ಮಹಾರಾಷ್ಟ್ರದ ವಾಧವನ್ ಪೋರ್ಟ್; 12 ಲಕ್ಷ ಉದ್ಯೋಗ, 1 ಕೋಟಿ ಪರೋಕ್ಷ ಉದ್ಯೋಗಸೃಷ್ಟಿ ನಿರೀಕ್ಷೆ

Updated on: Aug 30, 2024 | 2:26 PM

ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ 150 ಕಿಮೀ ದೂರದಲ್ಲಿರುವ ಪಾಲ್ಘರ್ ಜಿಲ್ಲೆಯ ಕರಾವಳಿಯಲ್ಲಿ ನಿರ್ಮಾಣವಾಗುತ್ತಿರುವ ವಾಧವನ್ ಬಂದರು ವಿಶ್ವದರ್ಜೆಯದ್ದಾಗಿರಲಿದೆ

ಮುಂಬೈ, ಆಗಸ್ಟ್ 30: ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ 150 ಕಿಮೀ ದೂರದಲ್ಲಿರುವ ಪಾಲ್ಘರ್ ಜಿಲ್ಲೆಯ ಕರಾವಳಿಯಲ್ಲಿ ನಿರ್ಮಾಣವಾಗುತ್ತಿರುವ ವಾಧವನ್ ಬಂದರು ವಿಶ್ವದರ್ಜೆಯದ್ದಾಗಿರಲಿದೆ. ಒಂದು ಕಂಟೇನರ್ ಟರ್ಮಿನಲ್​ಗಳನ್ನು ಹೊಂದಿರಲಿರುವ ಈ ಬೃಹತ್ ಪೋರ್ಟ್​ನಿಂದ 12 ಲಕ್ಷ ನೇರ ಉದ್ಯೋಗಗಳು ಹಾಗೂ ಒಂದು ಕೋಟಿಗೂ ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಈ ಪೋರ್ಟ್​ನಿಂದ ಜಿಡಿಪಿಗೆ ಪುಷ್ಟಿ ಸಿಗುವುದರ ಜೊತೆಗೆ ಮಹಾರಾಷ್ಟ್ರದ ಮೂಲಸೌಕರ್ಯ ಅಭಿವೃದ್ಧಿಯೂ ಆಗುತ್ತದೆ.

Loading...
Unable to load recommendations.
Follow Us
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More