ಅಮೆರಿಕ ಚುನಾವಣೆ ಹೇಗಾಗುತ್ತೆ ಗೊತ್ತಾ? ಭಾರತದ ಕಮಲಾ ಗೆದ್ದು ನಿರ್ಮಿಸುತ್ತಾರಾ ಇತಿಹಾಸ?

|

Updated on: Aug 16, 2020 | 12:40 AM

ವಾಷಿಂಗ್‌ಟನ್‌: ಇಡೀ ವಿಶ್ವದ ಚಿತ್ತ ಈಗ ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿಯಾಗಿರುವ ಅಮೆರಿಕದತ್ತ ನೆಟ್ಟಿದೆ. ಇದಕ್ಕೆ ಕಾರಣ ಈಗ ಅಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆ. ಹಾಗಾಗಿಯೇ ಇಡೀ ಜಗತ್ತಿಗೆ ರಾಜಧಾನಿ ಅಂಥವಾ ಹೆಡ್‌ ಕ್ವಾರ್ಟ್‌ರ್‌ನಂತೆ ವರ್ತಿಸುವ ಅಮೆರಿಕದ ಚುನಾವಣೆ ಹೇಗೆ ನಡೆಯುತ್ತೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಅಮೆರಿಕ ವಿಶ್ವದ ಅತ್ಯಂತರ ಬಲಿಷ್ಠ ರಾಷ್ಟ್ರ. ಜನಸಂಖ್ಯೆವಾರು ಮತ್ತು ಗಾತ್ರದಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಆದ್ರೆ ಬಲಿಷ್ಠ ಮತ್ತು ಪವರ್‌ಫುಲ್‌ ದೇಶಗಳ ಱಂಕ್‌ನಲ್ಲಿ ಅಮೆರಿಕವೇ ನಂಬರ್‌ ಒನ್‌, […]

ಅಮೆರಿಕ ಚುನಾವಣೆ ಹೇಗಾಗುತ್ತೆ ಗೊತ್ತಾ? ಭಾರತದ ಕಮಲಾ ಗೆದ್ದು ನಿರ್ಮಿಸುತ್ತಾರಾ ಇತಿಹಾಸ?
Follow us on

ವಾಷಿಂಗ್‌ಟನ್‌: ಇಡೀ ವಿಶ್ವದ ಚಿತ್ತ ಈಗ ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿಯಾಗಿರುವ ಅಮೆರಿಕದತ್ತ ನೆಟ್ಟಿದೆ. ಇದಕ್ಕೆ ಕಾರಣ ಈಗ ಅಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆ. ಹಾಗಾಗಿಯೇ ಇಡೀ ಜಗತ್ತಿಗೆ ರಾಜಧಾನಿ ಅಂಥವಾ ಹೆಡ್‌ ಕ್ವಾರ್ಟ್‌ರ್‌ನಂತೆ ವರ್ತಿಸುವ ಅಮೆರಿಕದ ಚುನಾವಣೆ ಹೇಗೆ ನಡೆಯುತ್ತೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇದೆ.

ಅಮೆರಿಕ ವಿಶ್ವದ ಅತ್ಯಂತರ ಬಲಿಷ್ಠ ರಾಷ್ಟ್ರ. ಜನಸಂಖ್ಯೆವಾರು ಮತ್ತು ಗಾತ್ರದಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಆದ್ರೆ ಬಲಿಷ್ಠ ಮತ್ತು ಪವರ್‌ಫುಲ್‌ ದೇಶಗಳ ಱಂಕ್‌ನಲ್ಲಿ ಅಮೆರಿಕವೇ ನಂಬರ್‌ ಒನ್‌, ಇದರಲ್ಲಿ ದೂಸರಾ ಮಾತೇ ಇಲ್ಲ. ವಿಶ್ವದ ಎಲ್ಲ ಆಗುಹೋಗುಗಳ ಮೇಲೆ ಸದಾ ನಿಗಾ ಇಡುವ ಅಮೆರಿಕ ಪ್ರತಿಯೊಂದು ತನ್ನ ಮರ್ಜಿಯಂತೆಯೇ ನಡೆಯಬೇಕು ಎಂದು ಬಯಸುವ ಅಧಿಕಾರಲೋಲ ರಾಷ್ಟ್ರ.

ಅಮೆರಿಕದಲ್ಲಿವೆ ಎರಡು ಮುಖ್ಯ ರಾಷ್ಟ್ರೀಯ ಪಕ್ಷಗಳು
ಅಮೆರಿಕದಲ್ಲಿ ಪ್ರಜಾಪ್ರಭುತ್ವ ಇದೆ. ಅಲ್ಲಿ ಮಾನವ ಹಕ್ಕುಗಳಿಗೆ ಭಾರೀ ಪ್ರಾಮಖ್ಯತೆ. ಆದ್ರೂ ಸಹ ಎರಡು ವಿಭಿನ್ನ ವಿಚಾರಧಾರೆಯ ಪಕ್ಷಗಳಿವೆ. ಬಲಪಂತೀಯ ಧೋರಣೆಯ ರಿಪಬ್ಲಿಕನ್‌ ಪಾರ್ಟಿ ಮತ್ತು ಉದಾರವಾದಿ ಅಂದ್ರೆ ಲಿಬರಲ್‌ ವಿಚಾರಧಾರೆಯ ಡೆಮಾಕ್ರೆಟಿಕ್‌ ಪಾರ್ಟಿ. ರಿಪಬ್ಲಿಕ್‌ ಪಕ್ಷದ ಚಿಹ್ನೆ ಆನೆ. ಹಾಗೇನೆ ಡೆಮಾಕ್ರೆಟಿಕ್‌ ಪಕ್ಷದ ಚಿಹ್ನೆ ಕತ್ತೆ. ಇನ್ನುಳಿದಂತೆ ಕೆಲ ಚಿಕ್ಕಪುಟ್ಟ ಪಕ್ಷಗಳಿದ್ದರೂ ಅವು ಹೆಸರಿಗಷ್ಟೆ.

ಅಮೆರಿಕದಲ್ಲಿ ನಡೆಯುತ್ತೆ ಅಧ್ಯಕ್ಷೀಯ ಮಾದರಿ ಚುನಾವಣೆ
ಅಮೆರಿಕದಲ್ಲಿ ನಡೆಯೋದು ಅಧ್ಯಕ್ಷೀಯ ಮಾದರಿ ಚುನಾವಣೆ. ಪ್ರತಿ ಚುನಾವಣೆ ನವೆಂಬರ್‌ ತಿಂಗಳ ಮೊದಲ ಮಂಗಳವಾರ ನಡೆಯುತ್ತೆ. ಇಲ್ಲಿ ಜನರಿಂದ ಅಧ್ಯಕ್ಷಿಯ ಅಭ್ಯರ್ಥಿ ಮತ್ತು ಉಪಾಧ್ಯಕ್ಷ ಅಭ್ಯರ್ಥಿಗಳು ತಮ್ಮ ಹೆಸರಿನಲ್ಲಿ ಮತ ಕೇಳುತ್ತಾರೆ. ಆದ್ರೆ ಚುನಾವಣೆಯಲ್ಲಿ ಮತದಾನವಾದ ನಂತರ ಯಾವ ರಾಜ್ಯದಲ್ಲಿ ಯಾವ ಪಕ್ಷ ಅತಿ ಹೆಚ್ಚು ಮತಗಳಿಸುತ್ತೋ ಆ ಪಕ್ಷಕ್ಕೆ ಎಲ್ಲ ಮತಗಳು ಹೋಗುತ್ತವೆ. ಅದ್ಹೇಗೆ ಅಂತಿರಾ ಮುಂದಿದೇ ನೋಡಿ.

ಅಮೆರಿಕದಲ್ಲಿವೇ 50 ರಾಜ್ಯಗಳು
ಅಮೆರಿಕ 50 ರಾಜ್ಯಗಳಿರುವ ಸಂಯುಕ್ತ ರಾಜ್ಯಗಳಿಂದ ಕೂಡಿದ ರಾಷ್ಟ್ರ. ಇಲ್ಲಿ ಪ್ರತಿಯೊಂದು ರಾಜ್ಯಕ್ಕೂ ಗವರ್ನರ್‌ ನೇರವಾಗಿ ಜನರಿಂದ ಆಯ್ಕೆಯಾಗುತ್ತಾರೆ. ವಿದೇಶಾಂಗ, ರಕ್ಷಣಾ, ಆಂತರಿಕ ಭದ್ರತೆ, ಹಣಕಾಸು ಸೇವೆಗಳು ಸೇರಿದಂತೆ ಕೆಲವೇ ಕೆಲವು ಮಾತ್ರ ಅಮೆರಿಕದ ಅಧ್ಯಕ್ಷರ ಅದಿನದಲ್ಲಿವೆ. ಇನ್ನುಳಿದಂತೆ ಆಯಾ ರಾಜ್ಯಗಳೇ ತಮ್ಮ ಆಡಳಿತ ನಡೆಸುತ್ತವೆ. ನೀತಿಯನ್ನು ರೂಪಿಸುತ್ತವೆ.

ಅಮೆರಿಕದ ಸ್ವಿಂಗ್‌ ಸ್ಟೇಟ್ಸ್‌
ಅಮೆರಿಕದಲ್ಲಿ 50 ರಾಜ್ಯಗಳಿದ್ದರೂ, ಬಹುತೇಕ ಚಿಕ್ಕಪುಟ್ಟ ರಾಜ್ಯಗಳು. ಆದ್ರೆ ಕೆಲವೇ ಕೆಲ ರಾಜ್ಯಗಳು ದೊಡ್ಡವಿವೆ. ಅವುಗಳಲ್ಲಿ ಅತ್ಯಂತ ದೊಡ್ಡ ರಾಜ್ಯ ಕ್ಯಾಲಿಫೋರ್ನಿಯಾ. ಇದರ ನಂತರ ಟೆಕ್ಸಸ್‌, ಫ್ಲೋರಿಡಾ ಮತ್ತು ನ್ಯೂಯಾರ್ಕ್‌. ಬಹುತೇಕ ಈ ರಾಜ್ಯಗಳೇ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಣೆ ಬರಹ ನಿರ್ಧರಿಸುತ್ತವೆ.
ಕ್ಯಾಲಿಫೋರ್ನಿಯಾ ಅತ್ಯಂತ ದೊಡ್ಡ ರಾಜ್ಯ
ಕ್ಯಾಲಿಫೋರ್ನಿಯಾ ಅಮೆರಿಕದ ಅತ್ಯಂತ ದೊಡ್ಡ ರಾಜ್ಯ. ಇಲ್ಲಿ 55 ಎಲೆಕ್ಟೋರಲ್‌ ಕಾಲೆಜ್‌ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಹೀಗಾಗಿ ಇಲ್ಲಿನ ಮತದಾನದಲ್ಲಿ ಗೆದ್ದವರು ಬಹುತೇಕ ಅಧ್ಯಕ್ಷರಾಗುತ್ತಾರೆ. ಇದರ ನಂತರ ಟೆಕ್ಸಸ್‌ನಲ್ಲಿ 38 ಮತ್ತು ಫ್ಲೊರಿಡಾ ಹಾಗೂ ನ್ಯೂಯಾರ್ಕ್‌ನಲ್ಲಿ 29 ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಹೀಗಾಗಿಯೇ ಇವನ್ನು ಸ್ವಿಂಗ್‌ ಸ್ಟೇಟ್‌ಗಳೆಂದು ಕರೆಯುತ್ತಾರೆ.

ಅಮೆರಿಕದ ಎಲೆಕ್ಟೋರಲ್‌ ಕಾಲೇಜ್‌
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ರಾಜ್ಯಗಳ ಪ್ರತಿನಿಧಿಗಳ ಸಂಖ್ಯೆಯಂತೆ ಎರಡು ಪಕ್ಷಗಳಿಂದ ಪ್ರತಿನಿಧಿಗಳು ಚುನಾವಣೆಗೆ ನಿಲ್ಲುತ್ತಾರೆ. ಜನರು ಅದ್ಯಕ್ಷ ಸ್ಥಾನಕ್ಕೆ ಮತದಾನ ಮಾಡಿದಾಗ ಯಾವ ರಾಜ್ಯದಲ್ಲಿ ಹೆಚ್ಚು ಮತಗಳು ಯಾವ ಪಕ್ಷಕ್ಕೆ ಹೋಗುತ್ತವೆಯೋ ಆ ಪಕ್ಷದ ಎಲ್ಲ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ.
ಉದಾಹರಣೆಗೆ ಕ್ಯಾಲಿಫೋರ್ನಿಯಾದಲ್ಲಿ ಡೆಮಾಕ್ರೆಟಿಕ್‌ ಪಕ್ಷಕ್ಕೆ ಹೆಚ್ಚು ಮತಗಳು ಬಂದ್ರೆ, ಸಂಪೂರ್ಣ 55 ಪ್ರತಿನಿಧಿಗಳು ಅದೇ ಪಕ್ಷದವರು ಆಯ್ಕೆಯಾಗುತ್ತಾರೆ. ಟೆಕ್ಸಸ್‌ನಲ್ಲಿ ರಿಪಬ್ಲಿಕ್‌ ಪಕ್ಷಕ್ಕೆ ಹೆಚ್ಚು ಮತ ಬಂದ್ರೆ ಆ ರಾಜ್ಯದಲ್ಲಿರುವ 38 ಸೀಟುಗಳಿಗೂ ರಿಪಬ್ಲಿಕ್‌ ಪಕ್ಷದವರೇ ಆಯ್ಕೆಯಾಗುತ್ತಾರೆ. ಹೀಗೆ ಆಯ್ಕೆಯಾಗುವ ಪ್ರತಿನಿಧಿಗಳು ಅಂತಿಮವಾಗಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಧಿಕೃತವಾಗಿ ಆಯ್ಕೆಮಾಡುತ್ತಾರೆ. ಬಹುತೇಕ ಎಲ್ಲ ಪ್ರತಿನಿಧಿಗಳು ತಮ್ಮ ಪಕ್ಷದ ಅಭ್ಯರ್ಥಿಗೇನೆ ಮತಹಾಕಬೇಕಾಗುತ್ತದೆ.

ಜನಮತಕ್ಕಿಂತ ಎಲೆಕ್ಟೋರಲ್‌ ಕಾಲೆಜ್‌ ಪ್ರತಿನಿಧಿಗಳ ಮತವೇ ನಿರ್ಣಾಯಕ
ಒಂದು ವೇಳೆ ಸಂಪೂರ್ಣವಾಗಿ ಅಮೆರಿಕದ ಮತದಾನದಲ್ಲಿ ಜನರಿಂದ ಒಟ್ಟಾರೆಯಾಗಿ ರಿಪಬ್ಲಿಕ್‌ ಪಕ್ಷಕ್ಕೆ ಹೆಚ್ಚು ಮತ ಸಿಕ್ಕರೂ, ಕೆಲ ಸ್ವಿಂಗ್‌ ರಾಜ್ಯಗಳಲ್ಲಿ ಡೆಮಾಕ್ರೆಟಿಕ್‌ ಪಕ್ಷ ಜಯ ಸಾದಿಸಿ ಹೆಚ್ಚಿನ ಎಲೆಕ್ಟೋರಲ್‌ ಕಾಲೆಜ್‌ ಪ್ರತಿನಿಧಿಗಳು ಜಯ ಸಾಧಿಸಿದರೆ, ಅಧ್ಯಕ್ಷರಾಗಿ ಆಯ್ಕೋಯಾಗೋದು ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ.
ಹೌಸ್‌ ಆಫ್‌ ರಿಪ್ರೆಸೆಂಟೇಟಿವ್ಸ್‌ ಮತ್ತು ಸೆನೆಟ್‌
ಇನ್ನು ಅಮೆರಿಕದಲ್ಲಿ ಹೌಸ್‌ ಆಫ್‌ ರಿಪ್ರೆಸಂಟೇಟಿವ್‌ ಮತ್ತು ಸೆನೆಟ್‌ ಎಂಬ ಎರಡು ಮನೆಗಳಿವೆ. ಎರಡಕ್ಕೂ ಪ್ರತೇಕವಾಗಿ ಚುನಾವಣೆ ನಡೆದು ಪ್ರತಿನಿಧಿಗಳು ಮತ್ತು ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ಹೌಸ್‌ ಆಫ್‌ ರಿಪ್ರೆಸೆಂಟೇಟಿವ್‌ ನಲ್ಲಿ ಒಟ್ಟು 538 ಪ್ರತಿನಿಧಿಗಲು ಆಯ್ಕೆಯಾಗುತ್ತಾರೆ. ಬಹುಮತಕ್ಕೆ ಇಲ್ಲಿ 270ಮತಗಳು ಬೇಕು. ಹಾಗೇನೆ ಹೌಸ್‌ ಆಫ್‌ ಸೆನೆಟ್‌ಗೆ 100 ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಬಹುಮತಕ್ಕೆ ಇಲ್ಲಿ 51 ಮತಗಳಿದ್ರೆ ಸಾಕು.

ಯಾಕೆ ಎಲೆಕ್ಟೋರಲ್‌ ಕಾಲೆಜ್‌ ಸಿಸ್ಟಮ್‌ ?
ಅಮೆರಿಕದಲ್ಲಿ 1787ರಲ್ಲಿ ಸಂವಿಧಾನವನ್ನು ರಚಿಸುವಾಗ ಕೆಲವರು ಅಧ್ಯಕ್ಷ ನೇರವಾಗಿ ಜನರಿಂದಲೇ ಆಯ್ಕೆಯಾಗಲು ಬಯಸಿದರು. ಅದ್ರೆ ದೊಡ್ಡ ದೇಶವಾಗಿದ್ದರಿಂದ ಸಂಪರ್ಕ ಮತ್ತು ಸಂವಹಣದ ಕೊರತೆ ಸಮಸ್ಯೆ ಎದುರಾಯಿತು. ರಾಜಧಾನಿಯಲ್ಲಿ ಕೆಲ ಪ್ರತಿನಿಧಿಗಳು ಅಧ್ಯಕ್ಷರನ್ನು ಪ್ರತಿನಿಧಿಗಳ ಮುಖಾಂತರ ಆಯ್ಕೆಮಾಡುವ ವಿಧಾನಕ್ಕೆ ಒಲವು ತೋರಿದರು

ಇನ್ನು ದಕ್ಷಿಣದ ರಾಜ್ಯಗಳು ಕೂಡಾ ತಮ್ಮ ಜನಸಂಖ್ಯೆ ಹೆಚ್ಚಿಗೆಯಿರೋದ್ರಿಂದ ಅದರ ಲಾಭ ಪಡೆಯಲು ಎಲೆಕ್ಟೋರಲ್‌ ಕಾಲೇಜ್‌ ಸಿಸ್ಟಮ್‌ಗೆ ಒಲವು ತೋರಿದವು. ಇನ್ನು ಕೆಲ ಚಿಕ್ಕ ರಾಜ್ಯಗಳು ಕೂಡಾ ತಮ್ಮ ಪ್ರಾಮುಖ್ಯತೆ ಉಳಿಸಿಕೊಳ್ಳಲು ಎಲೆಕ್ಟೋರಲ್‌ ಸಿಸ್ಟಮ್‌ಗೆ ಬೆಂಬಲಿಸಿದವು. ಹೀಗಾಗಿ ಎರಡನ್ನು ಸೇರಿಸಿ ನೇರ ಚುನಾವಣೆ, ಆದ್ರೆ ಪ್ರತಿನಿಧಿಗಳ ಮುಖಾಂತರ ಅಂತಿಮ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೊಳಿಸಲಾಯಿತು.

ಯಾರಿಗೂ ಬಹುಮತ ಸಿಗದಿದ್ದರೇ ಏನಾಗುತ್ತೆ?
ಒಂದು ವೇಳೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗೆ ಬಹುಮತ ಸಿಗದಿದ್ದರೇ, ಅಮೆರಿಕದ ಹೌಸ್‌ ಆಫ್‌ ರಿಪ್ರೆಸೆಂಟೇಟಿವ್ಸ್‌ ನೂತನ ಅಧ್ಯಕ್ಷರನ್ನು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಈ ರೀತಿಯ ಪರಿಸ್ಥಿತಿ ಇದುವರೆಗಿನ ಅಮೆರಿಕದ ಇತಿಹಾಸದಲ್ಲಿ 1824ರಲ್ಲಿ ಮಾತ್ರ ಉದ್ಭವಿಸಿತ್ತು. ಆ ನಂತರ ಈ ಥರದ ಯಾವುದೇ ಸಮಸ್ಯೆ ಇದುವರೆಗೆ ಅಮೆರಿಕದಲ್ಲಿ ಎದುರಾಗಿಲ್ಲ.

ಅಮೆರಿಕದ ಚುನಾವಣೆ ಪ್ರಕ್ರಿಯೆ
ಅಮೆರಿಕದಲ್ಲಿ 18 ವಯೋಮಿತಿಯವರು ಅಥವಾ ಹೆಚ್ಚಿಗೆ ಇದ್ದವರು ಮತದಾನಕ್ಕೆ ಅರ್ಹರಾಗುತ್ತಾರೆ. ಇಲ್ಲಿನ ಮತದಾನ ಪ್ರಕ್ರಿಯೆ ಎಲ್ಲ 50 ರಾಜ್ಯಗಳಲ್ಲಿ ಒಂದೇ ತೆರನಾಗಿಲ್ಲ. ಕೆಲ ರಾಜ್ಯಗಳಲ್ಲಿ ವಿಭಿನ್ನ ಕ್ರಿಯೆಗಳಿವೆ. ಇಲ್ಲಿ ಸಾಮನ್ಯರಿಗೂ ಪೋಸ್ಟಲ್‌ ವೋಟ್ಸ್‌ ಅಂದ್ರೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶವಿದೆ. ಹಾಗೇನೆ ರೆಗ್ಯುಲರ್‌ ಆಗಿ ಬ್ಯಾಲೆಟ್‌ ವೋಟ್ಸ್‌ ಅಂದ್ರೆ ಮತದಾನ ಕೇಂದ್ರಕ್ಕೆ ಹೋಗಿ ಮತದಾನ ಮಾಡೋದಕ್ಕೂ ಅವಕಾಶವಿದೆ.

ಫಲಿತಾಂಶ ಪ್ರಕ್ರಿಯೆ
ಅಮೆರಿಕದಲ್ಲಿ ಮತದಾನ ಮುಗಿಯುತ್ತಿದ್ದಂತೆ ಎಣಿಕೆ ಕಾರ್ಯವೂ ಆರಂಭವಾಗುತ್ತದೆ. ಬಹುತೇಕ ರಾಜ್ಯಗಳು ಮ್ಯಾನ್ಯುವಲ್‌ ಅಂದ್ರೆ ಬ್ಯಾಲೆಟ್‌ ಪೇಪರ್‌ಗಳನ್ನು ಬಳಸುವುದರಿಂದ ಎಣಿಕೆ ಕಾರ್ಯ ಸಮಯ ಹಿಡಿಯುತ್ತೆ. ಜತೆಗೆ ಅಂಚೆ ಮತಗಳನ್ನು ಎಣಿಕೆ ಮಾಡಬೇಕು. ಹೀಗಾಗಿ ಅಂತಿಮ ಫಲಿತಾಂಶಕ್ಕಾಗಿ ಸ್ವಲ್ಪ ಕಾಯಬೇಕಾಗುತ್ತದೆ. ಕೆಲವೊಮ್ಮೆ ಇದು ವಾರ ಹಿಡಿಯಬಹುದು ಅಥವಾ ಒಂದೇ ದಿನ ಹಿಡಿಯ ಬಹುದು.

2000ರ ವಿವಾದಾತ್ಮಕ ಅಧ್ಯಕ್ಷೀಯ ಚುನಾವಣೆ
2000ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಂತಿಮ ಫಲಿತಾಂಶ ಬರಬೇಕಾದ್ರೆ ಸುಮಾರು ಎರಡು ತಿಂಗಳೇ ಹಿಡಿಯಿತು. ಯಾಕಂದ್ರೆ ವಿವಾದ ಸುಪ್ರೀಮ್‌ ಕೋರ್ಟ್‌ ಮೆಟ್ಟಿಲೇರಿತ್ತು. ಡೆಮಾಕ್ರೆಟಿಕ್‌ ಪಕ್ಷದ ಅಲ್‌ ಗೋರ್‌ ಒಟ್ಟಾರೆಯಾಗಿ ಅತಿ ಹೆಚ್ಚು ಮತಗಳಿಸಿದ್ದರೂ, ಎಲೆಕ್ಟೋರಲ್‌ ಕಾಲೇಜ್‌ನಲ್ಲಿ ರಿಪಬ್ಲಿಕ್‌ ಪಕ್ಷದ ಪ್ರತಿನಿಧಿಗಳು ಹೆಚ್ಚು ಆಯ್ಕೆಯಾಗಿದ್ದರಿಂದ ಜಾರ್ಜ್‌ ಬುಷ್‌ ಜ್ಯೂನಿಯರ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಫಲಿತಾಂಶದ ನಂತರ ಎರಡು ತಿಂಗಳು ತಯಾರಿ
ಅಮೆರಿಕದಲ್ಲಿ ಪ್ರತಿ ಅಧ್ಯಕ್ಷೀಯ ಚುನಾವಣೆ ಚುನಾವಣಾ ವರ್ಷದ ನವೆಂಬರ್‌ ತಿಂಗಳ ಮೊದಲ ಮಂಗಳವಾರ ನಡೆಯುತ್ತೆ. ಈ ಬಾರಿ ಅಂದು ನವೆಂಬರ್‌ 3ರಂದು ನಡೆಯುತ್ತದೆ. ಹಾಗೇನೆ ಆಯ್ಕೆಯಾದ ಅಧ್ಯಕ್ಷೀಯ ಅಭ್ಯರ್ಥಿ ಅಧಿಕೃತವಾಗಿ ಜನವರಿ 20ರಂದು ಅಧಿಕಾರ ಸ್ವೀಕರಿಸುತ್ತಾರೆ. ಈ ನಡುವಿನ ಅವಧಿಯಲ್ಲಿ ಪ್ರೆಸಿಡೆಂಟ್‌ ಎಲೆಕ್ಟ್‌ ಅಂದ್ರೆ ಚುನಾಯಿತ ಅಧ್ಯಕ್ಷರು ತಮ್ಮ ಕ್ಯಾಬಿನೇಟ್‌ಗೆ ಅಭ್ಯರ್ಥಿಗಳನ್ನು ಆಯ್ಕೆಮಾಡುತ್ತಾರೆ. ಹೀಗೆ ಆಯ್ಕೆಯಾಗುವವರು ಚುನಾಯಿತ ಪ್ರತಿನಿಧಿಗಳೇ ಆಗಬೇಕೆಂದೇನೂ ಇಲ್ಲ. ಪ್ರೊಫೆಷನಲ್‌ಗಳೂ ಆಗಿರಬಹುದು ಅಥವಾ ಅಧಿಕಾರಿಗಳು ಇಲ್ಲವೇ ಸಾಮನ್ಯ ಅಮೆರಿಕದ ನಾಗರಿಕನೂ ಆಗಿರಬಹುದು.
ಡೋನಾಲ್ಡ್‌ ಟ್ರಂಪ್‌ VS ಜೋಯ್‌ ಬೈಡನ್‌
ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್‌ ಪಕ್ಷದಿಂದ ಹಾಲಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಮತ್ತು ಡೆಮಾಕ್ರೆಟಿಕ್‌ ಪಕ್ಷದಿಂದ ಜೋಯ್‌ ಬೈಡನ್‌ ಅಭ್ಯರ್ಥಿಗಳಾಗಿದ್ದಾರೆ. ಉಪಾಧ್ಯಕ್ಷ ಅಭ್ಯರ್ಥಿಗಳಾಗಿ ರಿಪಬ್ಲಿಕ್‌ ಪಕ್ಷದಿಂದ ಮೈಕ್‌ ಪೆನ್ಸ್‌ ಮತ್ತು ಡೆಮಾಕ್ರೆಟಿಕ್‌ ಪಕ್ಷದಿಂದ ಕಮಲಾ ಹ್ಯಾರಿಸ್‌ ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ಸಾಥ್‌ ನೀಡುತ್ತಿದ್ದಾರೆ.

ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಹವಾ
ಈ ಬಾರಿಯ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಭಾರತದ ಪಾಲಿಗೆ ಭಾರೀ ಮಹತ್ವ ಪಡೆದಿದೆ. ಯಾಕಂದ್ರೆ ಡೆಮಾಕ್ರೆಟಿಕ್‌ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಭಾರತೀಯ ಮೂಲದ ಸಂಜಾತೆ. ಅಂದ್ರೆ ಅವರ ತಾಯಿ ಭಾರತದ ತಮಿಳುನಾಡಿನ ಚೆನ್ನೈನವರು. ತಂದೆ ಕೆರಿಬಿಯನ್‌ ದ್ವೀಪ ರಾಷ್ಟ್ರಗಳ ಜಮೈಕಾದ ಆಫ್ರಿಕನ್‌. ಸೋ ಕಮಲಾ ಹ್ಯಾರಿಸ್‌ ಇಂಡಿಯನ್‌-ಆಪ್ರಿಕನ್‌ ಅಮೆರಿಕನ್‌ ಪ್ರಜೆ. ಜೊತೆಗೆ ಇವರು ಕ್ಯಾಲಿಫೋರ್ನಿಯಾ ರಾಜ್ಯದವರು.
ಮೊದಲ ಮಹಿಳಾ ಮತ್ತು ವರ್ಣೀಯ ಅಭ್ಯರ್ಥಿ
ಕಮಲಾ ಹ್ಯಾರಿಸ್‌ ಉಪಾಧ್ಯಕ್ಷ ಹುದ್ದೇಗೆ ನಾಮಾಂಕಿತರಾಗುವ ಮೂಲಕ ಅಮೆರಿಕದ ಇತಿಹಾಸದಲ್ಲಿಯೇ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇವರು ನಾನ್‌ ವೈಟ್‌ ಜನಾಂಗದ ಮೊದಲ ಮಹಿಳಾ ಅಭ್ಯರ್ಥಿ. ಒಂದು ವೇಳೆ ಆಯ್ಕೆಯಾದ್ರೆ ಈ ಸ್ಥಾನ ಅಲಂಕರಿಸಿದ ಮೊದಲ ವ್ಯಕ್ತಿಯಾಗುತ್ತಾರೆ. ಒಂದು ವೇಳೆ ಈಗ ಗೆದ್ದರೆ ಮುಂದಿನ ಅಧ್ಯಕ್ಷೀಯ ರೇಸ್‌ನಲ್ಲಿ ಆಯ್ಕೆಯಾದ್ರೆ ಈ ಸಾಧನೆ ಮಾಡಿದ ಮೊದಲ ಅಮೆರಿಕದ ಮಹಿಳೆಯಂಬ ಕೀರ್ತಿ ಇವರದಾಗಲಿದೆ. ಜೊತೆಗೆ ಮೊದಲ ಭಾರತೀಯ ಮೂಲದ ವ್ಯಕ್ತಿಯಂಬ ಹೆಮ್ಮೆಯೂ ಅವರದು ಮತ್ತು ನಮ್ಮದು.

Published On - 9:38 pm, Sat, 15 August 20