ಪರಮೇಶ್ವರ್ ಮನೆಗೆ ಊಟಕ್ಕೆ ಹೋಗಿದ್ದಷ್ಟೇ, ಅದಕ್ಯಾಕೆ ರಾಜಕೀಯದ ಬಣ್ಣ ಕಟ್ಟೋದು? ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ

Updated on: Oct 28, 2023 | 2:35 PM

ವಿನಾಕಾರಣ ಮಾಧ್ಯಮದವರು ಈ ವಿಷಯಕ್ಕೆ ಬಣ್ಣ ಕಟ್ಟುತ್ತಿದ್ದಾರೆ, ಪರಮೇಶ್ವರ್ ಅವರು ಸತೀಶ್ ಜಾರಕಿಹೊಳಿ, ಮಹದೇವಪ್ಪ ಮತ್ತು ತನ್ನನ್ನು ಊಟಕ್ಕೆ ಕರೆದಿದ್ದರು, ಅವರ ಮನೆಯಲ್ಲಿ ಲೋಕಾಭಿರಾಮ ಮಾತುಕತೆ ಅಷ್ಟೇ ನಡೆದಿದ್ದು, ರಾಜಕಾರಣದ ಬಗ್ಗೆ ಮಾತೇ ಬಂದಿಲ್ಲ ಎಂದು ಹೇಳಿದರು.

ಮಂಗಳೂರು: ಉಡುಪಿಯಲ್ಲಿ ನಡೆಯುತ್ತಿರುವ ವಿಶ್ವ ಬಂಟರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಮಂಡ್ಯ ಶಾಸಕ ರವಿ ಗಣಿಗ (Ravi Ganiga) ನಿನ್ನೆ ದಾವಣಗೆರೆಯಲ್ಲಿ ಬಿಜೆಪಿ ನಾಯಕರು ಆಪರೇಶನ್ ಕಮಲ (Operation Lotus) ಮತ್ತೇ ಶುರುಮಾಡಿ, ಕಾಂಗ್ರೆಸ್ ಶಾಸಕರಿಗೆ ರೂ. 50 ಕೋಟಿ ಆಮಿವೊಡ್ಡುತ್ತಿದ್ದಾರೆ ಅಂತ ಹೇಳಿರುವ ಬಗ್ಗೆ ಕೇಳಿದಾಗ, ಈ ಪ್ರಶ್ನೆ ತನ್ನನ್ಯಾಕೆ ಕೇಳೋದು, ಅವರನ್ನೇ ಕೇಳಿ ಅಂತ ಹೇಳಿ, ಬಿಜೆಪಿ ನಾಯಕರು ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿರುವ ಬಗ್ಗೆಯಷ್ಟೇ ತನಗೆ ಮಾಹಿತಿ ಇದೆ ಅಂತ ಹೇಳಿದರು. ಶುಕ್ರವಾರ ರಾತ್ರಿ ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಗೆ ಹತ್ತಿರದಲ್ಲೇ ಇದ್ದ ಡಿಕೆ ಶಿವಕುಮಾರ್ ಅವರನ್ನು ಯಾಕೆ ಕರೆದಿರಲಿಲ್ಲ ಅಂತ ಕೇಳಿದಾಗ, ಮುಖ್ಯಮಂತ್ರಿ ಪತ್ರಕರ್ತರ ಮೇಲೆ ಕಿಡಿಕಾರಿದರು. ವಿನಾಕಾರಣ ಮಾಧ್ಯಮದವರು ಈ ವಿಷಯಕ್ಕೆ ಬಣ್ಣ ಕಟ್ಟುತ್ತಿದ್ದಾರೆ, ಪರಮೇಶ್ವರ್ ಅವರು ಸತೀಶ್ ಜಾರಕಿಹೊಳಿ, ಮಹದೇವಪ್ಪ ಮತ್ತು ತನ್ನನ್ನು ಊಟಕ್ಕೆ ಕರೆದಿದ್ದರು, ಅವರ ಮನೆಯಲ್ಲಿ ಲೋಕಾಭಿರಾಮ ಮಾತುಕತೆ ಅಷ್ಟೇ ನಡೆದಿದ್ದು, ರಾಜಕಾರಣದ ಬಗ್ಗೆ ಮಾತೇ ಬಂದಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.