ದೇವರಿಗೆ ಬಾಳೆಹಣ್ಣು ತೆಂಗಿನಕಾಯಿ ಅರ್ಪಿಸುವುದೇಕೆ? ಇದರ ಮಹತ್ವವೇನು?

|

Updated on: May 23, 2024 | 7:01 AM

ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳು ಪವಿತ್ರ ಎಂದು ಪರಿಗಣಿಸಲ್ಪಟ್ಟಿವೆ. ಇತರೆ ಫಲಗಳು ಬೀಜ ನೆಟ್ಟಿ ಬೆಳೆಯುವಂತವು, ಆದ್ರೆ ತೆಂಗಿನಕಾಯಿ, ಬಾಳೆಹಣ್ಣುಗಳು ಆ ರೀತಿ ಅಲ್ಲ. ಇವುಗಳಿಂದ ಭಕ್ತರ ಮನದ ಅಪೇಕ್ಷೆಗಳೂ ನೆರವೇರುವುದು ಖಂಡಿತ ಎಂಬ ಭಾವನೆ ಇದೆ. ಆದ್ದರಿಂದಲೇ ಈ ಎರಡನ್ನೂ ಜನ ತಪ್ಪಿಸದೇ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ.

ಸಾಮಾನ್ಯವಾಗಿ ನಾವೆಲ್ಲ ದೇವರ ದರ್ಶನಕ್ಕೆ ಹೋಗುವಾಗ ತೆಂಗಿನಕಾಯಿ, ಬಾಳೆಹಣ್ಣು, ಹೂವನ್ನು ತೆಗೆದುಕೊಂಡು ಹೋಗುತ್ತೇವೆ. ಆದರೆ ಕಲ್ಪ ವೃಕ್ಷ ತೆಂಗಿನಕಾಯಿ, ಬಾಳೆಹಣ್ಣನ್ನೇ ಏಕೆ ಅರ್ಪಿಸಬೇಕು ಎಂದು ಎಂದಾದರು ಯೋಜಿಸಿದ್ದೀರಾ? ಬನ್ನಿ ಇಂದು ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ಬಗ್ಗೆ ವಿವರಿಸಿದ್ದಾರೆ.

ತೆಂಗಿನಕಾಯಿ, ಬಾಳೆಹಣ್ಣು ಇವೆರಡೂ ಪೂರ್ತಿ ಫಲಗಳು. ಹೀಗಾಗಿ ಇವುಗಳನ್ನು ಪವಿತ್ರ ಎನ್ನಲಾಗುತ್ತೆ. ಇವುಗಳಿಂದ ಭಕ್ತರ ಮನದ ಅಪೇಕ್ಷೆಗಳೂ ನೆರವೇರುವುದು ಖಂಡಿತ ಎಂಬ ಭಾವನೆ ಇದೆ. ಭೂಮಿಯಲ್ಲಿ ಬೆಳೆವ ಎಲ್ಲಾ ಗಿಡದ ಹಣ್ಣುಗಳೂ ಪಶು-ಪಕ್ಷಿಗಳು ಅಥವಾ ಮನುಷ್ಯರು ತಿಂದು ಎಸೆದ ಬೀಜದಿಂದ ಅಥವಾ ಹಕ್ಕಿಗಳ ಹಿಕ್ಕೆಯಿಂದ ಬೆಳೆಯುತ್ತವೆ. ಹೀಗಾಗಿ ಈ ಗಿಡ-ಮರಗಳು ಎಂಜಲಿನಿಂದ ಬೆಳೆದಂತಾಯಿತು. ಇವು ದೇವರಿಗೆ ಅರ್ಪಿಸಲು ನಿಷಿದ್ಧ. ಅಂದರೆ ಇವು ಅಪವಿತ್ರವಾದವು. ಆದರೆ, ತೆಂಗಿನಕಾಯಿ ಮತ್ತು ಬಾಳೆಹಣ್ಣು ಈ ರೀತಿ ಅಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ