ಟೋಲ್ ತಪ್ಪಿಸಲು ಹೋಗಿ ಟೋಲ್ ಸಿಬ್ಬಂದಿಯನ್ನೇ ಗುದ್ದಿಕೊಂಡು ಹೋದ ಕಾರು ಚಾಲಕ, ವಿಡಿಯೋ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಏರ್‌ಪೋರ್ಟ್ ಟೋಲ್‌ನಲ್ಲಿ ಶುಲ್ಕ ತಪ್ಪಿಸಲು ಕಾರು ಚಾಲಕ ಸಿಬ್ಬಂದಿಯನ್ನೇ ಗುದ್ದಿಕೊಂಡು ಎಸ್ಕೇಪ್ ಆಗಿದ್ದಾನೆ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಚಾಲಕನ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು, ನ.18: ಬೆಂಗಳೂರಿನ ದೇವನಹಳ್ಳಿಯಲ್ಲಿ ಟೋಲ್ ತಪ್ಪಿಸಲು ಹೋಗಿ ಕಾರು ಚಾಲಕ ಟೋಲ್ ಸಿಬ್ಬಂದಿಯನ್ನೇ ಗುದ್ದಿಕೊಂಡು ಹೋದ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಏರ್‌ಪೋರ್ಟ್ ಟೋಲ್‌ನಲ್ಲಿ ಶುಲ್ಕ ತಪ್ಪಿಸಲು ಕಾರು ಚಾಲಕ ಸಿಬ್ಬಂದಿಯನ್ನೇ ಗುದ್ದಿಕೊಂಡು ಎಸ್ಕೇಪ್ ಆಗಿದ್ದಾನೆ.
ಎಂದಿನಂತೆ ಟೋಲ್ ಸಿಬ್ಬಂದಿ ಶುಲ್ಕ ವಸೂಲಿ ಮಾಡ್ತಿದ್ರು. ವಿಮಾನ ನಿಲ್ದಾಣ ಕಡೆಯಿಂದ ಬಂದ ಟಾಟಾ ಇಂಡಿಕಾ ಕಾರು ಬಸ್‌ವೊಂದರ ಹಿಂದೆಯೇ ನಿಂತಿತ್ತು. ಬಸ್ ಜೊತೆಯಲ್ಲೇ ಟೋಲ್ ತಪ್ಪಿಸಿ ಮುನ್ನಗ್ಗಲು ಕಾರು ಚಾಲಕ ಸ್ಕೆಚ್ ಹಾಕಿದ್ದ. ಅದರಂತೆ ಬಸ್ ತೆರಳುತ್ತಿದ್ದಂತೆ ಹಿಂದೆಯೇ ನುಗ್ಗಿದ್ದ. ಅಲರ್ಟ್ ಆಗಿದ್ದ ಟೋಲ್ ಸಿಬ್ಬಂದಿ ಕಾರು ತಡೆಯಲು ಯತ್ನಿಸಿದ್ದಾರೆ. ಆದ್ರೆ, ಟೋಲ್ ಸಿಬ್ಬಂದಿ ಮೇಲೆಯೇ ಚಾಲಕ ಕಾರು ಹತ್ತಿಸಿದ್ದಾನೆ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಚಾಲಕನ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos