Loading video

ರವಿಚಂದ್ರನ್ ಮನೆ ಮುಂದೆ ಅಭಿಮಾನಿಗಳ ದಂಡು, ರವಿಮಾಮನ ನೋಡಲು ದೂರದೂರದಿಂದ ಬಂದ ಅಭಿಮಾನಿಗಳು

|

Updated on: May 30, 2023 | 11:37 PM

V Ravichandran: ನಟ ರವಿಚಂದ್ರನ್ ಹುಟ್ಟುಹಬ್ಬ ಇಂದು (ಮೇ 30) ರಾಜ್ಯದ ಮೂಲೆ-ಮೂಲೆಗಳಿಂದ ಹಲವು ಅಭಿಮಾನಿಗಳು ಅವರನ್ನು ಕಾಣಲು ಅವರ ಮನೆಯ ಬಳಿ ಬಂದಿದ್ದರು.

ಕನ್ನಡ ಚಿತ್ರರಂಗದ ಕನಸುಗಾರ ವಿ ರವಿಚಂದ್ರನ್ (V Ravichandran) ಹುಟ್ಟುಹಬ್ಬ ಇಂದು (ಮೇ 30). ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಅಭಿಮಾನಿಗಳ ದಂಡು ರವಿಚಂದ್ರನ್ ಮನೆಯ ಮುಂದೆ ನೆರೆದಿತ್ತು. ರಾಜ್ಯದ ವಿವಿದೆಡೆಗಳಿಂದ ಅಭಿಮಾನಿಗಳು ರವಿಚಂದ್ರನ್ ಕಾಣಲು ಆಗಮಿಸಿದ್ದರು. ಕೆಲವರಂತೂ ಎರಡು ದಿನಗಳಿಂದಲೂ ತಾವು ರವಿಚಂದ್ರನ್ ಕಾಣಲು ಕಾಯುತ್ತಿರುವುದಾಗಿ ಹೇಳಿದರು. ರವಿಚಂದ್ರನ್ ಬಾರದೆ ಇರುವ ಬಗ್ಗೆ ಕೆಲವು ಅಭಿಮಾನಿಗಳು ಅಸಮಾಧಾನವನ್ನೂ ವ್ಯಕ್ತಪಡಿಸಿದರು. ಯಾರು ಏನೆಂದರು ಇಲ್ಲಿ ನೋಡಿ…

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ