ಅಮೆರಿಕಾ ಅಜೆಂಡಾ ಏನು? ಯುಎಸ್ ಸೇನೆಗೆ ಭಾರತವೇಕೆ ನೆಲೆ ಕೊಟ್ಟಿಲ್ಲ ಗೊತ್ತೇ? ಇಲ್ಲಿದೆ ಮಾಹಿತಿ

Updated on: Mar 31, 2026 | 1:15 PM

ಜಗತ್ತಿನ 70ಕ್ಕೂ ಹೆಚ್ಚು ದೇಶಗಳಲ್ಲಿ 750ಕ್ಕೂ ಅಧಿಕ ಅಮೆರಿಕಾದ ಸೇನಾನೆಲೆಗಳು ನೆಲೆಗೊಂಡಿವೆ. ಇದು ಅಮೆರಿಕಾದ ಜಾಗತಿಕ ರಾಜಕೀಯ ಕಾರ್ಯಸೂಚಿಯ ಭಾಗವಾಗಿದೆ. ಆದರೆ, ಭಾರತವು ಅಮೆರಿಕಾಗೆ ಸೇನಾನೆಲೆ ಸ್ಥಾಪನೆಗೆ ಅವಕಾಶ ನೀಡಿಲ್ಲ. ಭಾರತ ಕೊಡದೇ ಇರಲು ಕಾರಣ ಏನು? ಅಮೆರಿಕದ ಅಜೆಂಡಾ ಏನು? ಭಾರತದ ಪ್ಲಾನ್ ಏನು? ಎಲ್ಲ ಮಾಹಿತಿ ಇಲ್ಲಿದೆ.

ಅಮೆರಿಕಾದ ಸೇನಾನೆ ಲೆಗಳು ಜಗತ್ತಿನಾದ್ಯಂತ ವಿಸ್ತರಿಸಿದ್ದು, ಪ್ರಸ್ತುತ 70ಕ್ಕೂ ಹೆಚ್ಚು ದೇಶಗಳಲ್ಲಿ 750ಕ್ಕೂ ಅಧಿಕ ಸೇನಾ ನೆಲೆಗಳನ್ನು ಹೊಂದಿದೆ. ಈ ನೆಲೆಗಳು 195 ರಾಷ್ಟ್ರಗಳ ಮೇಲೆ 360 ಡಿಗ್ರಿ ಕಣ್ಗಾವಲು ಇಡುವ ಅಮೆರಿಕದ ಕಾರ್ಯಸೂಚಿಯ ಭಾಗವಾಗಿದೆ. 1898ರಲ್ಲಿ ಕ್ಯೂಬಾದಲ್ಲಿ ಮೊದಲ ವಿದೇಶಿ ನೆಲೆ ಸ್ಥಾಪಿಸಿದ ಅಮೆರಿಕಾ, ನಂತರ ಹಂತ ಹಂತವಾಗಿ ತನ್ನ ಸೇನಾನೆಲೆಗಳನ್ನು ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಿಗೆ ವಿಸ್ತರಿಸಿದೆ. ಈ ನೆಲೆಗಳು ಮೈತ್ರಿ ರಾಷ್ಟ್ರಗಳ ರಕ್ಷಣೆಯ ಜೊತೆಗೆ ಶತ್ರುಗಳ ಮೇಲೆ ಕಣ್ಣಿಡಲು ಮತ್ತು ಭವಿಷ್ಯದ ಯುದ್ಧಗಳಿಗೆ ಪೂರ್ವಸಿದ್ಧತೆಗಾಗಿ ನಿರ್ಮಿತವಾಗಿವೆ ಎಂದು ವಿಶ್ಲೇಷಿಸಲಾಗುತ್ತದೆ. ಇದೀಗ ಮಧ್ಯಪ್ರಾಚ್ಯ ಯುದ್ಧದ ಸಂದರ್ಭದಲ್ಲಿ ಅಮೆರಿಕಾದ ಸೇನಾನೆಲೆಗಳನ್ನು ಗುರಿಯಾಗಿಸಿ ಇರಾನ್‌ ದಾಳಿ ನಡೆಸುತ್ತಿರುವುದು ಗಮನಾರ್ಹ.

ಆದರೆ, ಭಾರತವು ಅಮೆರಿಕಾಗೆ ತನ್ನ ನೆಲದಲ್ಲಿ ಯಾವುದೇ ಸೇನಾನೆಲೆ ಸ್ಥಾಪಿಸಲು ಅವಕಾಶ ನೀಡಿಲ್ಲ. ಅಲಿಪ್ತ ನೀತಿ ಮತ್ತು ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುವ ಭಾರತವು, ಸೇನಾನೆಲೆಗಳು ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆ ಮತ್ತು ಭೂಭಾಗದ ಹಿಡಿತವನ್ನು ಕಡಿಮೆ ಮಾಡುತ್ತವೆ ಎಂಬ ನಿಲುವನ್ನು 1947ರಿಂದಲೂ ಹೊಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More