Loading video

ದರ್ಶನ್ ಅನ್ನು ಮದುವೆ ಆಗಲು ರೆಡಿ: ಬಳ್ಳಾರಿ ಜೈಲಿನ ಬಳಿ ಮಹಿಳೆ ಹೈಡ್ರಾಮಾ

|

Updated on: Sep 05, 2024 | 11:26 AM

ಪರಪ್ಪನ ಅಗ್ರಹಾರದಿಂದ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ವರ್ಗ ಮಾಡಲಾಗಿದೆ. ಇಂದು ಬೆಳಿಗ್ಗೆ ಜೈಲಿ ಬಳಿ ಬಂದಿದ್ದ ಮಹಿಳೆಯೊಬ್ಬರು ದರ್ಶನ್ ಅನ್ನು ಏಕೆ ಜೈಲಲ್ಲಿ ಇಟ್ಟಿದ್ದೀರಿ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ತನಗೆ ದರ್ಶನ್ ಎಂದರೆ ಇಷ್ಟ, ಅವರನ್ನು ಮದುವೆ ಆಗುತ್ತೀನಿ ಎಂದಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ದರ್ಶನ್ ಅನ್ನು ಭೇಟಿ ಆಗಲು ಬರುವವರ ಮೇಲೆ ಮಿತಿ ಹೇರಲಾಗಿದೆ. ಮೊದಲ ರಕ್ತ ಸಂಬಂಧಿಗಳು ಹಾಗೂ ಅವರ ವಕೀಲರು ಮಾತ್ರವೇ ದರ್ಶನ್ ಅನ್ನು ಬಂದು ಭೇಟಿ ಆಗಬಹುದು ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇಂದು (ಸೆಪ್ಟೆಂಬರ್ 05) ಮಹಿಳೆಯೊಬ್ಬರು ಜೈಲಿನ ಬಳಿ ಬಂದು ಮಾಧ್ಯಮಗಳ ಮುಂದೆ ಹೈಡ್ರಾಮಾ ಮಾಡಿದ್ದಾರೆ. ಸೇಬು ಇನ್ನಿತರೆ ಹಣ್ಣುಗಳನ್ನು ತಂದಿದ್ದ ಮಹಿಳೆ ತಾನು ದರ್ಶನ್ ಅನ್ನು ನೋಡಲೇ ಬೇಕು. ದರ್ಶನ್ ಅಂದರೆ ನನಗೆ ಬಹಳ ಇಷ್ಟ. ನಾನು ದರ್ಶನ್ ಅನ್ನು ಮದುವೆ ಆಗಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ