BSY in Chikmagalur; ಲಿಂಗಾಯತರ ವೋಟು ಬೇಕಿಲ್ಲ ಅಂತ ಸಿಟಿ ರವಿ ಹೇಳಿದ್ದರೆ ಅದು ತಪ್ಪು, ಎಲ್ಲ ಸಮುದಾಯಗಳ ವೋಟು ನಮಗೆ ಬೇಕು: ಬಿಎಸ್ ಯಡಿಯೂರಪ್ಪ

ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2023 | 4:32 PM

ರವಿ ಹಾಗೆ ಹೇಳಿದ್ದರೆ ಅ ಬಹಳ ತಪ್ಪು, ಬಿಜೆಪಿಗೆ ಎಲ್ಲ ವರ್ಗದ ವೋಟುಗಳು ಬೇಕು, ತಾನು ಅವರೊಂದಿಗೆ ಮಾತಾಡುವುದಾಗಿ ಯಡಿಯೂರಪ್ಪನವರು ಹೇಳಿದರು.

ಚಿಕ್ಕಮಗಳೂರು: ಬಿಜೆಪಿ ಶಾಸಕ ಸಿಟಿ ರವಿ (CT Ravi) ಲಿಂಗಾಯತರ (Lingayats) ವೋಟು ನಮಗೆ ಬೇಡ, ಅವರ ವೋಟುಗಳಿಲ್ಲದೆ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಅಂತ ಸಿಟಿ ರವಿ ಹೇಳಿದ್ದು ಪಕ್ಷದ ನಾಯಕರಿಗೆ ತೀವ್ರ ಇರುಸು ಮುರುಸು ಉಂಟು ಮಾಡಿದೆ. ಇಂದು ಚಿಕ್ಕಮಗಳೂರಲ್ಲಿ ಮಾಧ್ಯಮದವರು ರವಿ ಹೇಳಿದ್ದನ್ನು ಯಡಿಯೂರಪ್ಪನವರ (BS Yediyurappa) ಗಮನಕ್ಕೆ ತಂದಾಗ ಕೋಪವುಂಟಾದರೂ ತೋರ್ಪಡಿಸದೆ ಶಾಂತವಾದ ಸ್ವರದಲ್ಲಿ ಮಾತಾಡಿದ ಯಡಿಯೂರಪ್ಪನವರು, ಅವರು ಹಾಗೆ ಹೇಳಿದ್ದರೆ ಅ ಬಹಳ ತಪ್ಪು, ಬಿಜೆಪಿಗೆ ಎಲ್ಲ ವರ್ಗದ ವೋಟುಗಳು ಬೇಕು, ಅವರೊಂದಿಗೆ ತಾವು ಮಾತಾಡುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 16, 2023 04:32 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.