ಕಾಬೂಲ್: ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಉಗ್ರರ ವಶವಾಗುತ್ತಿದ್ದಂತೆ ಸಾಕಷ್ಟು ಜನರು ದೇಶ ತೊರೆಯಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಜನಸಾಗರವೇ ಹರಿದುಬರುತ್ತಿದೆ. ಈಗಾಗಲೇ ಅಫ್ಘಾನಿಸ್ಥಾನದಲ್ಲಿದ್ದ ಭಾರತದ ಅಧಿಕಾರಿಗಳನ್ನು ಏರ್ಲಿಫ್ಟ್ ಮೂಲಕ ಭಾರತಕ್ಕೆ ಕರೆತರಲಾಗಿದೆ. ಹಾಗೇ, ಬೇರೆ ದೇಶಗಳಿಂದಲೂ ಅಫ್ಘಾನಿಸ್ತಾನದಲ್ಲಿ ವಾಸವಾಗಿರುವ ತಮ್ಮ ದೇಶದ ಜನರನ್ನು ಕರೆಸಿಕೊಳ್ಳಲಾಗುತ್ತಿದೆ. ಒಂದೇ ದಿನಕ್ಕೆ ಅಫ್ಘಾನ್ನಿಂದ 1,500ಕ್ಕೂ ಹೆಚ್ಚು ಜನರು ಬೇರೆ ದೇಶಗಳಿಗೆ ತೆರಳುತ್ತಿದ್ದಾರೆ. ಈ ನಡುವೆ ಕಾಬೂಲ್ ವಿಮಾನದಲ್ಲಿ ಉಂಟಾದ ಗಲಾಟೆ, ಗುಂಡಿನ ದಾಳಿಯಲ್ಲಿ 5ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
ಅಫ್ಘಾನ್ನಿಂದ ತಮ್ಮ ದೇಶಕ್ಕೆ ತೆರಳಲು ನೂರಾರು ಜನರು ಒಂದೇ ಬಾರಿಗೆ ವಿಮಾನ ಹತ್ತಲು ನುಗ್ಗತೊಡಗಿದ್ದಾರೆ. ಇದರಿಂದ ನೂಕುನುಗ್ಗಲಾಗಿ, ಕಾಲ್ತುಳಿತ, ಎಳೆದಾಟ ನಡೆದಿದ್ದು, ಗುಂಡಿನ ದಾಳಿಯೂ ನಡೆದಿದೆ. ಈ ಗಲಾಟೆಯಲ್ಲಿ 5ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕೆಲವು ದೇಶಗಳು ತಮ್ಮ ಪ್ರಜೆಗಳನ್ನು ಏರ್ಲಿಫ್ಟ್ ಮಾಡಿ ಕರೆಸಿಕೊಳ್ಳುತ್ತಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಂಟಾಗಿರುವ ಗಲಾಟೆಯ ವಿಡಿಯೋಗಳು ವೈರಲ್ ಆಗಿವೆ. ಜರ್ಮನಿ, ರಷ್ಯಾ ಸೇರಿದಂತೆ ಅನೇಕ ರಾಷ್ಟ್ರಗಳು ತಮ್ಮ ದೇಶದ ಪ್ರಜೆಗಳನ್ನು ಕರೆಸಿಕೊಳ್ಳಲು ವಿಶೇಷ ವಿಮಾನದ ವ್ಯವಸ್ಥೆ ಮಾಡುತ್ತಿವೆ.
This is, perhaps, one of the saddest images I’ve seen from #Afghanistan. A people who are desperate and abandoned. No aid agencies, no UN, no government. Nothing. pic.twitter.com/mvJKdf8ZQE
— Ankita mishra (@AnkitaKavya) August 16, 2021
ಈಗಾಗಲೇ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಾಬೂಲ್ನಿಂದ ಹೊರಹೋಗುವ ಕಮರ್ಷಿಯಲ್ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಲೂಟಿ, ಅವಾಂತರಗಳನ್ನು ತಡೆಯುವುದಕ್ಕಾಗಿ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದಿಂದ ಯಾವುದೇ ವಾಣಿಜ್ಯ ವಿಮಾನಗಳು ಕಾರ್ಯನಿರ್ವಹಣೆ ಮಾಡುವುದಿಲ್ಲ. ದಯವಿಟ್ಟು ವಿಮಾನ ನಿಲ್ದಾಣಕ್ಕೆ ಧಾವಿಸಬೇಡಿ ಎಂದು ಕಾಬೂಲ್ ವಿಮಾನ ನಿಲ್ದಾಣ ಪ್ರಾಧಿಕಾರ ಸಂದೇಶ ಕಳಿಸಿದೆ.
“I can’t believe the world abandoned #Afghanistan. Our friends are going to get killed. They (Taliban) are going to kill us. Our women are not going to have any more rights,” says a woman who arrived in Delhi from Kabul ~ @ANIpic.twitter.com/MvRGhRKLFx#Afghanistan
— JUO P.Hanmanthu Naik (@PHanmanthuNaik1) August 16, 2021
ಈ ನಡುವೆ ಝೆಕ್ ಗಣರಾಜ್ಯ ಸ್ಥಳಾಂತರಿಸುವಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕಾಬೂಲ್ ಅಂತಾರಾಷ್ಟ್ರೀಯ ವಿಮಾನದಿಂದ ಟೇಕ್ ಆಫ್ ಆಗಿ ಪ್ರೇಗ್ ಗೆ ಬಂದಿಳಿದಿದೆ. ಅಫ್ಘಾನಿಸ್ತಾನದಿಂದ ಸುಮಾರು 20 ವರ್ಷಗಳ ನಂತರ ಅಮೆರಿಕಾದ ಸೇನಾ ಪಡೆಗಳನ್ನು ಹಿಂಪಡೆದಿದ್ದರಿಂದ ತಾಲಿಬಾನ್ ಉಗ್ರರು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುವಂತಾಗಿದ್ದು, ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬಿಡೆನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ದೋಹಾದಲ್ಲಿ 2020ರಲ್ಲಿ ತಾಲಿಬಾನ್ ಜೊತೆಗೆ ನಡೆದ ಒಪ್ಪಂದದ ಸಂದರ್ಭದಲ್ಲಿ ಮೇ 2021ರೊಳಗೆ ಅಮೆರಿಕ ತನ್ನ ಎಲ್ಲಾ ಸೇನೆಯನ್ನು ವಶಕ್ಕೆ ಪಡೆಯುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಉಗ್ರರಿಂದ ಕೆಲವೊಂದು ಭದ್ರತಾ ಗ್ಯಾರಂಟಿಯನ್ನೂ ವಿನಿಮಯ ಮಾಡಿಕೊಳ್ಳಲಾಗಿತ್ತು.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲಿಬಾನ್ ವಶಕ್ಕೆ ಒಳಪಟ್ಟಿದ್ದರಿಂದ ರಕ್ತಪಾತವನ್ನು ತಡೆಯುವ ಸಲುವಾಗಿ ಅಫ್ಘಾನಿಸ್ತಾನವನ್ನು ತೊರೆದಿದ್ದಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ. ಅಫ್ಘಾನಿಸ್ತಾನದಿಂದ ಪಲಾಯನವಾದ ಬಳಿಕ ಫೇಸ್ಬುಕ್ನಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅಶ್ರಫ್ ಘನಿ, ಇಂದಿನಿಂದ ಅಫ್ಘಾನಿಸ್ತಾನದ ಜನರ ರಕ್ಷಣೆ, ಗೌರವ ಮತ್ತು ಸಂಪತ್ತಿನ ಹೊಣೆಯನ್ನು ತಾಲಿಬಾನ್ ಹೊರಲಿದೆ ಎಂದು ಹೇಳಿದ್ದಾರೆ. ಈಗ ಅವರು ದೇಶದ ಜನರ ಗೌರವ, ಸಂಪತ್ತು ಮತ್ತು ಸ್ವಾಭಿಮಾನವನ್ನು ರಕ್ಷಿಸುವ ಹೊಣೆ ಹೊತ್ತಿದ್ದಾರೆ. ಒಂದು ವೇಳೆ ನಾನು ದೇಶ ತೊರೆಯದಿದ್ದರೆ 6 ಮಿಲಿಯನ್ ಜನರ ಪ್ರಾಣಕ್ಕೆ ಸಂಚಕಾರ ಎದುರಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ, ಕಾಬೂಲ್ ಏರ್‌ಪೋರ್ಟ್ ಬಳಿ ಫೈರಿಂಗ್, ವಿಮಾನಗಳ ಹಾರಾಟ ರದ್ದು
(Afghanistan Crisis at least 5 Killed at Kabul Airport amid of Chaos)
Published On - 2:03 pm, Mon, 16 August 21