Sign In

By signing in or creating an account, you agree with Associated Broadcasting Company's Terms & Conditions and Privacy Policy.

ATM ನಲ್ಲಿ ಹಣ ಬರಲಿಲ್ಲವೆಂದು ಸಹಾಯ ಕೋರಿದರೆ ಆ ಮೋಸಗಾರ ಏನು ಮಾಡಿದ ನೋಡಿ

ATM ನಲ್ಲಿ ಹಣ ಬರಲಿಲ್ಲವೆಂದು ಸಹಾಯ ಕೋರಿದರೆ ಆ ಮೋಸಗಾರ ಏನು ಮಾಡಿದ ನೋಡಿ

ಸಾಧು ಶ್ರೀನಾಥ್​
|

Updated on:Nov 18, 2023 | 2:48 PM

ಅಪರಿಚಿತನು, ಮಹಿಳೆ ನೀಡಿದ ಎಟಿಎಂ ಕಾರ್ಡ್ ಅನ್ನು ಎರಡು-ಮೂರು ಬಾರಿ ಬಳಸಲು ಪ್ರಯತ್ನಿಸಿ, ಅದು ಕೆಲಸ ಮಾಡುತ್ತಿಲ್ಲ ಎಂದಿದ್ದಾನೆ. ಆದರೆ ಈ ಮಧ್ಯೆ, ಹುಷಾರಾಗಿ ತನ್ನಲ್ಲಿದ್ದ ಇನ್ನೊಂದು ಎಟಿಎಂ ಕಾರ್ಡ್ ತೆಗೆದು ಮಹಿಳೆಗೆ ಕೊಟ್ಟಿದ್ದಾನೆ. ಅಪರಿಚಿತನ ಮೋಸದ ವಿಚಾರ ತಿಳಿಯದೆ ಮಹಿಳೆಯು ಯುವಕ ನೀಡಿದ ಎಟಿಎಂ ಕಾರ್ಡ್ ತೆಗೆದುಕೊಂಡು ಕೇಂದ್ರದಿಂದ ಹೊರ ಹೋಗಿದ್ದಾರೆ.

ಅನಂತಪುರ ಜಿಲ್ಲೆಯ ಗುತ್ತಿ ಪಟ್ಟಣದಲ್ಲಿ (Gooty in Anantapur) ಆಂಧ್ರ ಪ್ರದೇಶ ಗಾಮೀಣ ಪ್ರಗತಿ ಬ್ಯಾಂಕ್ (APGPB) ಗೆ ಸೇರಿದ​​ ಎಟಿಎಂ ಕೇಂದ್ರದಲ್ಲಿ (ATM Center) ಮುನೀಂದ್ರ ಎಂಬ ಮಹಿಳೆಗೆ ಸೇರಿದ ಎಟಿಎಂ ಕಾರ್ಡ್‌ ಅನ್ನು ಅಪರಿಚಿತ ವ್ಯಕ್ತಿಯೊಬ್ಬ ಬಳಸಿ 25 ಸಾವಿರ ರೂ. ನಗದನ್ನು ಡ್ರಾ ಮಾಡಿ ಪರಾರಿಯಾಗಿದ್ದಾನೆ. ತಕ್ಷಣವೇ, ತಾನು ವಂಚನೆಗೆ (Cheat) ಒಳಗಾಗಿರುವುದು ಅರಿವಾಗಿ ಖಾತೆದಾರ ಮಹಿಳೆಯು ತಾನು ಮೋಸ ಹೋಗಿರುವುದರ ಬಗ್ಗೆ ಗುತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಟಿಎಂ ಕಾರ್ಡ್ ಬಳಸಿ ಹಣ ಪಡೆಯಲು ಯತ್ನಿಸುತ್ತಿದ್ದ ಮಹಿಳೆ ಹಣ ಸಿಗುತ್ತಿಲ್ಲ ಎಂದು ಪಕ್ಕದಲ್ಲಿಯೇ ಇದ್ದ ಅ ಅಪರಿಚಿತನಿಗೆ ತೋರಿಸಿ, ಹಣ ಡ್ರಾ ಮಾಡಿ ಕೊಡುವಂತೆ ಹೇಳಿದ್ದಾರೆ.

ಇನ್ನು ಅಪರಿಚಿತನು, ಮಹಿಳೆ ನೀಡಿದ ಎಟಿಎಂ ಕಾರ್ಡ್ ಅನ್ನು ಎರಡು-ಮೂರು ಬಾರಿ ಬಳಸಲು ಪ್ರಯತ್ನಿಸಿ, ಅದು ಕೆಲಸ ಮಾಡುತ್ತಿಲ್ಲ ಎಂದಿದ್ದಾನೆ. ಆದರೆ ಈ ಮಧ್ಯೆ, ಹುಷಾರಾಗಿ ತನ್ನಲ್ಲಿದ್ದ ಇನ್ನೊಂದು ಎಟಿಎಂ ಕಾರ್ಡ್ ತೆಗೆದು ಮಹಿಳೆಗೆ ಕೊಟ್ಟಿದ್ದಾನೆ. ಅಪರಿಚಿತನ ಮೋಸದ ವಿಚಾರ ತಿಳಿಯದೆ ಮಹಿಳೆಯು ಯುವಕ ನೀಡಿದ ಎಟಿಎಂ ಕಾರ್ಡ್ ತೆಗೆದುಕೊಂಡು ಕೇಂದ್ರದಿಂದ ಹೊರ ಹೋಗಿದ್ದಾರೆ.

ಅವರು ಆ ಕಡೆ ಕೇಂದ್ರದಿಂದ ಹೊರಹೋಗುತ್ತಿದ್ದಂತೆ ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್‌ನಿಂದ 25,000 ರೂ. ಡ್ರಾ ಮಾಡಿಕೊಂಡಿದ್ದಾನೆ. ತಕ್ಷಣ ಎಚ್ಚೆತ್ತ ಸಂತ್ರಸ್ತ ಗುತ್ತಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಎಟಿಎಂನಲ್ಲಿ ಮಹಿಳೆಯನ್ನು ವಂಚಿಸಿ ಕಾರ್ಡ್ ಬದಲಿಸಿ ಹಣ ಡ್ರಾ ಮಾಡುತ್ತಿರುವ ದೃಶ್ಯಗಳು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ಮುಂದಿನ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: Nov 18, 2023 02:45 PM