IND vs NED, ICC World Cup: ಚಿನ್ನಸ್ವಾಮಿ ಸ್ಟೇಡಿಯಂ ಎದುರು ವಿರಾಟ್ ಕೊಹ್ಲಿಯ ಶತಕಗಳ ಕಟೌಟ್: ವಿಡಿಯೋ
Virat Kohli Flex, India vs Netherlands: ಭಾರತ-ನೆದರ್ಲೆಂಡ್ಸ್ ಪಂದ್ಯ ವಿರಾಟ್ ಕೊಹ್ಲಿಗೆ ತುಂಬಾ ವಿಶೇಷವಾಗಿದೆ. ಬೆಂಗಳೂರು ಕೊಹ್ಲಿಯ ಎರಡನೇ ತವರಾಗಿದ್ದು, ಇಲ್ಲಿ 50ನೇ ಶತಕ ಬರುತ್ತಾ ನೋಡಬೇಕು. ಅಲ್ಲದೆ ಸ್ಟೇಡಿಯಂ ಹೊರಗಡೆ ಕೊಹ್ಲಿಯ ಏಕದಿನ ಶತಕಗಳ ಕಟೌಟ್ ಅನ್ನು ನಿಲ್ಲಿಸಿ ಶುಭಕೋರಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ಲೀಗ್ ಸುತ್ತಿನ ಕೊನೆಯ ಪಂದ್ಯ ನಡೆಯಲಿದ್ದು, ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್ (India vs Netherlands) ತಂಡಗಳು ಮುಖಾಮುಖಿ ಆಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂಡೋ-ನೆದರ್ಲೆಂಡ್ಸ್ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯ ವಿರಾಟ್ ಕೊಹ್ಲಿಗೆ ತುಂಬಾ ವಿಶೇಷವಾಗಿದೆ. ಬೆಂಗಳೂರು ಕೊಹ್ಲಿಯ ಎರಡನೇ ತವರಾಗಿದ್ದು, ಇಲ್ಲಿ 50ನೇ ಶತಕ ಬರುತ್ತಾ ನೋಡಬೇಕು. ಅತ್ತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕೊಹ್ಲಿಯ ಆಟ ವೀಕ್ಷಿಸಲು ಕಾದುಕುಳಿತಿದ್ದಾರೆ. ಅಲ್ಲದೆ ಸ್ಟೇಡಿಯಂ ಹೊರಗಡೆ ಕೊಹ್ಲಿಯ ಏಕದಿನ ಶತಕಗಳ ಕಟೌಟ್ ಅನ್ನು ನಿಲ್ಲಿಸಿ ಶುಭಕೋರಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ