ಹುಬ್ಬಳ್ಳಿ: ಪೊಲೀಸ್​ ಅಧಿಕಾರಿ ಎದುರಲ್ಲೇ ಯುವಕರ ಹೊಡೆದಾಟ; ವಿಡಿಯೋ ವೈರಲ್​

Edited By: ವಿವೇಕ ಬಿರಾದಾರ

Updated on: Dec 31, 2023 | 8:31 AM

ನಡುರಸ್ತೆಯಲ್ಲಿ ಪೊಲೀಸ್ ​ ಅಧಿಕಾರಿ ಎದುರಲ್ಲೇ ಯುವಕರು ಹೊಡೆದಾಡಿಕೊಂಡಿರವ ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಫರ್ಜಾನ್ ಹೊಟೆಲ್ ಮುಂಭಾಗದಲ್ಲಿ ನಡೆದಿದೆ. ಯುವಕರು ಹೊಡದಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹುಬ್ಬಳ್ಳಿ, ಡಿಸೆಂಬರ್​ 31: ನಡುರಸ್ತೆಯಲ್ಲಿ ಪೊಲೀಸ್ (Police)​ ಅಧಿಕಾರಿ ಎದುರಲ್ಲೇ ಯುವಕರು ಹೊಡೆದಾಡಿಕೊಂಡಿರವ ಘಟನೆ ಕಾರವಾರ ರಸ್ತೆಯಲ್ಲಿರುವ (Hubballi Karwar Road) ಫರ್ಜಾನ್ ಹೊಟೆಲ್ ಮುಂಭಾಗದಲ್ಲಿ ನಡೆದಿದೆ. ಯುವಕರು ಹೊಡದಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಊಟದ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ನಡು ರಸ್ತೆಯಲ್ಲಿ ಓರ್ವ ಯುವಕನಿಗೆ ಹೊಡೆದು, ಒದ್ದು ಹಲ್ಲೆ ಮಾಡಲಾಗಿದೆ. ಮತ್ತೊರ್ವ ಯುವಕನ ಮೇಲೆ ನಾಲ್ಕೈದು ಜನರು ಹಲ್ಲೆ ಮಾಡಿದ್ದಾರೆ. ಹೀಗೆ ಹಲ್ಲೆ ಮಾಡುವಾಗ ಪೊಲೀಸ್​ ಅಧಿಕಾರಿ ಬಂದಿದ್ದಾರೆ. ಆದರೂ ಕೂಡ ಡೋಂಟ್​​ ಕೇರ್​​ ಎಂದು ಪೊಲೀಸರ ಮುಂದೆಯೇ ಯುವಕರು ಹೊಡೆದಾಡಿಕೊಂಡಿದ್ದಾರೆ. ಹಳೇ ಹುಬ್ಬಳ್ಳಿಯ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Follow Us
Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More