Video: ರಾಜಮನೆತನದ ವಿವಾಹ, ವಧುವಿನ ಮೇಲೆ ಹೂವಿನಂತೆ ಬರೋಬ್ಬರಿ 8 ಕೋಟಿ ರೂ. ನಗದು ಚೆಲ್ಲಿದ ವರ

Updated on: Feb 19, 2026 | 7:49 AM

ಪಂಜಾಬ್​​ನ ತರಣ್ ತರಣ್​ನಲ್ಲಿ ನಡೆದ ರಾಜಮನೆತನದ ವಿವಾಹವೊಂದು ಎಲ್ಲರ ಗಮನ ಸೆಳೆದಿದೆ. ವರ ವಧುವಿನ ಮೇಲೆ ಬರೋಬ್ಬರು 8 ಕೋಟಿ ರೂ. ಮೌಲ್ಯದ ನೋಟುಗಳ ಸುರಿಮಳೆಗೈದಿದ್ದಾನೆ. ಎಲ್ಲರೂ ಅಚ್ಚರಿಯಿಂದ ಈ ದೃಶ್ಯ ವೀಕ್ಷಿಸಿದ್ದಾರೆ. ಅಲ್ಲಿದ್ದ ಅತಿಥಿಗಳು ಈ ದೃಶ್ಯವನ್ನು ನೋಡಿ ಆಘಾತಕ್ಕೊಳಗಾದರು. ಕೆಲವರು ಇದನ್ನು ರಾಜಮನೆತನದ ಪದ್ಧತಿ ಎಂದು ಕರೆದರೆ, ಇನ್ನು ಕೆಲವರು ಇದನ್ನು ಆಡಂಬರ ಎಂದು ಕರೆದಿದ್ದಾರೆ.

ಅಮೃತಸರ, ಫೆಬ್ರವರಿ 19: ಪಂಜಾಬ್​​ನ ತರಣ್ ತರಣ್​ನಲ್ಲಿ ನಡೆದ ರಾಜಮನೆತನದ ವಿವಾಹವೊಂದು ಎಲ್ಲರ ಗಮನ ಸೆಳೆದಿದೆ. ವರ ವಧುವಿನ ಮೇಲೆ ಬರೋಬ್ಬರು 8 ಕೋಟಿ ರೂ. ಮೌಲ್ಯದ ನೋಟುಗಳ ಸುರಿಮಳೆಗೈದಿದ್ದಾನೆ. ಎಲ್ಲರೂ ಅಚ್ಚರಿಯಿಂದ ಈ ದೃಶ್ಯ ವೀಕ್ಷಿಸಿದ್ದಾರೆ. ಅಲ್ಲಿದ್ದ ಅತಿಥಿಗಳು ಈ ದೃಶ್ಯವನ್ನು ನೋಡಿ ಆಘಾತಕ್ಕೊಳಗಾದರು. ಕೆಲವರು ಇದನ್ನು ರಾಜಮನೆತನದ ಪದ್ಧತಿ ಎಂದು ಕರೆದರೆ, ಇನ್ನು ಕೆಲವರು ಇದನ್ನು ಆಡಂಬರ ಎಂದು ಕರೆದಿದ್ದಾರೆ.

ಕೋಟ್ಯಂತರ ರೂಪಾಯಿಯ ಸುರಿಮಳೆ ಇದು ಎಂಬ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಪ್ರಾರಂಭವಾದವು. ಬಳಿಕ ಡಿಜೆ ಆಪರೇಟರ್  ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಸುಮಾರು 3 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಹೆಚ್ಚಿನ ನೋಟುಗಳು ಹತ್ತು ರೂಪಾಯಿಗಳದ್ದಾಗಿದ್ದವು ಎಂದು ಅವರು ಹೇಳಿದ್ದಾರೆ. ಇದು ವಿವಾಹ ಆಚರಣೆಯ ಭಾಗ ಮತ್ತು ಕುಟುಂಬದವರು ಸಂತೋಷವನ್ನು ವ್ಯಕ್ತಪಡಿಸುವ ವಿಧಾನ ಎಂದು ಹೇಳಲಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Feb 19, 2026 07:47 AM
Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More