
ಪಾಕಿಸ್ತಾನ ತೆಹ್ರೀಕ್-ಇ ಇನ್ಸಾಫ್ (ಪಿಟಿಐ) ಪಕ್ಷದವರೇ ಆಗಿದ್ದರೂ ಅದರೊಂದಿಗೆ ಭಿನ್ನಮತ ಹೊಂದಿರುವ, ಸದಾ ಪಿಟಿಐನ್ನು ಟೀಕಿಸುವ ನಾಯಕ ನೂರ್ ಅಲಾಮ್ ಖಾನ್, ನಿನ್ನೆ (ಮಂಗಳವಾರ) ಇಸ್ಲಮಾಬಾದ್ನ ಖಾಸಗಿ ಹೋಟೆಲ್ವೊಂದರಲ್ಲಿ ಹಿರಿಯ ನಾಗರಿಕರೊಬ್ಬರ ಜತೆ ಜಗಳವಾಡಿದ್ದಾರೆ. ಹೋಟೆಲ್ನಲ್ಲಿ ವೃದ್ಧ ನಾಗರಿಕ, ಅಲಾಮ್ ಖಾನ್ರನ್ನು ಪಕ್ಷಾಂತರಿ ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲ, ನಿರಂತರವಾಗಿ ಅವರ ವಿರುದ್ಧ ದೋಷಾರಾಪ ಮಾಡುತ್ತಲೇ ಇದ್ದರು. ಇದರಿಂದ ಕಿರಿಕಿರಿಗೊಂಡ ನೂರ್ ಅಲಾಮ್ ಖಾನ್ ಹಿರಿಯ ನಾಗರಿಕರೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ಜಿಯೋ ನ್ಯೂಸ್ನ ವರದಿಗಾರರೊಬ್ಬರು ಈ ವಿಡಿಯೋವನ್ನೂ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಲಾಮ್ ಖಾನ್ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕರಾದ ಮುಸ್ತಫಾ ನವಾಜ್ ಖೋಕರ್, ನದೀಮ್ ಅಫ್ಜಲ್ ಚಾನ್ ಮತ್ತು ಫೈಸಲ್ ಕರೀಮ್ ಕುಂದಿ ಅವರೆಲ್ಲ ಸೇರಿ ಖಾಸಗಿ ಹೋಟೆಲ್ವೊಂದರಲ್ಲಿ ಇಫ್ತಾರ್ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಈ ಹಿರಿಯ ನಾಗರಿಕ ಕೂಡ ಬಂದಿದ್ದರು. ಇವರು ಪಿಟಿಐ ಪಕ್ಷದ ಕಾರ್ಯಕರ್ತ. ಪಿಪಿಪಿ ಮುಖಂಡರೊಂದಿಗೆ ಅಲಾಮ್ ಖಾನ್ರನ್ನು ನೋಡಿದ ಆ ವೃದ್ಧ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ, ಖಾನ್ ಮತ್ತು ಖೋಖರ್ಗೆ ಬಾಟಲಿಗಳನ್ನೂ ಎಸೆದಿದ್ದಾರೆ. ಆಗ ಇವರಿಬ್ಬರೂ ಬಂದು ಆ ವೃದ್ಧನ ಮೇಲೆ ಹಲ್ಲೆ ನಡೆಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಅದಾದ ಮೇಲೆ ಹೋಟೆಲ್ನಲ್ಲಿದ್ದ ಪಿಪಿಪಿ ಮತ್ತು ಪಿಟಿಐ ಬೆಂಬಲಿಗರು ಹೊಡೆ
ಇನ್ನು ಪಾಕಿಸ್ತಾನದಲ್ಲಿ ರಾಜಕೀಯ ವಿಪ್ಲವದ ಪರಿಸ್ಥಿತಿ ಇದೆ. ಅಲ್ಲಿ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ, ಪ್ರತಿಪಕ್ಷಗಳೆಲ್ಲ ಸೇರಿ ಪಾಕಿಸ್ತಾನ ಮುಸ್ಲಿಂ ಲೀಗ್ ಮುಖ್ಯಸ್ಥ ಶಹಬಾಜ್ ಷರೀಫ್ ಅವರನ್ನು ಪ್ರಧಾನಮಂತ್ರಿ ಮಾಡಿದಾಗಿನಿಂದಲ ದೇಶದಲ್ಲಿ ವಿವಿಧೆಡೆ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಪಿಪಿಪಿ ಮತ್ತು ಇತರ ಪಕ್ಷಗಳ ನಾಯಕರು, ಇಮ್ರಾನ್ ಖಾನ್ ಕೆಳಗಿಳಿದಿದ್ದಕ್ಕೆ ಸಂಭ್ರಮದ ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ. ಆಗಾಗ ಈ ಎರಡೂ ಪಕ್ಷಗಳ ಮುಖಂಡರ ಮಧ್ಯೆ ಸಂಘರ್ಷ ಉಂಟಾಗುತ್ತಿದೆ.
ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ; ತನಿಖೆ ಕೈಗೆತ್ತಿಕೊಂಡ ಆ್ಯಂಟಿ ಟೆರರಿಸಂ ಸೆಲ್
Published On - 6:07 pm, Wed, 13 April 22