
ಕಾಂಗೋ, ಅಕ್ಟೋಬರ್ 5: ಕಾಂಗೋ ನದಿಯಲ್ಲಿ 2 ಬೋಟ್ಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ 30 ಜನರು ಜಲಸಮಾಧಿಯಾಗಿದ್ದು, ಹತ್ತಾರು ಜನರು ನಾಪತ್ತೆಯಾಗಿದ್ದಾರೆ ಎಂದು ಕಾಂಗೋ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತವು ಭಾನುವಾರ ಎಕ್ವೇಟರ್ ಪ್ರಾಂತ್ಯದ ನ್ಗೊಂಬೆ-ಲುಕೋಲೆಲಾ ಪ್ರದೇಶದ ಬಳಿ ಸಂಭವಿಸಿದೆ.
ಅಪಘಾತಕ್ಕೊಳಗಾದ ಒಂದು ದೋಣಿಯು ದೇಶದ ವಾಯುವ್ಯ ಭಾಗದ ಉಬಾಂಗಿಯಿಂದ ಕಾಂಗೋ ರಾಜಧಾನಿ ಕಿನ್ಶಾಸಾಗೆ ಪ್ರಯಾಣಿಸುತ್ತಿತ್ತು. ಮತ್ತೊಂದು ದೋಣಿಯು ಕಿನ್ಶಾಸಾದಿಂದ ಲುಕೋಲೆಲಾಗೆ ತೆರಳುತ್ತಿತ್ತು. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಸಂತ್ರಸ್ತರು ಮತ್ತು ಬದುಕುಳಿದವರ ಹುಡುಕಾಟಕ್ಕಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕುಮಟಾ ತದಡಿ ಬಂದರಿನಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ: ಎರಡೇ ದಿನಗಳಲ್ಲಿ 2ನೇ ಬೋಟ್ ದುರಂತ
ರಕ್ಷಣಾ ಪಡೆಯ ಪ್ರತ್ಯಕ್ಷದರ್ಶಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಉಬಾಂಗಿಯಿಂದ ಬರುತ್ತಿದ್ದ ದೋಣಿಯಲ್ಲಿ ಅತಿಯಾದ ಸರಕುಗಳನ್ನು ಹೇರಲಾಗಿತ್ತು. ಡಿಕ್ಕಿಯಾದ ತಕ್ಷಣವೇ ಆ ದೋಣಿ ನೀರಿನಲ್ಲಿ ಮುಳುಗಿದ್ದು, ಅದರಲ್ಲಿದ್ದ ಪ್ರಯಾಣಿಕರು ನೀರಿನ ಅಡಿಯಲ್ಲಿ ಸಿಲುಕಿಕೊಂಡರು.
News Alert! A boat collision on the Congo River has killed at least 30 people and dozens are missing, reports AP quoting Congolese officials. https://t.co/CEzBs2bM1O
— Press Trust of India (@PTI_News) October 5, 2026
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಇಂತಹ ಮಾರಣಾಂತಿಕ ಬೋಟ್ ಅಪಘಾತಗಳು ಅತ್ಯಂತ ಸಾಮಾನ್ಯವಾಗುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೇ ಪೂರ್ವ ಕಾಂಗೋದ ‘ಕಿವು ಸರೋವರ’ದಲ್ಲಿ ದೋಣಿಯೊಂದು ಮುಳುಗಿ 12 ಜನರು ಸಾವನ್ನಪ್ಪಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ