ವರ್ತೂರು ಸಂತೋಷ್​ ಜೈಲಿನಿಂದ ಎಸ್ಕೇಪ್​ ಆಗಿದ್ದು ಹೇಗೆ? ಇಲ್ಲಿದೆ ವಿಡಿಯೋ

|

Updated on: Nov 24, 2023 | 6:04 PM

ಇಷ್ಟು ಸೀಸನ್​ಗಳಲ್ಲಿ ‘ಬಿಗ್​ ಬಾಸ್​’ ಜೈಲಿನಿಂದ ಈ ರೀತಿ ಯಾರೂ ಎಸ್ಕೇಪ್​ ಆಗಿರಲಿಲ್ಲ. ಇದಕ್ಕೆ ಏನು ಶಿಕ್ಷೆ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ವರ್ತೂರು ಸಂತೋಷ್​ ಅವರ ಈ ಕೃತ್ಯಕ್ಕೆ ತುಕಾಲಿ ಸಂತೋಷ್​ ಕುಮ್ಮಕ್ಕು ನೀಡಿದ್ದಾರೆ. ಹಾಗಾಗಿ ಅವರಿಗೂ ಶಿಕ್ಷೆ ಆಗುವ ಸಾಧ್ಯತೆ ಇದೆ.

ಬಿಗ್​ ಬಾಸ್ (Bigg Boss Kannada) ಮನೆಯಲ್ಲಿ ಕಳಪೆ ಎಂಬ ಹಣೆಪಟ್ಟಿ ಪಡೆದವರು ಜೈಲು ಸೇರಬೇಕು. 7ನೇ ವಾರದಲ್ಲಿ ವರ್ತೂರು ಸಂತೋಷ್​ ಕಳಪೆ ಆಗಿದ್ದಾರೆ. ಹಾಗಾಗಿ ಅವರನ್ನು ಜೈಲಿಗೆ ಹಾಕಲಾಗಿದೆ. ಜೈಲು ಶಿಕ್ಷೆಯ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ ವರ್ತೂರು ಸಂತೋಷ್​ (Varthur Santhosh) ಅವರು ಎಸ್ಕೇಪ್​ ಆಗಿದ್ದಾರೆ. ಇದರಿಂದ ಎಲ್ಲರಿಗೂ ಶಾಕ್​ ಆಗಿದೆ. ಈ ಪ್ರೋಮೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಬಿಗ್​ ಬಾಸ್​ನಲ್ಲಿ ನಿಯಮಗಳು ಸಖತ್​ ಕಠಿಣವಾಗಿರುತ್ತವೆ. ಈಗ ಅವರು ಅದನ್ನು ಉಲ್ಲಂಘನೆ ಮಾಡಿದ್ದಾರೆ. ಈ ತಪ್ಪಿಗಾಗಿ ಅವರಿಗೆ ಕಠಿಣ ಶಿಕ್ಷೆ ಆಗುವ ಸಾಧ್ಯತೆ ದಟ್ಟವಾಗಿದೆ. ಈವರೆಗೂ ಜೈಲಿನಿಂದ ಈ ರೀತಿ ಯಾರೂ ಎಸ್ಕೇಪ್​ ಆಗಿರಲಿಲ್ಲ. ಇದಕ್ಕೆ ಏನು ಶಿಕ್ಷೆ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ವರ್ತೂರು ಸಂತೋಷ್​ ಅವರ ಈ ಕೃತ್ಯಕ್ಕೆ ತುಕಾಲಿ ಸಂತೋಷ್​ (Tukali Santhosh) ಕುಮ್ಮಕ್ಕು ನೀಡಿದ್ದಾರೆ. ಹಾಗಾಗಿ ಅವರಿಗೂ ಶಿಕ್ಷೆ ಆಗುವ ಸಾಧ್ಯತೆ ಇದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ 24 ಗಂಟೆಯೂ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋ ನೋಡಬಹುದು. ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಎಪಿಸೋಡ್​ ಪ್ರಸಾರ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on