ಜಾಗತಿಕ ಪರಿಶೀಲನೆಗೂ ಮುನ್ನವೇ ಅಮೆರಿಕದಿಂದ ತಿರಸ್ಕೃತಗೊಂಡ ಎಂಡಿಎಚ್​ ಮಸಾಲ

ಎಂಡಿಎಚ್​ ಮಸಾಲವು ಜಾಗತಿಕ ಪರಿಶೀಲನೆಗೂ ಮುನ್ನವೇ ತಿರಸ್ಕೃತಗೊಂಡಿದೆ. ಈ ಮಸಾಲಗಳಲ್ಲಿ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಕಂಡುಬಂದಿದ್ದರಿಂದ ಅಮೆರಿಕದ ಆಹಾರ ಹಾಗೂ ಔಷಧ ಆಡಳಿತ ನಿಷೇಧ ಹೇರಿದೆ.

ಜಾಗತಿಕ ಪರಿಶೀಲನೆಗೂ ಮುನ್ನವೇ ಅಮೆರಿಕದಿಂದ ತಿರಸ್ಕೃತಗೊಂಡ ಎಂಡಿಎಚ್​ ಮಸಾಲ
ಮಸಾಲ

Updated on: May 13, 2024 | 9:07 AM

ಜಾಗತಿಕ ಪರಿಶೀಲನೆಗೂ ಮುನ್ನವೇ ಅಮೆರಿಕದಲ್ಲಿ ಎಂಡಿಎಚ್(MDH)​ ಸಾಂಬಾರ್ ಮಸಾಲ ಪದಾರ್ಥಗಳು ತಿರಸ್ಕೃತಗೊಂಡಿವೆ. ಈ ಮಸಾಲಗಳಲ್ಲಿ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಕಂಡುಬಂದಿದ್ದರಿಂದ ಅಮೆರಿಕದ ಆಹಾರ ಹಾಗೂ ಔಷಧ ಆಡಳಿತ ನಿಷೇಧ ಹೇರಿದೆ. ಬ್ಯಾಕ್ಟೀರಿಯಾ ಪತ್ತೆಯಾದ ಸಾಂಬಾರ್ ಮಸಾಲವನ್ನು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ವಿತರಿಸಲಾಗಿತ್ತು ಎಂದು ಆನ್​ಲೈನ್ ಮಾರಾಟ ಮಳಿಗೆ ಹೌಸ್ ಆಫ್ ಸ್ಪೈಸಸ್ ತಿಳಿಸಿತ್ತು. ಸದ್ಯ ಅಲ್ಲಿಂದ ಉತ್ಪನ್ನಗಳನ್ನು ಹಿಂಪಡೆಯಲಾಗಿದೆ.

ಏನಿದು ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ
ಸಾಲ್ಮೋನೆಲ್ಲಾ ಎಂಬುದು ಬ್ಯಾಕ್ಟೀರಿಯಾ, ಆಹಾರಗಳ ಮೂಲಕ ಪಸರಿಸುವ ಸೋಂಕು ಇದಾಗಿದೆ. ಸಾಲ್ಮೋನಲ್ ಸೋಂಕು ತಗುಲಿ 12 ಗಂಟೆಯ ಬಳಿಕ ಅತಿಸಾರ, ಬೇಧಿ, ಹೊಟ್ಟೆನೋವು, ಜ್ವರ ಕಾಣಿಸಿಕೊಳ್ಳುತ್ತದೆ, ಕೆಲವೊಮ್ಮೆ ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಗೂ ತಲುಪುತ್ತದೆ.

ಹಾಂಗ್​ಕಾಂಗ್ ಕಳೆದ ತಿಂಗಳು ಎಂಡಿಎಚ್ ಹಾಗೂ ಇನ್ನೊಂದು ಭಾರತೀಯ ಕಂಪನಿ ಎವರೆಸ್ಟ್​ನಿಂದ ತಯಾರಿಸಿದ ಮೂರು ಮಸಾಲೆ ಪದಾರ್ಥಗಳ ಮಿಶ್ರಣಗಳ ಮಾರಾಟವನ್ನು ಸ್ಥಗಿತಗೊಳಿಸಿತು. ಇದರಲ್ಲಿ ಕ್ಯಾನ್ಸರ್​ ಉಂಟು ಮಾಡುವ ಕೀಟನಾಶಕಗಳನ್ನು ಹೊಂದಿತ್ತು. ಎಥಲೀನ್ ಆಕ್ಸೈಡ್ ಮಾನವನ ಬಳಕೆಗೆ ಅನರ್ಹವಾಗಿದೆ ಮತ್ತು ದೀರ್ಘಕಾಲ ಬಳಕೆ ಮಾಡಿದರೆ ಕ್ಯಾನ್ಸರ್ ಅಪಾಯವಿದೆ ಎಂದು ಹೇಳಲಾಗಿತ್ತು.

ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸುರಕ್ಷಿತವೆಂದು ಹೇಳಿವೆ, ಮಸಾಲೆ ಸಂಗ್ರಹಿಸುವ, ಸಂಸ್ಕರಿಸುವ ಅಥವಾ ಪ್ಯಾಕಿಂಗ್​ ಮಾಡುವ ಯಾವುದೇ ಹಂತದಲ್ಲಿ ಎಥಲೀನ್ ಅಕ್ಸೈಡ್​ಗಳನ್ನು ಬಳಸುವುದಿಲ್ಲ ಎಂದು ಎಂಡಿಎಚ್ ಹೇಳಿದೆ.
ಯುನೈಟೆಡ್ ಸ್ಟೇಟ್ಸ್​, ಆಸ್ಟ್ರೇಲಿಯಾ ಹಾಗೂ ಭಾರತದ ಅಧಿಕಾರಿಗಳು ಈ ವಿಷಯವನ್ನು ಪರಿಶೀಲಿಸುತ್ತಿದ್ದಾರೆ. ಎರಡೂ ಬ್ರ್ಯಾಂಡ್​ಗಳು ಭಾರತದಲ್ಲಿ ಜನಪ್ರಿಯವಾಗಿವೆ ಹಾಗೂ ಪ್ರಪಂಚಾದ್ಯಂತ ರಫ್ತಾಗುತ್ತಿದೆ.

ಮತ್ತಷ್ಟು ಓದಿ: ನೀವು ಬಳಸುವ ಮಸಾಲೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆಯೇ?

ಹಾಂಗ್​ಕಾಂಗ್​ ಹಾಗೂ ಸೀಮಗಾಪುರದಲ್ಲಿ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರುವುದಕ್ಕೆ ಸಂಬಂಧಿಸಿದಂತೆ ಅಲ್ಲಿನ ಆಹಾರ ಸುರಕ್ಷತೆ ಕೇಂದ್ರಗಳು ಸಿದ್ಧಪಡಿಸಿರುವ ವರದಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಪರಿಶೀಲನೆಗೂ ಮುನ್ನವೇ ಅಮೆರಿಕ ಈ ಮಸಾಲೆ ಪದಾರ್ಥಗಳನ್ನು ತಿರಸ್ಕರಿಸಿದೆ.

 

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:07 am, Mon, 13 May 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us