ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ? ಅಂಪೈರ್ ಹೇಳಿದ್ದೇನು?

Updated on: Feb 03, 2026 | 2:05 PM

Usman Tariq's bowling action: ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಮಾತನಾಡಿದ ಅನಿಲ್ ಚೌಧರಿ, ಅವರ ಬೌಲಿಂಗ್​ನಲ್ಲಿ ಯಾವುದೇ ತಪ್ಪು ಅಥವಾ ಅನುಮಾನಾಸ್ಪದತೆಯನ್ನು ಕಂಡು ಬರುತ್ತಿಲ್ಲ. ತಾರಿಕ್ ಅವರ ಬೌಲಿಂಗ್ ಶೈಲಿ ಸ್ವಲ್ಪ ಸೈಡ್-ಆರ್ಮ್ ಆಗಿದ್ದು, ಅವರು ಚೆಂಡನ್ನು ಎಸೆಯಲು ತುಸು ವಿಳಂಬ ಮಾಡುತ್ತಿದ್ದಾರೆ ಅಷ್ಟೇ. ಆದಾಗ್ಯೂ, ಅವರು ಎಲ್ಲಾ ಚೆಂಡುಗಳನ್ನು ಒಂದೇ ರೀತಿಯಲ್ಲಿ ಬೌಲ್ ಮಾಡುತ್ತಿದ್ದಾರೆ.

ಪಾಕಿಸ್ತಾನ್ ತಂಡದ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಆ್ಯಕ್ಷನ್ ಚರ್ಚೆಗೆ ಕಾರಣವಾಗಿದೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಉಸ್ಮಾನ್ ತಾರಿಖ್ ಎಸೆತದಲ್ಲಿ ಆಸ್ಟ್ರೇಲಿಯಾ ದಾಂಡಿಗ ಕ್ಯಾಮರೋನ್ ಗ್ರೀನ್ ಔಟಾಗಿದ್ದರು. ಹೀಗೆ ಔಟಾಗಿ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ್ದ ಗ್ರೀನ್ ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದರು.

ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲೂ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿ ಬಗ್ಗೆ ಚರ್ಚೆ ಶುರುವಾಗಿತ್ತು. ಇದೀಗ ಈ ಚರ್ಚೆಗಳಿಗೆ ಭಾರತದ ಅಂಪೈರ್ ಅನಿಲ್ ಚೌಧರಿ ತೆರೆ ಎಳೆದಿದ್ದಾರೆ.

ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಮಾತನಾಡಿದ ಅನಿಲ್ ಚೌಧರಿ, ಅವರ ಬೌಲಿಂಗ್​ನಲ್ಲಿ ಯಾವುದೇ ತಪ್ಪು ಅಥವಾ ಅನುಮಾನಾಸ್ಪದತೆಯನ್ನು ಕಂಡು ಬರುತ್ತಿಲ್ಲ. ತಾರಿಕ್ ಅವರ ಬೌಲಿಂಗ್ ಶೈಲಿ ಸ್ವಲ್ಪ ಸೈಡ್-ಆರ್ಮ್ ಆಗಿದ್ದು, ಅವರು ಚೆಂಡನ್ನು ಎಸೆಯಲು ತುಸು ವಿಳಂಬ ಮಾಡುತ್ತಿದ್ದಾರೆ ಅಷ್ಟೇ. ಆದಾಗ್ಯೂ, ಅವರು ಎಲ್ಲಾ ಚೆಂಡುಗಳನ್ನು ಒಂದೇ ರೀತಿಯಲ್ಲಿ ಬೌಲ್ ಮಾಡುತ್ತಿದ್ದಾರೆ.

ಐಸಿಸಿ ಬೌಲಿಂಗ್ ಮಾರ್ಗಸೂಚಿಗಳ ಪ್ರಕಾರ, ತಮ್ಮ ತೋಳನ್ನು ಬಗ್ಗಿಸುವುದಿಲ್ಲವಾದ್ದರಿಂದ, ಬೌಲಿಂಗ್ ಶೈಲಿ ಸರಿಯಾಗಿದೆ. ಬೌಲಿಂಗ್ ಶೈಲಿ ಸ್ವಲ್ಪ ವಿಭಿನ್ನವಾಗಿದ್ದರೂ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಂಪೈರ್ ಅನಿಲ್ ಚೌಧರಿ ಹೇಳಿದ್ದಾರೆ.

 

Follow Us