Video: ಅಮೆರಿಕದಲ್ಲಿ ಮನೆಗಳ ಮೇಲೆ ವಿಮಾನ ಪತನ

Updated on: Feb 01, 2025 | 8:18 AM

ಅಮೆರಿಕದ ಫಿಲಡೆಲ್ಫಿಯಾದಲ್ಲಿ ಮತ್ತೊಮ್ಮೆ ವಿಮಾನ ದುರಂತ ಸಂಭವಿಸಿದೆ. ಸಣ್ಣ ವಿಮಾನವೊಂದು ಪತನಗೊಂಡ ನಂತರ ಹಲವು ಮನೆಗಳಿಗೆ ಬೆಂಕಿ ಬಿದ್ದಿದೆ. ಈ ವಿಮಾನದಲ್ಲಿ ಇಬ್ಬರು ಇದ್ದರು. ಶುಕ್ರವಾರ ಸಂಜೆ ರೂಸ್‌ವೆಲ್ಟ್ ಮಾಲ್ ಬಳಿ ಈ ಅಪಘಾತ ಸಂಭವಿಸಿದೆ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಹೇಳಿದೆ. ಪತನಗೊಂಡ ವಿಮಾನವು ಲಿಯರ್ ಜೆಟ್ 55 ವಿಮಾನವಾಗಿದೆ. ವಿಮಾನವು ಸ್ಪ್ರಿಂಗ್‌ಫೀಲ್ಡ್ ಬ್ರಾನ್ಸನ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿತ್ತು. ವಿಮಾನ ಅಪಘಾತದ ನಂತರ ಬಿದ್ದ ಅವಶೇಷಗಳಿಂದ ಕೆಲವು ಮನೆಗಳು ಮತ್ತು ಅನೇಕ ಕಾರುಗಳು ಬೆಂಕಿಗೆ ಆಹುತಿಯಾಗಿವೆ

ಅಮೆರಿಕದ ಫಿಲಡೆಲ್ಫಿಯಾದಲ್ಲಿ ಮತ್ತೊಮ್ಮೆ ವಿಮಾನ ದುರಂತ ಸಂಭವಿಸಿದೆ. ಸಣ್ಣ ವಿಮಾನವೊಂದು ಪತನಗೊಂಡ ನಂತರ ಹಲವು ಮನೆಗಳಿಗೆ ಬೆಂಕಿ ಬಿದ್ದಿದೆ. ಈ ವಿಮಾನದಲ್ಲಿ ಇಬ್ಬರು ಇದ್ದರು. ಶುಕ್ರವಾರ ಸಂಜೆ ರೂಸ್‌ವೆಲ್ಟ್ ಮಾಲ್ ಬಳಿ ಈ ಅಪಘಾತ ಸಂಭವಿಸಿದೆ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಹೇಳಿದೆ.

ಪತನಗೊಂಡ ವಿಮಾನವು ಲಿಯರ್ ಜೆಟ್ 55 ವಿಮಾನವಾಗಿದೆ. ವಿಮಾನವು ಸ್ಪ್ರಿಂಗ್‌ಫೀಲ್ಡ್ ಬ್ರಾನ್ಸನ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿತ್ತು. ವಿಮಾನ ಅಪಘಾತದ ನಂತರ ಬಿದ್ದ ಅವಶೇಷಗಳಿಂದ ಕೆಲವು ಮನೆಗಳು ಮತ್ತು ಅನೇಕ ಕಾರುಗಳು ಬೆಂಕಿಗೆ ಆಹುತಿಯಾಗಿವೆ. ವಿಮಾನವು ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ಟೇಕಾಫ್ ಆಗಿದ್ದು, ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ರಾಡಾರ್‌ನಿಂದ ಕಣ್ಮರೆಯಾಯಿತು . ವಿಮಾನದಲ್ಲಿರುವ ಇಬ್ಬರು ಬದುಕಿದ್ದಾರೋ ಇಲ್ಲವೋ ಎಂಬುದರ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More