VIDEO: ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ ಸಿಕ್ತು 20 ಸಾವಿರ ರೂ..!

Updated on: Mar 05, 2026 | 10:53 AM

Tape Ball Cricket: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ತಂಡವು 6 ಓವರ್​ಗಳಲ್ಲಿ 127 ರನ್ ಬಾರಿಸಿದ್ದರು. ಈ ಗುರಿಯನ್ನು ಬೆನ್ನತ್ತಿದ ಸಿಯಾಲ್​ಕೋಟ್ ತಂಡ 6 ಓವರ್​ಗಳಲ್ಲಿ ಕೇವಲ 70 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಮುಲ್ತಾನ್ 57 ರನ್​ಗಳ ಜಯ ಸಾಧಿಸಿದೆ.

ಪಂದ್ಯ ವೀಕ್ಷಿಸಲು ಹೋಗಿ ಅದ್ಭುತ ಕ್ಯಾಚ್ ಹಿಡಿದು ಪ್ರೇಕ್ಷಕನೋರ್ವ 20 ಸಾವಿರ ರೂ. ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಇಂತಹದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಪಾಕಿಸ್ತಾನದ ಟೇಪ್​ ​​ಬಾಲ್ ಚಾಂಪಿಯನ್​ಶಿಪ್ ಟೂರ್ನಿ. ಈ ಪಂದ್ಯದಲ್ಲಿ ಮುಲ್ತಾನ್ ಹಾಗೂ ಸಿಯಾಕೋಟ್ ತಂಡಗಳು ಮುಖಾಮುಖಿಯಾಗಿದ್ದವು.

ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಪರ ವಿಕ್ಕಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪ್ರದರ್ಶನದೊಂದಿಗೆ ಬಾರಿಸಿದ ಸಿಕ್ಸರ್​ವೊಂದು ಪ್ರೇಕ್ಷಕರಿದ್ದ ಗ್ಯಾಲರಿಗೆ ಸಾಗಿತ್ತು. ಈ ವೇಳೆ ವ್ಯಕ್ತಿಯೋರ್ವ ಓಡಿ ಬಂದು ಚೆಂಡು ಹಿಡಿದಿದ್ದಾರೆ.

ಓಡಿ ಬಂದ ರಭಸಕ್ಕೆ ನಿಯಂತ್ರಣ ತಪ್ಪಿದರೂ ಗ್ಯಾಲರಿ ವಿಭಜಿಸಲು ಹಾಕಿದ್ದ ಮರಗಳ ಲೈನ್​ ನಡುವೆ ಹಾರಿದ್ದಾರೆ. ಇದಾಗ್ಯೂ ಚೆಂಡನ್ನು ಕೈ ಬಿಟ್ಟಿರಲಿಲ್ಲ. ಈ ಅದ್ಭುತ ಕ್ಯಾಚ್ ನೋಡಿ ಪಾಕಿಸ್ತಾನ್ ಟೇಪ್ ​ಬಾಲ್ ಚಾಂಪಿಯನ್​ಶಿಪ್ ಆಯೋಜಕರು ಆತನಿಗೆ 20 ಸಾವಿರ ರೂ. (PKR) ಬಹುಮಾನ ನೀಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ತಂಡವು 6 ಓವರ್​ಗಳಲ್ಲಿ 127 ರನ್ ಬಾರಿಸಿದ್ದರು. ಈ ಗುರಿಯನ್ನು ಬೆನ್ನತ್ತಿದ ಸಿಯಾಲ್​ಕೋಟ್ ತಂಡ 6 ಓವರ್​ಗಳಲ್ಲಿ ಕೇವಲ 70 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಮುಲ್ತಾನ್ 57 ರನ್​ಗಳ ಜಯ ಸಾಧಿಸಿದೆ.

Published on: Mar 05, 2026 10:52 AM
Follow Us