Video: ಬೈಕ್​​ನಲ್ಲಿ ಹೋಗುತ್ತಾ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದ ಸವಾರ

Updated on: Feb 18, 2026 | 9:21 AM

ಯುವಕನೊಬ್ಬ ಬೈಕ್​​ನಲ್ಲಿ ಹೋಗುತ್ತಾ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. ರೀಲ್ಸ್​ಗಾಗಿ ಅಪಾಯಕಾರಿ ಸಾಹಸ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೋದಲ್ಲಿ ಬಸ್ ಚಲಿಸುತ್ತಿರುತ್ತದೆ ಆಗ ಬಲಗಡೆಯಿಂದ ಬಂದ ಬೈಕ್ ಸವಾರ ಚಾಲಕ ಕುಳಿತಿರುವಲ್ಲಿ ಇರುವ ಬಾಗಿಲನ್ನು ಅಚಾನಕ್ಕಾಗಿ ತೆರೆಯುತ್ತಾನೆ.

ನವದೆಹಲಿ, ಫೆಬ್ರವರಿ 18: ಯುವಕನೊಬ್ಬ ಬೈಕ್​​ನಲ್ಲಿ ಹೋಗುತ್ತಾ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. ರೀಲ್ಸ್​ಗಾಗಿ ಅಪಾಯಕಾರಿ ಸಾಹಸ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೋದಲ್ಲಿ ಬಸ್ ಚಲಿಸುತ್ತಿರುತ್ತದೆ ಆಗ ಬಲಗಡೆಯಿಂದ ಬಂದ ಬೈಕ್ ಸವಾರ ಚಾಲಕ ಕುಳಿತಿರುವಲ್ಲಿ ಇರುವ ಬಾಗಿಲನ್ನು ಅಚಾನಕ್ಕಾಗಿ ತೆರೆಯುತ್ತಾನೆ.

ಕೂಡಲೇ ಚಾಲಕ ಬಾಗಿಲು ಹಾಕಿಕೊಳ್ಳುತ್ತಾರೆ. ಒಂದೊಮ್ಮೆ ಡ್ರೈವರ್ ಪ್ಯಾನಿಕ್ ಆಗಿದ್ದರೆ ಅಪಘಾತವಾಗುವ ಸಂಭವವಿತ್ತು. ಬೈಕ್​​ಗೆ ನಂಬರ್ ಪ್ಲೇಟ್ ಕೂಡಾ ಇರಲಿಲ್ಲ. ಆರೋಪಿಯನ್ನು ಖಜುರಿ ಖಾಸ್ ನಿವಾಸಿ ತುಷಾರ್ ಪುನಿಯಾ ಎಂದು ಗುರುತಿಸಲಾಗಿದೆ. ನ್ಯೂ ಉಸ್ಮಾನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಆರಂಭಿಸಲಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More