ಆಕೆ ದೇವರಿಗೆ ಮಾತ್ರ ಹೆದ್ರೋದು: ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ

Updated on: Apr 07, 2025 | 3:21 PM

ರಾತ್ರಿ ಹೊತ್ತು ನಿರ್ಜನ ಪ್ರದೇಶದಲ್ಲಿ ಓಡಾಡುವಾಗ ಎಷ್ಟೇ ಧೈರ್ಯವಿದ್ದರೂ ಒಮ್ಮೊಮ್ಮೆ ಭಯವಾಗುವುದುಂಟು. ಯಾರಾದರೂ ಗಾಡಿ ನಿಲ್ಲಿಸಿದರೆ, ಏನಾದ್ರೂ ಕದ್ದುಕೊಂಡು ಹೋದರೆ ಎನ್ನುವ ಭಯ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ. ಆದರೆ ಇಲ್ಲೊಬ್ಬ ಯುವತಿ ಬ್ಯಾಗ್​ ಕದಿಯಲು ಬಂದವನಿಗೆ ಒಳ್ಳೆಯ ಪಾಠ ಕಲಿಸಿದ್ದಾಳೆ. ಹೆಣ್ಣುಮಕ್ಕಳನ್ನು ಸುಲಭವಾಗಿ ಹೆದರಿಸಿ ಬ್ಯಾಗ್ ಕದ್ದು ಹೋಗಬಹುದು ಎನ್ನುವ ಆಲೋಚನೆಯಲ್ಲಿ ಬಂದಿದ್ದ ಕಳ್ಳ ಬರಿಗೈಯಲ್ಲಿ ಹೋಗಿದ್ದಾನೆ.

ರಾತ್ರಿ ಹೊತ್ತು ನಿರ್ಜನ ಪ್ರದೇಶದಲ್ಲಿ ಓಡಾಡುವಾಗ ಎಷ್ಟೇ ಧೈರ್ಯವಿದ್ದರೂ ಒಮ್ಮೊಮ್ಮೆ ಭಯವಾಗುವುದುಂಟು. ಯಾರಾದರೂ ಗಾಡಿ ನಿಲ್ಲಿಸಿದರೆ ಸಾಕು, ಏನಾದ್ರೂ ಮಾಡಿದ್ರೆ, ಏನಾದ್ರೂ ಕದ್ದುಕೊಂಡು ಹೋದರೆ  ಎನ್ನುವ ಭಯ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ. ಆದರೆ ಇಲ್ಲೊಬ್ಬ ಯುವತಿ ಬ್ಯಾಗ್​ ಕದಿಯಲು ಬಂದವನಿಗೆ ಒಳ್ಳೆಯ ಪಾಠ ಕಲಿಸಿದ್ದಾಳೆ. ಹೆಣ್ಣುಮಕ್ಕಳನ್ನು ಸುಲಭವಾಗಿ ಹೆದರಿಸಿ ಬ್ಯಾಗ್ ಕದ್ದು ಹೋಗಬಹುದು ಎನ್ನುವ ಆಲೋಚನೆಯಲ್ಲಿ ಬಂದಿದ್ದ ಕಳ್ಳ ಬರಿಗೈಯಲ್ಲಿ ಹೋಗಿದ್ದಾನೆ.

ಒಂದು ವಿಡಿಯೋ ಈ ಕಲ್ಪನೆಯನ್ನು ಸಂಪೂರ್ಣವಾಗಿ ತಲೆಕೆಳಗು ಮಾಡಿದೆ. ಇದರಲ್ಲಿ ಒಬ್ಬ ಹುಡುಗಿ ಇಬ್ಬರು ಕಳ್ಳರೊಂದಿಗೆ ಧೈರ್ಯದಿಂದ ಹೋರಾಡಿದ್ದಲ್ಲದೆ, ತನ್ನ ಧೈರ್ಯದಿಂದ ಅವರನ್ನು ಓಡಿಹೋಗುವಂತೆ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾಳೆ, ಆಗ ಬೈಕ್​ನಲ್ಲಿ ಇಬ್ಬರು ಕಳ್ಳರು ಬರುತ್ತಾರೆ, ಅದರಲ್ಲೊಬ್ಬ ಕಳ್ಳ ಆಜೆಯ ಬಳಿ ಬಂದು ಬ್ಯಾಗ್ ಕಸಿದುಕೊಳ್ಳಲು ಮುಂದಾಗುತ್ತಾನೆ. ಆಗ ಆಕೆ ಆತನನ್ನೇ ಹೆದರಿಸಿ ವಾಪಸ್ ಓಡುವಂತೆ ಮಾಡುತ್ತಾಳೆ. ಆಕೆ ದೇವರಿಗೆ ಮಾತ್ರ ಹೆದರೋದು ಅನ್ಸುತ್ತೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More