ಮುಂದಿನ ಸೆಪ್ಟೆಂಬರ್ 11ರಂದು ಅಮೆರಿಕಾದ ನ್ಯೂಯಾರ್ಕ್ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸ್ಮರಣಾರ್ಥ ನಡೆಯುವ ಕಾರ್ಯಕ್ರಮದಂದು ಹೊನಲು ಬೆಳಕಿನ ಪ್ರದರ್ಶನವನ್ನ ರದ್ದುಗೊಳಿಸಲಾಗಿದೆ.
ಕೊವಿಡ್ ಮಹಾಮಾರಿಯ ಕಬಂದಬಾಹು ಅಮೆರಿಕಾದ ಎಲ್ಲೆಡೆ ಚಾಚಿದ್ದು ನ್ಯೂಯಾರ್ಕ್ ಸಹ ಮಾರಿಯ ಸುಳಿಯಲ್ಲಿ ಸಿಲುಕಿದೆ. ಹಾಗಾಗಿ, ಪ್ರತಿ ವರ್ಷದಂತೆ ಈ ಬಾರಿ ಆಗಸದತ್ತ ಬೀರುವ ಹೊನಲು ಬೆಳಕಿನ ಕಿರಣಗಳ ಪ್ರರ್ದಶನವನ್ನ ಆಯೋಜಿಸಿಲ್ಲ. ಹೊನಲು ಬೆಳಕಿನ ವ್ಯವಸ್ಥೆ ಮಾಡುವ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.