ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ

Updated on: Mar 26, 2025 | 11:47 AM

ಅತಿ ವೇಗದಲ್ಲಿ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದಿರುವ ಘಟನೆ ಲಕ್ನೋದ ಲುಲು ಮಾಲ್ ಬಳಿ ನಡೆದಿದೆ. ಅಪಘಾತವಾದ ಬಳಿಕ ಕಾರನ್ನು ನಿಲ್ಲಿಸದೆ ಸ್ಕೂಟಿಯನ್ನು ಎಳೆದೊಯ್ದ ಪರಿಣಾಮ ಬೆಂಕಿಯ ಕಿಡಿಗಳು ಕಾಣಿಸುತ್ತಿದ್ದವು. ಚಾಲಕನನ್ನು ವಾರಣಾಸಿಯ ಎಂಜಿನಿಯರ್ ಬ್ರಜೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಖಾಸಗಿ ವಲಯದ ಉದ್ಯೋಗಿಯಾಗಿರುವ ಹಜರತ್‌ಗಂಜ್ ನಿವಾಸಿ ಮನೀಶ್ ಸಿಂಗ್ ತನ್ನ ಸಹೋದರಿ ತನು ಜೊತೆ ತೆಲಿಬಾಗ್ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸಹೋದರರು ಗಾಳಿಯಲ್ಲಿ ಹಾರಿದರು ಆದರೆ ಅದೃಷ್ಟವಶಾತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆದಾಗ್ಯೂ, ಅವರ ಸ್ಕೂಟರ್ ಎಸ್‌ಯುವಿಯ ಚಕ್ರಗಳ ಅಡಿಯಲ್ಲಿ ಸಿಲುಕಿಕೊಂಡಿತ್ತು.

ಲಕ್ನೋ, ಮಾರ್ಚ್​ 26: ಅತಿ ವೇಗದಲ್ಲಿ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದಿರುವ ಘಟನೆ ಲಕ್ನೋದ ಲುಲು ಮಾಲ್ ಬಳಿ ನಡೆದಿದೆ. ಅಪಘಾತವಾದ ಬಳಿಕ ಕಾರನ್ನು ನಿಲ್ಲಿಸದೆ ಸ್ಕೂಟಿಯನ್ನು ಎಳೆದೊಯ್ದ ಪರಿಣಾಮ ಬೆಂಕಿಯ ಕಿಡಿಗಳು ಕಾಣಿಸುತ್ತಿದ್ದವು. ಚಾಲಕನನ್ನು ವಾರಣಾಸಿಯ ಎಂಜಿನಿಯರ್ ಬ್ರಜೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಖಾಸಗಿ ವಲಯದ ಉದ್ಯೋಗಿಯಾಗಿರುವ ಹಜರತ್‌ಗಂಜ್ ನಿವಾಸಿ ಮನೀಶ್ ಸಿಂಗ್ ತನ್ನ ಸಹೋದರಿ ತನು ಜೊತೆ ತೆಲಿಬಾಗ್ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸಹೋದರರು ಗಾಳಿಯಲ್ಲಿ ಹಾರಿದರು ಆದರೆ ಅದೃಷ್ಟವಶಾತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆದಾಗ್ಯೂ, ಅವರ ಸ್ಕೂಟರ್ ಎಸ್‌ಯುವಿಯ ಚಕ್ರಗಳ ಅಡಿಯಲ್ಲಿ ಸಿಲುಕಿಕೊಂಡಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More