ಬೊಮ್ಮಾಯಿ ನೇತೃತ್ವ ಮತ್ತು ಬಿ ಎಸ್ ವೈ ಮಾರ್ಗದರ್ಶನದಲ್ಲೇ ನಾವು ಚುನಾವಣೆ ಎದುರಿಸೋದು: ಎಸ್ ಟಿ ಸೋಮಶೇಖರ್

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Aug 10, 2022 | 2:36 PM

ಹಿಂದೊಮ್ಮೆ ಸಿದ್ದರಾಮಯ್ಯನವರ ಆಪ್ತ ವಲಯದ ಸದಸ್ಯರಲ್ಲಿ ಒಬ್ಬರಾಗಿದ್ದ ಅವರು ತಮ್ಮ ಮಾಜಿ ರಾಜಕೀಯ ಗುರುವಿಗೆ ಅಧಿಕಾರದ ಮೋಹ ಅಂತ ಲೇವಡಿ ಮಾಡಿದರು

ಮೈಸೂರು:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಯಾವ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ, ಅವರ ನೇತೃತ್ವ ಮತ್ತು ಬಿ ಎಸ್ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಬಿಜೆಪಿ ಚುನಾವಣೆ ಎದುರಿಸಲಿದೆ. ಸಿ ಎಮ್ ಬದಲಾವಣೆ ಆಗಲಿದೆ ಅಂತ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್ ಸೋಮಶೇಖರ್ (ST Somashekar) ಮೈಸೂರಲ್ಲಿ ಬುಧವಾರ ಹೇಳಿದರು. ಹಿಂದೊಮ್ಮೆ ಸಿದ್ದರಾಮಯ್ಯನವರ ಆಪ್ತ ವಲಯದ ಸದಸ್ಯರಲ್ಲಿ ಒಬ್ಬರಾಗಿದ್ದ ಅವರು ತಮ್ಮ ಮಾಜಿ ರಾಜಕೀಯ ಗುರುವಿಗೆ ಅಧಿಕಾರದ ಮೋಹ ಅಂತ ಲೇವಡಿ ಮಾಡಿದರು.

Loading...
Unable to load recommendations.
Follow Us
TV9 Web

TV9 Kannada

Read More