ಹತ್ತಾರು ಲಿಸ್ಟ್ ಗಳನ್ನು ಸಿಎಂಗೆ ನೀಡುತ್ತೇನೆ, ಯಾವುದರ ಬಗ್ಗೆ ಮಾತಾಡಿದ್ದು ಅಂತ ಸ್ಪಷ್ಟನೆ ನೀಡುವ ಅಗತ್ಯ ನನಗಿಲ್ಲ: ಯತೀಂದ್ರ ಸಿದ್ದರಾಮಯ್ಯ

ಹತ್ತಾರು ಲಿಸ್ಟ್ ಗಳನ್ನು ಸಿಎಂಗೆ ನೀಡುತ್ತೇನೆ, ಯಾವುದರ ಬಗ್ಗೆ ಮಾತಾಡಿದ್ದು ಅಂತ ಸ್ಪಷ್ಟನೆ ನೀಡುವ ಅಗತ್ಯ ನನಗಿಲ್ಲ: ಯತೀಂದ್ರ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 18, 2023 | 12:07 PM

ಯಾವ ಲಿಸ್ಟ್ ಬಗ್ಗೆಯಾದರೂ ತಾನು ಮಾತಾಡಬಹುದು ಅದನ್ನು ಟ್ರಾನ್ಸ್ ಫರ್ ಲಿಸ್ಟ್ ಅಂತ ಹೇಗೆ ಹೇಳುತ್ತಾರೆ ಎಂದು ಯತೀಂದ್ರ ಪ್ರಶ್ನಿಸಿದರು. ಹಾಗಾದರೆ, ನೀವು ಮಾತಾಡಿದ್ದು ಯಾವ ಲಿಸ್ಟ್ ಬಗ್ಗೆ ಅಂತ ಪತ್ರಕರ್ತರು ಕೇಳಿದಾಗ ಸಿಡುಕುವ ಯತೀಂದ್ರ; ಅಸಲಿಗೆ ಲಿಸ್ಟ್ ಬಗ್ಗೆ ಮಾಧ್ಯಮಗಳಿಗಾಗಲೀ, ವಿರೋಧ ಪಕ್ಷದವರಿಗಾಗಲೀ ಸ್ಪಷ್ಟನೆ ನೀಡುವ ಅಗತ್ಯವೇ ತನಗಿಲ್ಲ ಎನ್ನುತ್ತಾರೆ.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜೊತೆ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಪೋನಲ್ಲಿ ಮಾತಾಡಿದ್ದು, ಮಾತಾಡುವಾಗ ಮಹಾದೇವಪ್ಪ (Mahadevappa) ಎನ್ನುವವರ ಹೆಸರು ಉಲ್ಲೇಖಿಸಿದ್ದು ರಾಜ್ಯದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಯತೀಂದ್ರ ವಿಷಯದ ಬಗ್ಗೆ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮುಖ್ಯಮಂತ್ರಿಯವರಿಗೆ ಕೊಟ್ಟ ಲಿಸ್ಟ್ ವರ್ಗಾವಣೆಗಳಿಗೆ ಸಂಬಂಧಿಸಿದ್ದು ಅಂತ ವಿರೋಧ ಪಕ್ಷದ ನಾಯಕರು ಯಾವ ಆಧಾರದಲ್ಲಿ ಹೇಳುತ್ತಾರೆ? ನಿಗಮ, ಮಂಡಳಿಗಳಿಗೆ ಪದಾಧಿಕಾರಿಗಳು, ಸಿಎಸ್ ಆರ್ ಫಂಡ್, ಬೇರೆ ಬೇರೆ ಕಮಿಟಿಗಳಿಗೆ ಪಕ್ಷದ ಕಾರ್ಯಕರ್ತರ ನೇಮಕ ಇನ್ನೂ ಹತ್ತು ಹಲವು ಲಿಸ್ಟ್ ಗಳನ್ನು ನಾನು ಮುಖ್ಯಮಂತ್ರಿಯವರಿಗೆ ನೀಡುತ್ತಿರುತ್ತೇನೆ. ಯಾವ ಲಿಸ್ಟ್ ಬಗ್ಗೆಯಾದರೂ ತಾನು ಮಾತಾಡಬಹುದು ಅದನ್ನು ಟ್ರಾನ್ಸ್ ಫರ್ ಲಿಸ್ಟ್ ಅಂತ ಹೇಗೆ ಹೇಳುತ್ತಾರೆ ಎಂದು ಯತೀಂದ್ರ ಪ್ರಶ್ನಿಸಿದರು. ಹಾಗಾದರೆ, ನೀವು ಮಾತಾಡಿದ್ದು ಯಾವ ಲಿಸ್ಟ್ ಬಗ್ಗೆ ಅಂತ ಪತ್ರಕರ್ತರು ಕೇಳಿದಾಗ ಸಿಡುಕುವ ಯತೀಂದ್ರ; ಅಸಲಿಗೆ ಲಿಸ್ಟ್ ಬಗ್ಗೆ ಮಾಧ್ಯಮಗಳಿಗಾಗಲೀ, ವಿರೋಧ ಪಕ್ಷದವರಿಗಾಗಲೀ ಸ್ಪಷ್ಟನೆ ನೀಡುವ ಅಗತ್ಯವೇ ತನಗಿಲ್ಲ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ