ನೆಲಮಂಗಲದಿಂದ ತುಮಕೂರುವರೆಗೆ ರಾಷ್ಟ್ರೀಯ ಹೆದ್ದಾರಿ ವೀಕ್ಷಿಸಿದ ಕೆಂದ್ರ ಸಚಿವ ವಿ ಸೋಮಣ್ಣ

ಅರುಣ್​ ಕುಮಾರ್​ ಬೆಳ್ಳಿ

Updated on: Nov 12, 2024 | 1:27 PM

ತುಮಕೂರು ಸಂಸದರಾಗಿರುವ ಸೋಮಣ್ಣ ಅಸಲಿಗೆ ನೆಲಮಂಗಲದಿಂದ ತುಮಕೂರುವರೆಗಿನ ಹೆದ್ದಾರಿಯನ್ನು ವೀಕ್ಷಿಸಿದರು. ಈ ಹೆದ್ದಾರಿಯನ್ನು ದಶಪಥಗಳಲ್ಲಿ ವಿಸ್ತರಿಸುತ್ತಿರುವುದರಿಂದ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ ಹೆದ್ದಾರಿ ಕಾಮಗಾರಿ ವಿಳಂಬಗೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ

ನೆಲಮಂಗಲ: ಕೇಂದ್ರ ಸಚಿವ ವಿ ಸೋಮಣ್ಣ ಕೆಲಸಗಾರ ಅಂತ ಅವರ ರಾಜಕೀಯ ವೈರಿಗಳೂ ಹೇಳುತ್ತಾರೆ. ಇವತ್ತು ಅವರು ಹೆಚ್ಚು ಅಪಘಾತಗಳನ್ನು ಕಾಣುವ ರಾಷ್ಟ್ರೀಯ ಹೆದ್ದಾರಿ 48 ಅನ್ನು ವೀಕ್ಷಿಸಿದರು. ನಮ್ಮ ವರದಿಗಾರ ನೀಡುವ ಮಾಹಿತಿ ಪ್ರಕಾರ ಬೇಗೂರು, ಕುಲುವನಹಳ್ಳಿ, ಹನುಮಂತಪುರ, ಹಳೆನಿಜಗಲ್ ಮತ್ತು ಬಿಲ್ಲಿನಕೋಟೆ ಗ್ರಾಮಗಳ ಜನರನ್ನು ಭೇಟಿಯಾಗಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದರು. ದಶಪಥ ಹೆದ್ದಾರಿ ವಿಳಂಬಗೊಳ್ಳುತ್ತಿರವುದಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದೇವನಹಳ್ಳಿ ಕಂಟೋನ್ಮೆಂಟ್ ರೈಲು ನಿಲ್ದಾಣ ನವೀಕರಣ ಕಾಮಗಾರಿ ಪರಿಶೀಲಿಸಿದ ಅಶ್ವಿನಿ ವೈಷ್ಣವ್: ಸಚಿವ ವಿ ಸೋಮಣ್ಣ ಸಾಥ್

Published on: Nov 12, 2024 01:17 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.