ಮೊದಲ ಬಾರಿಗೆ ಮೈಸೂರಿಗೆ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ನಿಮ್ಮ ಕನಸಿನ ಮನೆಗೆ ಸುವರ್ಣಾವಕಾಶ

Updated on: Aug 21, 2026 | 2:10 PM

TV9 Sweet Home Real Estate Expo 2026 at Mysore: ಮೈಸೂರಿನಲ್ಲಿ ಆಗಸ್ಟ್ 22 ಮತ್ತು 23, 2026ರಂದು ಮೊದಲ ಬಾರಿಗೆ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ ನಡೆಯಲಿದೆ. ಜೆಎಸ್ಎಸ್ ಆಸ್ಪತ್ರೆ ಬಳಿಯ ರಾಜೇಂದ್ರ ಕಲಾ ಮಂದಿರದಲ್ಲಿ ಶರಣ್ಯ ಫಾರ್ಮ್ಸ್ ಪ್ರಸ್ತುತಪಡಿಸುತ್ತಿರುವ ಈ ಎಕ್ಸ್‌ಪೋದಲ್ಲಿ ಕನಸಿನ ಮನೆ ಖರೀದಿಸಲು ಸುಲಭ ಸಾಲ ಸೌಲಭ್ಯಗಳೊಂದಿಗೆ ವಿಶ್ವಾಸಾರ್ಹ ಡೆವಲಪರ್‌ಗಳನ್ನು ಭೇಟಿ ಮಾಡಬಹುದು. ಪ್ರವೇಶ ಉಚಿತ.

ಮೈಸೂರು, ಆಗಸ್ಟ್ 21: ಅರಮನೆ ನಗರಿ ಮೈಸೂರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಇದೇ ಮೊದಲ ಬಾರಿಗೆ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ (TV9 Sweet Home Real Estate Expo 2026) ಆಯೋಜಿಸಲಾಗಿದೆ. 2026ರ ಆಗಸ್ಟ್ 22 ಮತ್ತು 23 ರಂದು ಮೈಸೂರಿನಲ್ಲಿ ನಡೆಯಲಿರುವ ಈ ಪ್ರಮುಖ ರಿಯಲ್ ಎಸ್ಟೇಟ್ ಮೇಳದಲ್ಲಿ ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸಲು ಸುವರ್ಣಾವಕಾಶ ಲಭ್ಯವಾಗಲಿದೆ.

ಶರಣ್ಯ ಫಾರ್ಮ್ಸ್ Sharanya Farms) ಪ್ರಸ್ತುತಪಡಿಸುತ್ತಿರುವ ಈ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ ಜೆಎಸ್ಎಸ್ ಆಸ್ಪತ್ರೆ (JSS Hospital) ಸಮೀಪದ ರಾಜೇಂದ್ರ ಕಲಾ ಮಂದಿರದಲ್ಲಿ (Rajendra Kala Mandir) ನಡೆಯಲಿದೆ. ಇಲ್ಲಿ ವಿಶ್ವಾಸಾರ್ಹ ಡೆವಲಪರ್‌ಗಳು ಮತ್ತು ಬಿಲ್ಡರ್‌ಗಳಿಂದ ನೇರವಾಗಿ ಆಸ್ತಿಗಳನ್ನು ಆಯ್ಕೆ ಮಾಡಬಹುದು. ಜೊತೆಗೆ, ಪ್ರತಿಷ್ಠಿತ ಬ್ಯಾಂಕ್‌ಗಳಿಂದ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯುವ ಅವಕಾಶವೂ ಇದೆ.

ರಿಯಲ್ ಎಸ್ಟೇಟ್ ಹೂಡಿಕೆದಾರರು, ಹೊಸ ಮನೆ ಖರೀದಿಸುವವರು ಮತ್ತು ಆಸ್ತಿ ಮಾರುಕಟ್ಟೆಯಲ್ಲಿ ಆಸಕ್ತಿ ಇರುವವರಿಗೆ ಇದು ಉತ್ತಮ ವೇದಿಕೆಯಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ. ಮೈಸೂರಿನ ನಾಗರಿಕರು ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ ವಿವರ

ದಿನಾಂಕ: ಆಗಸ್ಟ್ 22 ಮತ್ತು 23, ಶನಿವಾರ ಮತ್ತು ಭಾನುವಾರ

ಸಮಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ

ಸ್ಥಳ: ರಾಜೇಂದ್ರ ಕಲಾಮಂದಿರ, ರಾಮಾನುಜ ರಸ್ತೆ, ಜೆಎಸ್​ಎಸ್ ಆಸ್ಪತ್ರೆ ಸಮೀಪ, ಮೈಸೂರು

Mysuru Real Estate Expo: Find Your Dream Home with TV9 & Sharanya Farms

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026

ನಿರೀಕ್ಷೆಗಳು: ಮೈಸೂರು ಹಾಗೂ ಸುತ್ತಮುತ್ತ ನಡೆಯುತ್ತಿರುವ ನೂರಾರು ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳ ಬಗ್ಗೆ ಮಾಹಿತಿ ಪಡೆಯಬಹುದು. ವಿಶ್ವಾಸಾರ್ಹವೆನಿಸಿರುವ ನೂರಾರು ಬಿಲ್ಡರ್​ಗಳು ತಮ್ಮ ಪ್ರಾಜೆಕ್ಟ್​ಗಳನ್ನು ಗ್ರಾಹಕರಿಗೆ ಪರಿಚಯಿಸಲು ಸಿದ್ಧರಿರುತ್ತಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us