Video: ಕಳ್ಳ ಅನ್ಕೊಂಡ್ರಾ, ಮೆಡಿಕಲ್ ಶಾಪ್ ಕ್ಲೋಸ್ ಆಗುವ ವೇಳೆ ಒಳಗೆ ನುಗ್ಗಿದ ವ್ಯಕ್ತಿ

Updated on: May 29, 2026 | 10:10 AM

ವಿಯೆಟ್ನಾಂನಲ್ಲಿ ತಡರಾತ್ರಿ ಮೆಡಿಕಲ್ ಶಾಪ್ ಒಂದನ್ನು ಮುಚ್ಚುವ ಸಮಯದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಅಂಗಡಿಯ ಅರ್ಧ ಮುಚ್ಚಿದ್ದ ಶಟರ್ ಒಳಗೆ ವ್ಯಕ್ತಿಯೊಬ್ಬ ಓಡಿ ಬಂದಿರುವ ವಿಡಿಯೋ ವೈರಲ್ ಆಗಿದೆ. ಮೆಡಿಕಲ್ ಶಾಪ್​ನಲ್ಲಿದ್ದ ಇಬ್ಬರು ಮಹಿಳೆಯರು ಮೊದಲು ಆತ ಕಳ್ಳನೆಂದು ಭಾವಿಸಿದ್ದರು. ಆದರೆ ಅವರಿಗೆ ಬೇಕಾದ ವಸ್ತುವನ್ನು ಕೊಂಡು ಹಣ ಕೊಟ್ಟಿದ್ದನ್ನು ನೋಡಿ ನಿರಾಳರಾಗಿದ್ದಾರೆ. ಮನೆಯಲ್ಲಿದ್ದ ಆತನ ಪತ್ನಿ ಕೆಲವು ವಸ್ತುಗಳನ್ನು ತರಲು ಮೆಡಿಕಲ್ ಶಾಪ್‌ಗೆ ಕಳುಹಿಸಿದ್ದರು. ಒಂದು ವೇಳೆ ಅಂಗಡಿ ಮುಚ್ಚಿ, ಆತ ಬರಿಗೈಲಿ ಮನೆಗೆ ಮರಳಿದರೆ ಪತ್ನಿ ಬೆಳಗ್ಗಿನವರೆಗೆ ಬೈದು ರಗಳೆ ಮಾಡುತ್ತಿದ್ದಳಂತೆ. ಹೆಂಡತಿಯ ಬೈಗುಳದಿಂದ ತಪ್ಪಿಸಿಕೊಳ್ಳಲು ಆತ ಮುಚ್ಚುತ್ತಿದ್ದ ಅಂಗಡಿಯೊಳಗೆ ಆ ಸಾಹಸ ಮಾಡಿ ನುಗ್ಗಿದ್ದ. ಈ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕೂಡ ನಗೆ ಚಟಾಕಿ ಹಾರಿಸಿದ್ದಾರೆ.

ವಿಯೆಟ್ನಾಂ, ಮೇ 29: ವಿಯೆಟ್ನಾಂನಲ್ಲಿ ತಡರಾತ್ರಿ ಮೆಡಿಕಲ್ ಶಾಪ್ ಒಂದನ್ನು ಮುಚ್ಚುವ ಸಮಯದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಅಂಗಡಿಯ ಅರ್ಧ ಮುಚ್ಚಿದ್ದ ಶಟರ್ ಒಳಗೆ ವ್ಯಕ್ತಿಯೊಬ್ಬ ಓಡಿ ಬಂದಿರುವ ವಿಡಿಯೋ ವೈರಲ್ ಆಗಿದೆ. ಮೆಡಿಕಲ್ ಶಾಪ್​ನಲ್ಲಿದ್ದ ಇಬ್ಬರು ಮಹಿಳೆಯರು ಮೊದಲು ಆತ ಕಳ್ಳನೆಂದು ಭಾವಿಸಿದ್ದರು. ಆದರೆ ಅವರಿಗೆ ಬೇಕಾದ ವಸ್ತುವನ್ನು ಕೊಂಡು ಹಣ ಕೊಟ್ಟಿದ್ದನ್ನು ನೋಡಿ ನಿರಾಳರಾಗಿದ್ದಾರೆ. ಮನೆಯಲ್ಲಿದ್ದ ಆತನ ಪತ್ನಿ ಕೆಲವು ವಸ್ತುಗಳನ್ನು ತರಲು ಮೆಡಿಕಲ್ ಶಾಪ್‌ಗೆ ಕಳುಹಿಸಿದ್ದರು. ಒಂದು ವೇಳೆ ಅಂಗಡಿ ಮುಚ್ಚಿ, ಆತ ಬರಿಗೈಲಿ ಮನೆಗೆ ಮರಳಿದರೆ ಪತ್ನಿ ಬೆಳಗ್ಗಿನವರೆಗೆ ಬೈದು ರಗಳೆ ಮಾಡುತ್ತಿದ್ದಳಂತೆ. ಹೆಂಡತಿಯ ಬೈಗುಳದಿಂದ ತಪ್ಪಿಸಿಕೊಳ್ಳಲು ಆತ ಮುಚ್ಚುತ್ತಿದ್ದ ಅಂಗಡಿಯೊಳಗೆ ಆ ಸಾಹಸ ಮಾಡಿ ನುಗ್ಗಿದ್ದ. ಈ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕೂಡ ನಗೆ ಚಟಾಕಿ ಹಾರಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More