Daily Devotional: ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ

Updated on: Jun 05, 2026 | 6:47 AM

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮನೆಯ ಗೆಸ್ಟ್ ರೂಂ ಯಾವ ದಿಕ್ಕಿನಲ್ಲಿದ್ದರೆ ಉತ್ತಮ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ.ಮನೆಯಲ್ಲಿ ಅತಿಥಿಗಳು ಬಂದಾಗ ಅವರಿಗೆ ಸೂಕ್ತವಾದ ವಾತಾವರಣವನ್ನು ಒದಗಿಸುವುದು ನಮ್ಮ ಕರ್ತವ್ಯ. ಅತಿಥಿ ದೇವೋಭವ ಎಂಬ ನಾಣ್ಣುಡಿಯಂತೆ, ಅತಿಥಿಗಳನ್ನು ಸತ್ಕರಿಸುವುದು ನಮ್ಮ ಸಂಸ್ಕೃತಿಯ ಭಾಗ.

ವಾಸ್ತು ಶಾಸ್ತ್ರದ ಪ್ರಕಾರ, ಅತಿಥಿ ಕೋಣೆಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಿಸುವುದು ಮನೆಯ ಸುಖಶಾಂತಿಗೆ ಅವಶ್ಯಕ. ಅತಿಥಿ ಕೋಣೆಯು ಆಗ್ನೇಯ, ಈಶಾನ್ಯ ಅಥವಾ ನೈರುತ್ಯ ದಿಕ್ಕುಗಳಲ್ಲಿ ಇರಬಾರದು. ಆಗ್ನೇಯದಲ್ಲಿ ಅತಿಥಿ ಕೋಣೆ ಇದ್ದರೆ ಅದು ವೈರತ್ವಕ್ಕೆ ಕಾರಣವಾಗಬಹುದು. ಈಶಾನ್ಯದಲ್ಲಿ ದೈವಾಂಶ ಕಡಿಮೆಯಾಗಿ ಅಶಾಂತಿ ಉಂಟಾಗಬಹುದು. ನೈರುತ್ಯ ದಿಕ್ಕು ಮನೆಯ ಯಜಮಾನನ ಜಾಗವಾಗಿದ್ದು, ಅಲ್ಲಿ ಅತಿಥಿ ಕೋಣೆ ನಿರ್ಮಿಸಿದರೆ ಆರ್ಥಿಕ ನಷ್ಟಗಳು ಮತ್ತು ಮನಸ್ತಾಪಗಳು ಉಂಟಾಗಬಹುದು.

ಅತಿಥಿ ಕೋಣೆಗೆ ವಾಯುವ್ಯ ದಿಕ್ಕು ಅತ್ಯಂತ ಸೂಕ್ತವಾಗಿದೆ. ಈ ದಿಕ್ಕಿನಲ್ಲಿ ಅತಿಥಿಗಳಿಗೆ ಕೋಣೆಯನ್ನು ಕಾಯ್ದಿರಿಸಬಹುದು. ವಾಯುವ್ಯದಲ್ಲಿ ಮಲಗುವ ಹಾಸಿಗೆಯನ್ನು ದಕ್ಷಿಣಕ್ಕೆ ತಲೆ ಮತ್ತು ಉತ್ತರಕ್ಕೆ ಕಾಲುಗಳು ಬರುವಂತೆ ಇಡಬೇಕು. ಅತಿಥಿ ಕೋಣೆಗೆ ತಿಳಿ ನೀಲಿ ಅಥವಾ ಬಿಳಿ ಬಣ್ಣಗಳನ್ನು ಬಳಸುವುದು ಉತ್ತಮ ಎಂದು ಗುರೂಜಿ ತಿಳಿಸಿದ್ದಾರೆ.

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More