Video: ಕೂದಲು ಹಿಡಿದೆಳೆದು ನೆಲಕ್ಕೆ ತಳ್ಳಿದ್ರು, ಖೈಬರ್ ಪಖ್ತುಂಖ್ವಾ ಸಿಎಂ ಅಫ್ರಿದಿ ಮೇಲೆ ಪೊಲೀಸರಿಂದ ಹಲ್ಲೆ

Updated on: Nov 28, 2025 | 11:17 AM

ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲ ಜೈಲಿನ ಹೊರಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪರವಾಗಿ ಪ್ರತಿಭಟನೆ ಮಾಡುತ್ತಿದ್ದ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಸುಹೇಲ್ ಅಫ್ರಿದಿ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಅವರ ಕೂದಲನ್ನು ಹಿಡಿದೆಳೆದಿ ನೆಲಕ್ಕೆ ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಫ್ರಿದಿ ಮತ್ತು ಅವರ ಬೆಂಬಲಿಗರು ಅಡಿಯಾಲ ಜೈಲಿನ ಹೊರಗೆ ಜಮಾಯಿಸಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದ್ದರು.

ರಾವಲ್ಪಿಂಡಿ, ನವೆಂಬರ್ 28: ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲ ಜೈಲಿನ ಹೊರಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪರವಾಗಿ ಪ್ರತಿಭಟನೆ ಮಾಡುತ್ತಿದ್ದ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಸೊಹೇಲ್ ಅಫ್ರಿದಿ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಅವರ ಕೂದಲನ್ನು ಹಿಡಿದೆಳೆದಿ ನೆಲಕ್ಕೆ ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಫ್ರಿದಿ ಮತ್ತು ಅವರ ಬೆಂಬಲಿಗರು ಅಡಿಯಾಲ ಜೈಲಿನ ಹೊರಗೆ ಜಮಾಯಿಸಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದ್ದರು.

ಪಾಕಿಸ್ತಾನ ಸೇನೆಯ ನಿರ್ದೇಶನದ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.ಮುಲ್ತಾನ್‌ನ ಶಿಯಾ ಧರ್ಮಗುರು ಅಲ್ಲಮ ನಾಸಿರ್ ಅಬ್ಬಾಸ್ ಕೂಡ ಜೈಲಿನ ಹೊರಗೆ ನಡೆದ ಧರಣಿ ಪ್ರತಿಭಟನೆಯಲ್ಲಿ ಅಫ್ರಿದಿ ಜೊತೆ ಸೇರಿಕೊಂಡರು. ಜೈಲು ಆಡಳಿತವು ಮಾತುಕತೆಯ ಮೂಲಕ ಪರಿಸ್ಥಿತಿಯನ್ನು ಹದಗೆಡಿಸಲು ಪ್ರಯತ್ನಿಸುತ್ತಿದೆ. ಅಫ್ರಿದಿ ಮತ್ತು ಇತರ ಪ್ರತಿಭಟನಾಕಾರರೊಂದಿಗೆ ಮಾತುಕತೆಗಾಗಿ ಜೈಲು ಅಧಿಕಾರಿಗಳು ಪ್ರತಿನಿಧಿಯನ್ನು ಕಳುಹಿಸಿದ್ದಾರೆ ಎಂಬ ವರದಿಗಳು ಸಹ ಹೊರಬಂದವು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published on: Nov 28, 2025 11:16 AM