ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ ಪುಟ್ಟ ಬಾಲಕಿ; ನೆಟ್ಟಿಗರ ಹೃದಯ ಕದ್ದ ಚೋರಿ

|

Updated on: Dec 04, 2024 | 7:48 PM

ಮುದ್ದಾಗಿ ಅಭಿನಯಿಸುತ್ತಾ ರೀಲ್​ ಮಾಡಿರುವ ಬಾಲಕಿಯ ಈ ವೈರಲ್ ವೀಡಿಯೊ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಇದಕ್ಕೆ 50,000ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ಗುಜರಾತ್‌ನ ಅಹಮದಾಬಾದ್‌ನ 5 ವರ್ಷದ ಹುಡುಗಿ ಆನ್ಯಾ ರಾಹುಲ್ ಪಟೇಲ್, ಸನಮ್ ಪುರಿಯ ಎವರ್‌ಗ್ರೀನ್ ಹಿಟ್ “ಯೇ ರಾತೇನ್ ಯೇ ಮೌಸಂ” ಗೆ ತನ್ನ ಆಕರ್ಷಕ ಅಭಿನಯದ ಮೂಲಕ ಇಂಟರ್ನೆಟ್​ನಲ್ಲಿ ವೈರಲ್ ಆಗಿದ್ದಾಳೆ. ಕೆಂಪು ಬಣ್ಣದ ಫ್ರಾಕ್ ಧರಿಸಿ ಕುಳಿತ ಈ ಪುಟ್ಟ ಹುಡುಗಿ ಹಿಂದಿ ಹಾಡಿಗೆ ಲಿಪ್ ಸಿಂಕ್ ಮಾಡುತ್ತಾ, ಮುಖದಲ್ಲಿ ಅದ್ಭುತವಾದ ಭಾವನೆಗಳನ್ನು ಹೊರಹಾಕುತ್ತಾ ಅಭಿನಯಿಸುವುದನ್ನು ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಈ ಹುಡುಗಿಯ ಟ್ಯಾಲೆಂಟ್​ಗೆ ಫಿದಾ ಆಗಿದ್ದಾರೆ. ನೀವಿನ್ನೂ ಈ ವಿಡಿಯೋ ನೋಡಿಲ್ಲವೆಂದಾದರೆ ಒಮ್ಮೆ ನೋಡಿ ಬಿಡಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ