ಫೋನ್ ಸಂಭಾಷಣೆ ವಿವಾದದಿಂದ ಅಧೀರರಾಗದ ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಮುಂದುವರಿಸಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ

Updated on: Nov 22, 2023 | 1:14 PM

ಒಬ್ಬ ವ್ಯಕ್ತಿ ಪ್ರಾಯಶಃ ಗ್ರಾಮ ಪಂಚಾಯಿತಿ ಸದಸ್ಯ ಅಥವಾ ಆಧ್ಯಕ್ಷನಿರಬಹುದು; ತನ್ನ ಪಾಡಿಗೆ ತಾನು ಮೈಕ್ ಹಿಡಿದು ಮಾತಾಡುತ್ತಿದ್ದರೆ ಯತೀಂದ್ರ ಜನರ ತಮ್ಮಲ್ಲಿಗೆ ತೆಗೆದುಕೊಂಡು ಬರುವ ಅರ್ಜಿ, ಮನವಿ ಪತ್ರಗಳ ಮೇಲೆ ಸಹಿ ಹಾಕುತ್ತಿದ್ದಾರೆ. ಕ್ಷೇತ್ರದ ಕುಂದು ಕೊರತೆಗಳನ್ನು ವಿಚಾರಿಸಲು ಮಗನಿಗೆ ಹೇಳಿದ್ದೇನೆ ಅಂತ ಸಿದ್ದರಾಮಯ್ಯ ಹೇಳಿರುವುದರಿಂದ ಅರ್ಜಿಗಳ ಮೇಲೆ ಅವರು ಮಾಡುವ ಸಹಿಗಳಿಗೆ ತುಂಬಾನೇ ಮಹತ್ವ ಇರುವಂತಿದೆ.

ಮೈಸೂರು: ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜೊತೆ ಅವರ ಮಗ ಮತ್ತು ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಫೋನಲ್ಲಿ ಮಾತಾಡಿದ್ದು ವಿವಾದದ ರೂಪ ತಳೆದು ವಿರೋಧ ಪಕ್ಷದ ನಾಯಕರು (leaders of opposition) ಆಡಳಿತಲ್ಲಿ ಪುತ್ರನ ಹಸ್ತಕ್ಷೇಪ ಅಂತ ಆರೋಪಗಳನ್ನು ಮಾಡಿದಾಗ್ಯೂ ಯತೀಂದ್ರ ಧೃತಿಗೆಟ್ಟಂತಿಲ್ಲ. ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಮಾಡುವುದನ್ನು ಅವರು ಮುಂದುವರಿಸಿದ್ದಾರೆ. ಜಿಲ್ಲೆಯ ಗ್ರಾಮವೊಂದರಲ್ಲಿ ಅವರು ಜನಸಂಪರ್ಕ ಸಬೆ ನಡೆಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಒಬ್ಬ ವ್ಯಕ್ತಿ ಪ್ರಾಯಶಃ ಗ್ರಾಮ ಪಂಚಾಯಿತಿ ಸದಸ್ಯ ಅಥವಾ ಆಧ್ಯಕ್ಷನಿರಬಹುದು; ತನ್ನ ಪಾಡಿಗೆ ತಾನು ಮೈಕ್ ಹಿಡಿದು ಮಾತಾಡುತ್ತಿದ್ದರೆ ಯತೀಂದ್ರ ಜನರ ತಮ್ಮಲ್ಲಿಗೆ ತೆಗೆದುಕೊಂಡು ಬರುವ ಅರ್ಜಿ, ಮನವಿ ಪತ್ರಗಳ ಮೇಲೆ ಸಹಿ ಹಾಕುತ್ತಿದ್ದಾರೆ. ಕ್ಷೇತ್ರದ ಕುಂದು ಕೊರತೆಗಳನ್ನು ವಿಚಾರಿಸಲು ಮಗನಿಗೆ ಹೇಳಿದ್ದೇನೆ ಅಂತ ಸಿದ್ದರಾಮಯ್ಯ ಹೇಳಿರುವುದರಿಂದ ಅರ್ಜಿಗಳ ಮೇಲೆ ಅವರು ಮಾಡುವ ಸಹಿಗಳಿಗೆ ತುಂಬಾನೇ ಮಹತ್ವ ಇರುವಂತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.