ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?

|

Updated on: Jun 20, 2024 | 7:33 AM

ಹಿಂದೂ ಧರ್ಮದಲ್ಲಿ ವೀಳ್ಯದೆಲೆಯನ್ನು ಹೆಚ್ಚಾಗಿ ಶುಭ ಕಾರ್ಯಗಳಲ್ಲಿ ಬಳಸುತ್ತಾರೆ. ಹನುಮಂತನಿಗೆ ವೀಳ್ಯದೆಲೆಯನ್ನು ಅರ್ಪಿಸುವುದರಿಂದ ಅವನು ತ್ವರಿತವಾಗಿ ಸಂತುಷ್ಟನಾಗುತ್ತಾನೆ. ಹಾಗೂ ಎಲ್ಲಾ ಇಷ್ಟಾರ್ಥಗಳನ್ನು ಶೀಘ್ರದಲ್ಲೇ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.

ಭಗವಾನ್‌ ಹನುಮಂತ, ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಹಾಗೂ ಉಪವಾಸ ವ್ರತವನ್ನು ಆಚರಿಸುವುದರಿಂದ ನಿಂತು ಹೋದ ಕಾರ್ಯಗಳು ಮತ್ತೆ ಆರಂಭವಾಗುವುದು ಎಂಬ ನಂಬಿಕೆ ಇದೆ. ಅದರಲ್ಲೂ ಹನುಮಂತನ ಆಶೀರ್ವಾದವನ್ನು ಪಡೆದುಕೊಳ್ಳಲು ಹನುಮಂತನ ಪ್ರಿಯವಾದ ವಸ್ತು ವೀಳ್ಯದೆಲೆ ಅರ್ಪಿಸಿ ಪೂಜಿಸಬೇಕು.

ಭಗವಾನ್ ಹನುಮಂತನಿಗೆ ತುಳಸಿ ಎಲೆ, ಮೋತಿಚೂರ್‌ ಲಡ್ಡು, ಸಿಂಧೂರ, ಕೆಂಪು ಬಣ್ಣದ ಹೂವುಗಳು, ಮಲ್ಲಿಗೆ ಎಣ್ಣೆ ಸೇರಿದಂತೆ ಇನ್ನಿತರ ವಸ್ತುಗಳು ಹನುಮಂತನಿಗೆ ಹೆಚ್ಚು ಇಷ್ಟ. ಇವುಗಳಲ್ಲಿ ಪ್ರಮುಖವಾದುದ್ದೆಂದರೆ ವೀಳ್ಯದೆಲೆ. ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ