ಹಾಸನದಲ್ಲಿ ಒಂದೇ ಕಡೆ ಬೀಡುಬಿಟ್ಟಿರುವ 35ಕ್ಕೂ ಹೆಚ್ಚು ಕಾಡಾನೆಗಳು; ವಿಡಿಯೋ ವೈರಲ್

|

Updated on: Oct 10, 2021 | 11:31 AM

ಕಾಡಾನೆಗಳ ಓಡಾಟದಿಂದ ಅಪಾರ ಪ್ರಮಾಣದ ಕಾಫಿ, ಭತ್ತ, ಮೆಣಸು ಬೆಳೆ ನಾಶವಾಗಿದೆ. ಕಾಡಾನೆ ಮರಿಗಳು ಇರುವುದರಿಂದ ದಾಳಿ ಮಾಡುವ ಸಾಧ್ಯತೆ ಇರುವ ಹಿನ್ನೆಲೆ ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.

ಹಾಸನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ರಾಜೇಂದ್ರಪುರ ಸುತ್ತಮುತ್ತ ಕಾಡಾನೆಗಳು ಉಪಟಳ ಕೊಡುತ್ತಿವೆ. ಅಪಾರ ಪ್ರಮಾಣದ ಕಾಫಿ, ಭತ್ತ, ಮೆಣಸು ಬೆಳೆ ನಾಶ ಮಾಡುತ್ತಿವೆ. ಒಂದೇ ಕಡೆ ಸುಮಾರು 35ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಆನೆಗಳನ್ನು ಕಾಡಿಗಟ್ಟುವಂತೆ ರೈತರು ಅರಣ್ಯ ಸಿಬ್ಬಂದಿಗೆ ಆಗ್ರಹಿಸುತ್ತಿದ್ದಾರೆ. ಮರಿಗಳೊಂದಿಗೆ ಗಜಪಡೆ ರಸ್ತೆ ದಾಟುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜೇಂದ್ರಪುರ ಗ್ರಾಮದ ಸಮೀಪದ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಕಾಡಾನೆಗಳ ಓಡಾಟದಿಂದ ಅಪಾರ ಪ್ರಮಾಣದ ಕಾಫಿ, ಭತ್ತ, ಮೆಣಸು ಬೆಳೆ ನಾಶವಾಗಿದೆ. ಕಾಡಾನೆ ಮರಿಗಳು ಇರುವುದರಿಂದ ದಾಳಿ ಮಾಡುವ ಸಾಧ್ಯತೆ ಇರುವ ಹಿನ್ನೆಲೆ ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.