Lakshmi Hebbalkar in Delhi: ಯಾವ ಖಾತೆಯ ನಿರೀಕ್ಷೆ ಮೇಡಂ ಅಂತ ಪತ್ರಕರ್ತರು ಕೇಳಿದಾಗ ಲಕ್ಷ್ಮಿ ಹೆಬ್ಬಾಳ್ಕರ್ ಜೋರಾಗಿ ನಗಲಾರಂಭಿಸಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: May 26, 2023 | 1:12 PM

ಅವರು ನಕ್ಕಿದ್ದು ಯಾಕೆ ಅಂತ ಗೊತ್ತಾಗದೆ ಮಾದ್ಯಮ ಪ್ರತಿನಿಧಿಗಳು ಸಹ ಅವರೊಂದಿಗೆ ನಗಲಾರಂಭಿಸಿದರು!!

ದೆಹಲಿ: ಯಾಕೆ ಮೇಡಂ ಇದ್ದಕ್ಕಿದ್ದಂತೆ ದೆಹಲಿಗೆ ಬಂದಿದ್ದೀರಿ, ಹೈಕಮಾಂಡ್ ನಿಂದ ಕರೆ ಬಂತಾ ಅಂತ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನೀಡಿದ ಉತ್ತರ ಆಶ್ಚರ್ಯ ಹುಟ್ಟಿಸುವಂಥಾಗಿತ್ತು. ತಾನು ಎರಡು ದಿನಗಳಿಂದ ದೆಹಲಿಯಲ್ಲೇ ಇರುವ ಬಗ್ಗೆ ಹೇಳಿದ ಅವರು ಆರೋಗ್ಯ ಸರಿಯಿಲ್ಲದ ಕಾರಣ ಎಐಸಿಸಿ ಕಚೇರಿ (AICC office) ಕಡೆ ಗುರುವಾರ ಬಂದಿರಲಿಲ್ಲ ಎಂದರು. ಸರಿ ಬಿಡಿ, ಅವರು ಹೇಳಿದ ಮಾತನ್ನು ಪತ್ರಕರ್ತರು ನಂಬಿದಂತೆ ಮಾಡಿದ್ದೂ ಆಯಿತು. ಆದರೆ, ನಿಮಗೆ ಯಾವ ಖಾತೆ (portfolio) ಸಿಗುವ ನಿರೀಕ್ಷೆಯಿದೆ ಅಂತ ಸುದ್ದಿಗಾರರು ಕೇಳಿದಾಗ ಅವರು ಜೋರಾಗಿ ನಗಲಾರಂಭಿಸಿದರು! ಯಾಕೆ ಅಂತ ಗೊತ್ತಾಗದೆ ಮಾದ್ಯಮ ಪ್ರತಿನಿಧಿಗಳು ಸಹ ಅವರೊಂದಿಗೆ ನಗಲಾರಂಭಿಸಿದರು!!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.