ಬೆಂಗಳೂರಲ್ಲಿ ರಸ್ತೆಗುಂಡಿಗಳಿಂದಾಗಿ ಇನ್ನೊಂದು ಅನಾಹುತ, ದಂಪತಿ ಮತ್ತು ಪುಟ್ಟ ಮಗು ಭಾರೀ ಅಪಾಯದಿಂದ ಪಾರು!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Nov 21, 2022 | 11:10 AM

ಬಿಬಿಎಮ್ ಅಧಿಕಾರಿಗಳು ಮತದದಾರರ ಡಾಟಾ ಕಳುವು ಮಾಡುವ ಮಹತ್ಕಾರ್ಯದಲ್ಲಿ ತಲ್ಲೀನರಾಗಿರಬೇಕಾದರೆ, ರಸ್ತೆಗುಂಡಿಗಳು ಎಂದಿನಂತೆ ಅನಾಥ!

ಬೆಂಗಳೂರಿನ ರಸ್ತೆಗುಂಡಿಗಳ ಸಮಸ್ಯೆ ಈ ಶತಮಾನದಲ್ಲೂ ಕೊನೆಗಾಣುವ ಲಕ್ಷಣಗಳಿಲ್ಲ. ರವಿವಾರ ರಾತ್ರಿ ನಗರದ ಬಸವನಗುಡಿ (Basavana Gudi) ಏರಿಯಾದ ಟ್ಯಾಗೋರ್ ಸರ್ಕಲ್ ಬಳಿ ಸ್ಕೂಟರ್ ಸವಾರೊಬ್ಬರು ತಮ್ಮ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಹೋಗುವಾಗ ಇಲ್ಲಿ ಕಾಣುತ್ತಿರುವ ಮ್ಯಾನ್ ಹೋಲ್ (manhole) ಮುಚ್ಚಳ ತೆರೆದುಕೊಂಡಿದ್ದರಿಂದ ವಾಹನದ ಚಕ್ರ ಅದರಲ್ಲಿ ಸಿಕ್ಹಾಕಿಕೊಂಡು ಮಗುವಿನೊಂದಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರೆಲ್ಲರಿಗೆ ಚಿಕ್ಕಪುಟ್ಟ ಗಾಯಗಳು ಮಾತ್ರ ಆಗಿವೆ. ಬಿಬಿಎಮ್ ಅಧಿಕಾರಿಗಳು ಮತದದಾರರ ಡಾಟಾ ಕಳುವು (voter date theft) ಮಾಡುವ ಮಹತ್ಕಾರ್ಯದಲ್ಲಿ ತಲ್ಲೀನರಾಗಿರಬೇಕಾದರೆ, ರಸ್ತೆಗುಂಡಿಗಳು ಎಂದಿನಂತೆ ಅನಾಥ!

ಇನ್ನಷ್ಟು ವಿಡಿಯೋ ಸ್ಟೋರಿಗಳನ್ನು  ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
TV9 Web

TV9 Kannada

Read More