Video: ಪ್ರೀತಿಸಿ ಮದುವೆಯಾದ ಯುವತಿಯರು

Updated on: Nov 14, 2025 | 5:38 PM

ಪಶ್ಚಿಮ ಬಂಗಾಳದಲ್ಲಿ ಡ್ಯಾನ್ಸರ್ಸ್ ರಾಖಿ ನಸ್ಕರ್ ಮತ್ತು ರಿಯಾ ಅವರ ಸಲಿಂಗ ವಿವಾಹ ವೈರಲ್ ಆಗಿದೆ. ಕುಟುಂಬದ ವಿರೋಧದ ನಡುವೆಯೂ, ಒಬ್ಬರ ಪೋಷಕರ ಸಮ್ಮತಿಯೊಂದಿಗೆ ಈ ಜೋಡಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಸಮಾಜಿಕ ಕಟ್ಟುಪಾಡುಗಳನ್ನು ಮೀರಿ ತಮ್ಮ ಪ್ರೀತಿಯನ್ನು ದೃಢಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಹೆಚ್ಚುತ್ತಿರುವ ಸಲಿಂಗ ವಿವಾಹಗಳ ಕುರಿತು ಇದು ಗಮನ ಸೆಳೆದಿದೆ.

ಇತ್ತೀಚಿನ ದಿನಗಳಲ್ಲಿ ಯುವತಿಯರು ಪರಸ್ಪರ ಮದುವೆ ಆಗುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಇದೀಗ ಇಲ್ಲೊಂದು ಅಂತಹದೇ ಪ್ರಕರಣವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘಟನೆ ಭಾರೀ ಸಂಚಲನ ಮೂಡಿಸಿದೆ. ನೃತ್ಯಗಾರ್ತಿಯರಾದ ಈ ಇಬ್ಬರು ಕೂಡ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಇದರಲ್ಲಿ ಒಬ್ಬ ಯುವತಿಯ ಮನೆಯವರು ಈ ಮದುವೆಗೆ ಸಮ್ಮತಿ ನೀಡಿದ್ದಾರೆ. ಆದರೆ ಮತ್ತೊಬ್ಬ ಯುವತಿಗೆ ಹೆತ್ತವರ ಇಲ್ಲ. ಆದರೆ ಕುಟುಂಬದವರು ಈ ಮದುವೆಗೆ ಒಪ್ಪಿಗೆ ನೀಡಿಲ್ಲ. ಈ ಯುವತಿಯೂ ಚಿಕ್ಕ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡಿದ್ದಾರೆ. ಯುವತಿಯರನ್ನು ರಾಖಿ ನಸ್ಕರ್ ಮತ್ತು ರಿಯಾ ಎಂದು ಗುರುತಿಸಲಾಗಿದೆ.  ಅವರು ಎರಡು ವರ್ಷಗಳ ಹಿಂದೆ ಡ್ಯಾನ್ಸ್​​ ಕ್ಲಾಸ್​​​ನಲ್ಲಿ ಭೇಟಿಯಾಗಿದ್ದಾರೆ. ಇಬ್ಬರ ನಡುವೆ ಸ್ನೇಹ ಬೆಳೆದಿದೆ. ರಾಖಿ ಅವರೊಂದಿಗಿನ ತನ್ನ ಸಂಬಂಧದ ಬಗ್ಗೆ ರಿಯಾ ಅವರು ತನ್ನ ಮನೆಯವರ ಮುಂದೆ ಹೇಳಿದ್ದಾರೆ. ಎರಡು ಮನೆಯವರ ಸಂಬಂಧಿಕರು ಕೂಡ ಈ ಮದುವೆಯನ್ನು ಒಪ್ಪಿಲ್ಲ. ಆದರೆ ರಿಯಾ ಅವರು ತನ್ನ ಕುಟುಂಬದವರನ್ನು ಧಿಕ್ಕರಿಸಿ, ರೇಖಾ ಅವರನ್ನು ಮದುವೆಯಾಗಿದ್ದಾರೆ. ರೇಖಾ ಅವರ ಮನೆಯವರು ಈ ಮದುವೆಗೆ ಕೊನೆಯಲ್ಲಿ ಒಪ್ಪಿಕೊಂಡಿದ್ದಾರೆ. ಸಮಾಜ ಹಾಗೂ ಲಿಂಗ ತಾರತಾಮ್ಯವನ್ನು ಮೀರಿ ಈ ಮದುವೆಯನ್ನು ಆಗಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 14, 2025 05:33 PM