2ನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ವೃದ್ಧೆ ಕೊರೊನಾದಿಂದ ಗುಣಮುಖ

| Updated By:

Updated on: May 30, 2020 | 2:00 PM

2ನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ರಷ್ಯಾದ 96 ವರ್ಷದ ವೃದ್ಧೆ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಮಾಸ್ಕೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಅನಾಸ್ಟಾಸಿಯಾ ಕುರ್ನೋಸಿಖ್, ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ನನ್ನನ್ನ ತುಂಬಾ ಚೆನ್ನಾಗಿ ಟ್ರೀಟ್ ಮಾಡಿದ್ರು ಅಂತಾ ಗುಣಗಾನ ಮಾಡಿದ್ದಾರೆ. ನ್ಯುಮೇನಿಯಾದಿಂದ ಬಳಲುತ್ತಿದ್ದ ವೃದ್ಧೆ 20 ದಿನಗಳ ಹಿಂದೆ ಕೊರೊನಾಗೆ ಪೀಡಿತರಾಗಿ, ಆಸ್ಪತ್ರೆ ಸೇರಿಸಿದ್ರು. ಪೋರ್ಚುಗಲ್ ಲಾಕ್​ ಮುಕ್ತ​: ಕೊರೊನಾ ವೈರಸ್​ನಿಂದಾಗಿ ಆರಂಭದಲ್ಲಿ ನಲುಗಿದ್ದ ಪೋರ್ಚುಗಲ್, ಲಾಕ್​ಡೌನ್ ಸಡಿಲಿಕೆ ಮಾಡ್ತಿದೆ. ರಾಜಧಾನಿ ಲಿಸ್ಬಾನ್​ನಲ್ಲಿ ಬಂದ್ದ ಆಗಿದ್ದ ಸಿನಿಮಾ ಹಾಲ್​ಗಳು, ಮಾಲ್​ಗಳು, […]

2ನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ವೃದ್ಧೆ ಕೊರೊನಾದಿಂದ ಗುಣಮುಖ
Follow us on

2ನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ರಷ್ಯಾದ 96 ವರ್ಷದ ವೃದ್ಧೆ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಮಾಸ್ಕೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಅನಾಸ್ಟಾಸಿಯಾ ಕುರ್ನೋಸಿಖ್, ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ನನ್ನನ್ನ ತುಂಬಾ ಚೆನ್ನಾಗಿ ಟ್ರೀಟ್ ಮಾಡಿದ್ರು ಅಂತಾ ಗುಣಗಾನ ಮಾಡಿದ್ದಾರೆ. ನ್ಯುಮೇನಿಯಾದಿಂದ ಬಳಲುತ್ತಿದ್ದ ವೃದ್ಧೆ 20 ದಿನಗಳ ಹಿಂದೆ ಕೊರೊನಾಗೆ ಪೀಡಿತರಾಗಿ, ಆಸ್ಪತ್ರೆ ಸೇರಿಸಿದ್ರು.

ಪೋರ್ಚುಗಲ್ ಲಾಕ್​ ಮುಕ್ತ​:
ಕೊರೊನಾ ವೈರಸ್​ನಿಂದಾಗಿ ಆರಂಭದಲ್ಲಿ ನಲುಗಿದ್ದ ಪೋರ್ಚುಗಲ್, ಲಾಕ್​ಡೌನ್ ಸಡಿಲಿಕೆ ಮಾಡ್ತಿದೆ. ರಾಜಧಾನಿ ಲಿಸ್ಬಾನ್​ನಲ್ಲಿ ಬಂದ್ದ ಆಗಿದ್ದ ಸಿನಿಮಾ ಹಾಲ್​ಗಳು, ಮಾಲ್​ಗಳು, ಜಿಮ್ ಹಾಗೂ ಪ್ರಾಥಮಿಕ ಶಾಲೆಗಳನ್ನ ತೆರೆಯಲು ಸಿದ್ಧತೆ ನಡೆಸಲಾಗ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 31,936 ಇದ್ರೆ ಸೋಂಕಿನಿಂದಾಗಿ 1,383 ಜನರು ಸಾವನ್ನಪ್ಪಿದ್ದಾರೆ.

ತೆರೆದಿದ್ದ ಶಾಲೆಗಳು ಮತ್ತೆ ಕ್ಲೋಸ್:
ದಕ್ಷಿಣ ಕೊರಿಯಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದೇ ತಡ, ಶಾಲೆಗಳು ರೀ ಓಪನ್ ಆಗಿದ್ವು. ದೇಶದಲ್ಲಿನ 251ಕ್ಕೂ ಹೆಚ್ಚು ಶಾಲೆಗಳು ತೆರೆದಿದ್ದರಿಂದ 2.37 ಮಿಲಿಯನ್ ವಿದ್ಯಾರ್ಥಿಗಳು ಶಾಲೆಗೆ ಹಾಜರ್ ಆಗಿದ್ರು. ಆದ್ರೆ, ಪಶ್ಚಿಮ ಸಿಯೋಲ್​ನ ಬುಷೆನ್​ನಲ್ಲಿ ಸೋಂಕು ಹೆಚ್ಚಿದ್ದೇ ತಡ, ಮತ್ತೆ ಶಾಲೆಗಳನ್ನ ಕ್ಲೋಸ್ ಮಾಡುವಂತೆ ಸರ್ಕಾರ ಆದೇಶಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ತರಗತಿಗಳನ್ನ ತೆರೆದಿದ್ದರೂ ಮುನ್ನೆಚ್ಚರಿಕೆಯಿಂದ ಶಾಲೆಗಳನ್ನ ಬಂದ್ ಮಾಡಲಾಗಿದೆ.

ಗರ್ಭಪಾತಕ್ಕಾಗಿ ಹೋರಾಟ:
ಅರ್ಜೆಂಟಿನಾವನ್ನ ಕೊರೊನಾ ವೈರಸ್ ಇಂಚಿಂಚು ಆವರಿಸಿಕೊಳ್ತಿದೆ. ಇದ್ರ ಮಧ್ಯೆ ಮತ್ತೊಂದು ಕಿಚ್ಚು ಮತ್ತೆ ಜೀವ ಪಡೆದುಕೊಂಡಿದೆ. ದೇಶದಲ್ಲಿ ಗರ್ಭಪಾತ ಕಾನೂನು ಜಾರಿಗಾಗಿ ಸಾವಿರಾರು ಮಹಿಳೆಯರು ಬೌನೇಸ್ ಏರ್ಸ್​​ನಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಅರ್ಜೆಂಟಿನಾದಲ್ಲಿ ಗರ್ಭಪಾತ ಮಾಡುವುದು ಅಕ್ರಮ. ಹೀಗಾಗಿ, ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಗರ್ಭಪಾತಕ್ಕೆ ಅವಕಾಶ ನೀಡಿ ಅಂತಾ, ಲಾಕ್​ಡೌನ್ ಉಲ್ಲಂಘಿಸಿ ಹಸಿರು ಬಣ್ಣದ ಕರ್ಚೀಫ್​ಗಳನ್ನಿಡಿದು ಪ್ರತಿಭಟಿಸಿದ್ರು.

ಕೀನ್ಯಾ ಪ್ರವಾಸೋದ್ಯಮಕ್ಕೆ ಕುತ್ತು:
ಕೊರೊನಾ ವೈರಸ್​ನಿಂದಾಗಿ ವಿಶ್ವದ ಪ್ರವಾಸೋದ್ಯಮವೇ ಮಕಾಡೆ ಮಲಗಿದೆ. ಇನ್ನು ಟೂರಿಸಂ ಅನ್ನೇ ನಂಬಿಕೊಂಡಿದ್ದ ಬಡ ರಾಷ್ಟ್ರ ಕೀನ್ಯಾಗೆ ಕೊರೊನಾ ಆರ್ಥಿಕವಾಗಿ ಕುತ್ತು ತಂದಿದೆ. ನೈರೋಬಿಯ ಮೃಗಾಲಯದಲ್ಲಿ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ. ಪ್ರಾಣಿಗಳಿಗೆ ಆಹಾರ ನೀಡುವುದಕ್ಕೂ ಕಷ್ಟವಾಗ್ತಿದೆ ಅಂತಿದ್ದಾರೆ ನೈರೋಬಿಯ ಜೂನಲ್ಲಿರುವ ಆಡಳಿತ ಮಂಡಳಿ.

ಥಳಿಸಿದ ಹುಡುಗಿಯರು..!
ಅಟ್ಲಾಂಟಾ ಹೋಟೆಲ್​ನ ಹೊರ ಭಾಗದಲ್ಲಿ ಮೂವರು ಹುಡುಗಿಯರು ಸ್ಮೋಕಿಂಗ್ ಮಾಡ್ತಿದ್ದಾರೆ. ಇದನ್ನ ಹೋಟೆಲ್​ನ ಸೆಕ್ಯೂರಿಟಿ ಗಾರ್ಡ್ ಕೇಳಿದ್ದೇ ತಡ, ಮತ್ತಿನ ಗಮ್ಮತ್ತಿನಲ್ಲಿ ತೇಲ್ತಿದ್ದ ಮೂವರು ಹುಡುಗಿಯರು ಗರಂ ಆಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೋಟೆಲ್​ನ ಎಲಿವೇಟರ್​ಗೆ ಹೋಗಲು ಬಿಡದೇ ಇದ್ದುದ್ದಕ್ಕೆ ಮಹಿಳೆಯರು ಕಿಡಿಕಾರಿದ್ದಾಗಿ ಸಿಕ್ಯೂರಿಟಿ ಹೇಳಿದ್ದಾನೆ.

ಕಾರ್ ಕಂಪನಿ ವಿರುದ್ಧ ‘ಕಿಚ್ಚು’:
ಕೊರೊನಾ ಲಾಕ್​ಡೌನ್​ನಿಂದಾಗಿ ಸ್ಪೇನ್​ನಲ್ಲಿನ ನಿಸ್ಸಾನ್ ಕಾರು ಕಂಪನಿ ಸ್ಥಗಿತಗೊಂಡಿದೆ. ಜಾಗತಿಕ ಮಟ್ಟದಲ್ಲಿ ಕಾರು ಮಾರಾಟ ಕುಸಿದಿರೋದ್ರಿಂದ ಮೂರು ಕಾರು ಉತ್ಪಾದನಾ ಘಟಕಗಳನ್ನ ಮುಚ್ಚಲಾಗಿದೆ. ಹೀಗಾಗಿ, ನೂರಾರು ಕಾರ್ಮಿಕರು ಬೀದಿಗೆ ಬಂದಿದ್ದಾರೆ. ನಿಸ್ಸಾನ್ ಕಾರು ಡೀಲಸ್​ಶಿಪ್ ಎದುರು ಪ್ರತಿಭಟನೆ ನಡೆಸಿದ್ರು. ಇದೇ ಸಂಸ್ಥೆಯನ್ನ ನಂಬಿ 25 ಸಾವಿರ ಕುಟುಂಬಗಳು ಜೀವನ ನಡೆಸುತ್ತಿದ್ದು, ಸಂಕಷ್ಟ ಎದುರಿಸುತ್ತಿದ್ದಾರೆ.

ಚೀನಾ ವಿದ್ಯಾರ್ಥಿಗಳಿಗೆ ನಿರ್ಬಂಧ:
ಚೀನಾವನ್ನ ಕಂಡರೆ ಕೆಂಡ ಕಾರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಚೀನಾದ ವಿರುದ್ಧ ಅಮೆರಿಕದಿಂದ ಕಠಿಣ ಕ್ರಮಕ್ಕೆ ನಿರ್ಧಾರ ತೆಗೆದುಕೊಂಡಿದ್ದು, ಅಮೆರಿಕ ವಿವಿಗಳಿಗೆ ಚೀನಾ ಪ್ರಜೆಗಳ ಪ್ರವೇಶ ಸ್ಥಗಿತಗೊಳಿಸಿದ್ದಾರೆ. ಚೀನಾ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಿರೋದಾಗಿ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.