು, ಫ್ಲಾಟು ಇತ್ಯಾದಿ ವೈವಿಧ್ಯಮಯ ಪ್ರಾಪರ್ಟಿಗಳ ಅನಾವರಣ ಆಗಲಿದೆ. ಕಳೆದ ಬಾರಿ ನಡೆದ ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋ ಭರ್ಜರಿ ಯಶಸ್ಸು ಗಳಿಸಿತ್ತು. ಈ ಬಾರಿಯೂ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆ ಇದೆ. ನಾಯಂಡಹಳ್ಳಿಯಿಂದ ಪಿಇಎಸ್ ಯುನಿವರ್ಸಿಟಿಯ ಹಾದಿಯಲ್ಲಿ ಸಿಗುವ ನೈಸ್ ರಸ್ತೆಯ ನಂದಿ ಲಿಂಕ್ ಗ್ರೌಂಡ್​ನಲ್ಲಿ ಭಾನುವಾರದವರೆಗೂ ರಿಯಲ್ ಎಸ್ಟೇಟ್ ಪ್ರದರ್ಶನ ನಡೆಯಲಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More