ಯಾವ ಟೈಟಲ್​ ಕೂಡ ನನಗೆ ಬೇಡ, ಹಾಗೆ ಕರೆಯಬೇಡಿ: ವಿನೋದ್ ಪ್ರಭಾಕರ್

Updated on: Sep 13, 2023 | 11:23 PM

Vinod Prabhakar: ವಿನೋದ್ ಪ್ರಭಾಕರ್ ನಟನೆಯ 'ಫೈಟರ್' ಸಿನಿಮಾದ ಹಾಡೊಂದು ಇಂದು (ಸೆಪ್ಟೆಂಬರ್ 13) ಬಿಡುಗಡೆ ಆಗಿದೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಿನೋದ್ ಪ್ರಭಾಕರ್, ನನಗೆ ಯಾವುದೇ ಸ್ಟಾರ್ ಗಿರಿಯ ವಿಶೇಷಣ ಇಟ್ಟು ಕರೆಯಬೇಡಿ ಎಂದು ಮನವಿ ಮಾಡಿದರು.

ವಿನೋದ್ ಪ್ರಭಾಕರ್ (Vinod Prabhakar) ನಟನೆಯ ‘ಫೈಟರ್’ ಸಿನಿಮಾದ ಹಾಡೊಂದು ಇಂದು (ಸೆಪ್ಟೆಂಬರ್ 13) ಬಿಡುಗಡೆ ಆಗಿದೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಿನೋದ್ ಪ್ರಭಾಕರ್, ನನಗೆ ಯಾವುದೇ ವಿಶೇಷಣ ಇಟ್ಟು ಕರೆಯಬೇಡಿ ಎಂದು ಮನವಿ ಮಾಡಿದರು. ನನಗೆ ಸ್ಟಾರ್ ಗಿರಿ ಇಷ್ಟವಾಗಲ್ಲ, ಸಿನಿಮಾಗಳಲ್ಲಿಯೂ ನನ್ನ ಹೆಸರಿನ ಮುಂದೆ ಹಿಂದೆ ಏನು ಸೇರಿಸುವುದಿಲ್ಲ. ಟೈಗರ್ ಎನ್ನುವುದು ನನ್ನ ತಂದೆ ಸಂಪಾದಿಸಿದ ಹೆಸರು. ನನ್ನನ್ನು ಪ್ರೀತಿಯಿಂದ ಮರಿ ಟೈಗರ್ ಎನ್ನುತ್ತೀರಿ. ಅದಕ್ಕೆ ಧನ್ಯವಾದ ಆದರೆ ನನಗೆ ಯಾವುದೇ ಸ್ಟಾರ್ ಟೈಟಲ್​ಗಳು ಬೇಡ ಎಂದು ವಿನಯದಿಂದ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More