Weekly Horoscope: ಆಗಸ್ಟ್ 3 ರಿಂದ 9ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

Updated on: Aug 02, 2026 | 10:26 AM

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು ಆಗಸ್ಟ್ 3 ರಿಂದ 9 ರವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ವಾರದಲ್ಲಿನ ಗ್ರಹಗಳ ಗೋಚಾರ, ಪ್ರಮುಖ ಘಟನೆಗಳು ಹಾಗೂ ಮೇಷ, ವೃಷಭ, ಮಿಥುನ ಮತ್ತು ಕರ್ಕಾಟಕ ರಾಶಿಗಳ ಮೇಲೆ ಅವುಗಳ ಪ್ರಭಾವದ ಕುರಿತು ವಿಶ್ಲೇಷಿಸಲಾಗಿದೆ. ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ತಿಳಿದುಕೊಳ್ಳಿ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು ಆಗಸ್ಟ್ 3 ರಿಂದ ಆಗಸ್ಟ್ 9 ವರೆಗಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ವಿವರಿಸಿದ್ದಾರೆ. ಈ ವಾರವು ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು ಮತ್ತು ಕೃಷ್ಣ ಪಕ್ಷವನ್ನು ಒಳಗೊಂಡಿದೆ. ಈ ವಾರದಲ್ಲಿ ಮೇಲುಕೋಟೆ ರಾಜಮುಡಿ ಉತ್ಸವ, ಗಂಗಾವತಿ ಶಿವಯೋಗಿಗಳ ವರ್ಧಂತ್ಯೋತ್ಸವ, ಬಾಲಗಂಗಾಧರ ತಿಲಕರ ಆರಾಧನಾ ಮಹೋತ್ಸವ ಮತ್ತು ಚಾಮುಂಡೇಶ್ವರಿ ವರ್ಧಂತ್ಯೋತ್ಸವದಂತಹ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಗ್ರಹಗಳ ಗೋಚಾರದ ಪ್ರಕಾರ, ಶನಿ ಗ್ರಹ ಮೀನ ರಾಶಿಯಲ್ಲಿ, ಬುಧ ಮತ್ತು ಕುಜ ಗ್ರಹಗಳು ಮಿಥುನ ರಾಶಿಯಲ್ಲಿ ಸಂಚಾರ ಮಾಡಲಿದ್ದು, ಗುರು ಮತ್ತು ರವಿ ಗ್ರಹಗಳು ಕರ್ಕಾಟಕ ರಾಶಿಯಲ್ಲಿ ನೆಲೆಸಿವೆ. ಕೇತು ಸಿಂಹ ರಾಶಿಯಲ್ಲಿ, ಶುಕ್ರ ಕನ್ಯಾ ರಾಶಿಯಲ್ಲಿ ಮತ್ತು ರಾಹು ಕುಂಭ ರಾಶಿಯಲ್ಲಿ ಸಂಚಾರ ಮಾಡಲಿವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More