IND vs AUS Final: ವಿಶ್ವಕಪ್ ಫೈನಲ್​ಗೆ ಅಭ್ಯಾಸ ಶುರುಮಾಡಿದ ಭಾರತೀಯ ಆಟಗಾರರು: ವಿಡಿಯೋ

IND vs AUS Final: ವಿಶ್ವಕಪ್ ಫೈನಲ್​ಗೆ ಅಭ್ಯಾಸ ಶುರುಮಾಡಿದ ಭಾರತೀಯ ಆಟಗಾರರು: ವಿಡಿಯೋ

Vinay Bhat
|

Updated on: Nov 18, 2023 | 12:41 PM

India vs Australia, ICC ODI World Cup Final 2023: ಐಸಿಸಿ ಏಕದಿನ ವಿಶ್ವಕಪ್ 2023 ರ ಅಂತಿಮ ಫೈನಲ್ ಪಂದ್ಯವು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಫೈನಲ್ ಫೈಟ್​ಗೆ ಟೀಮ್ ಇಂಡಿಯಾ ಆಟಗಾರರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್ 2023 ರ ಅಂತಿಮ ಫೈನಲ್ ಪಂದ್ಯವು ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ, ನವೆಂಬರ್ 19 ರಂದು ನಡೆಯಲಿದೆ. ಪಿಚ್ ಸಿದ್ಧಪಡಿಸುವುದರಿಂದ ಹಿಡಿದು ಹಲವು ವಿವಿಐಪಿಗಳು ಮತ್ತು ಸುಮಾರು 1 ಲಕ್ಷ ಪ್ರೇಕ್ಷಕರಿಗೆ ಮನೋರಂಜನೆ ನೀಡಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇತ್ತ ಟೀಮ್ ಇಂಡಿಯಾ ಆಟಗಾರರು ಕೂಡ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಮೋದಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ – ಬೌಲಿಂಗ್ ಜೊತೆಗೆ ಫೀಲ್ಡಿಂಗ್ ಅಭ್ಯಾಸ ಕೂಡ ನಡೆಸುತ್ತಿದ್ದಾರೆ. ಭಾರತೀಯ ಆಟಗಾರರು ಬಸ್​ನಲ್ಲಿ ಅಭ್ಯಾಸಕ್ಕೆ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಟೀಮ್ ಇಂಡಿಯಾಕ್ಕೆ ಇದು ಸೇಡಿನ ಪಂದ್ಯ ಕೂಡ ಹೌದು. 2003 ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಕಾಯುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ