Video: ಅಮೆರಿಕದ ರೈಲಿನಲ್ಲಿ ಉಕ್ರೇನ್​ ಯುವತಿಯ ಬರ್ಬರ ಹತ್ಯೆ

Updated on: Sep 07, 2025 | 10:40 AM

ಉಕ್ರೇನ್​​ನಲ್ಲಿ ನಡೆದ ಯುದ್ಧದ ವಿನಾಶದಿಂದಾಗಿ ಅನಿವಾರ್ಯವಾಗಿ ಅಮೆರಿಕಕ್ಕೆ ವಲಸೆ ಬಂದಿದ್ದ ಯುವತಿಯನ್ನು ಅಮೆರಿಕದ ರೈಲಿನಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ವಿಡಿಯೋ ವೈರಲ್ ಆಗಿದೆ. 23 ವರ್ಷದ ಐರಿನಾ ಜರುಟ್ಸ್ಕಾಳನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.ಆಗಸ್ಟ್ 22 ರಂದು ಉತ್ತರ ಕೆರೊಲಿನಾದ ಷಾರ್ಲೆಟ್‌ನಲ್ಲಿ ಘಟನೆ ನಡೆದಿದೆ. ಯುವತಿ ಸಮವಸ್ತ್ರದಲ್ಲಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಾಷಿಂಗ್ಟನ್, ಸೆಪ್ಟೆಂಬರ್ 07: ಉಕ್ರೇನ್​​ನಲ್ಲಿ ನಡೆದ ಯುದ್ಧದ ವಿನಾಶದಿಂದಾಗಿ ಅನಿವಾರ್ಯವಾಗಿ ಅಮೆರಿಕಕ್ಕೆ ವಲಸೆ ಬಂದಿದ್ದ ಯುವತಿಯನ್ನು ಅಮೆರಿಕದ ರೈಲಿನಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ವಿಡಿಯೋ ವೈರಲ್ ಆಗಿದೆ. 23 ವರ್ಷದ ಐರಿನಾ ಜರುಟ್ಸ್ಕಾಳನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.ಆಗಸ್ಟ್ 22 ರಂದು ಉತ್ತರ ಕೆರೊಲಿನಾದ ಷಾರ್ಲೆಟ್‌ನಲ್ಲಿ ಘಟನೆ ನಡೆದಿದೆ. ಯುವತಿ ಸಮವಸ್ತ್ರದಲ್ಲಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆಕೆ ರೈಲು ಹತ್ತಿ ಖಾಲಿ ಸೀಟಿನಲ್ಲಿ ಬಂದು ಕೂರುತ್ತಾರೆ. ಅಲ್ಲೇ ಹಿಂದೆ ಹೊಂಚು ಹಾಕಿ ಕೂತಿದ್ದ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಆಕೆಗೆ ಕುತ್ತಿಗೆಗೆ ಮೂರು ಬಾರಿ ಇರಿದಿದ್ದಾನೆ. ಜರುಟ್ಸ್ಕಾ ಅವರ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡರು ಮತ್ತು ನಂತರ ಅವರು ತಮ್ಮ ಸೀಟಿನಲ್ಲಿ ಕುಸಿದು ಬಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ನಿಲ್ದಾಣದಲ್ಲಿ ಆರೋಪಿ ಇಳಿಸಿದ್ದಾನೆ, ಪೊಲೀಸರು ನಂತರ ಪ್ಲಾಟ್‌ಫಾರ್ಮ್ ಬಳಿ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More