ಉತ್ಪಾದನೆ ಜಾಸ್ತಿ, ಬೇಡಿಕೆ ಇಲ್ವೇ ಇಲ್ಲ.. ಜಾರುತಿದೆ ತೈಲ ಮಾರುಕಟ್ಟೆ!

|

Updated on: Apr 23, 2020 | 10:42 AM

ನವದೆಹಲಿ: ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಾಕ್‌ಡೌನ್ ಆಗಿರುವ ಹಿನ್ನೆಲೆ ಆಯಾ ರಾಷ್ಟ್ರಗಳಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಇದರಿಂದ, ಬೇಡಿಕೆ ಪ್ರಮಾಣ ಬಹುತೇಕ ಕುಸಿದಿದೆ. ಆದ್ರೆ ಇದೇ ವೇಳೆ ಕಚ್ಚಾ ತೈಲ ಉತ್ಪಾದನೆ ಹೆಚ್ಚಾಗಿದೆ. ಹಾಗಾಗಿ ಸತತ 2ನೇ ‌ದಿನವೂ ಕಚ್ಚಾ ತೈಲ ಬೆಲೆ ನೆಗೆಟಿವ್ ಸಂಖ್ಯೆಗೆ ಕುಸಿದಿದ್ದು, ಇಂದು ಮೈನಸ್ ನಾಲ್ಕು ಡಾಲರ್‌ಗೆ ಕುಸಿತ‌ ಕಂಡಿದೆ. ಇಂದು ಕೂಡ ಕಚ್ಛಾ ತೈಲ ಬೆಲೆ ಶೇ. 300 ರಷ್ಟು ಕುಸಿದಿದೆ. ಇದರ ಪರಿಣಾಮಗಳೇನು ? ಆಯಾ ದೇಶಗಳಲ್ಲಿ […]

ಉತ್ಪಾದನೆ ಜಾಸ್ತಿ, ಬೇಡಿಕೆ ಇಲ್ವೇ ಇಲ್ಲ.. ಜಾರುತಿದೆ ತೈಲ ಮಾರುಕಟ್ಟೆ!
ಕಚ್ಚಾ ತೈಲ (ಸಂಗ್ರಹ ಚಿತ್ರ)
Follow us on

ನವದೆಹಲಿ: ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಾಕ್‌ಡೌನ್ ಆಗಿರುವ ಹಿನ್ನೆಲೆ ಆಯಾ ರಾಷ್ಟ್ರಗಳಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಇದರಿಂದ, ಬೇಡಿಕೆ ಪ್ರಮಾಣ ಬಹುತೇಕ ಕುಸಿದಿದೆ. ಆದ್ರೆ ಇದೇ ವೇಳೆ ಕಚ್ಚಾ ತೈಲ ಉತ್ಪಾದನೆ ಹೆಚ್ಚಾಗಿದೆ.

ಹಾಗಾಗಿ ಸತತ 2ನೇ ‌ದಿನವೂ ಕಚ್ಚಾ ತೈಲ ಬೆಲೆ ನೆಗೆಟಿವ್ ಸಂಖ್ಯೆಗೆ ಕುಸಿದಿದ್ದು, ಇಂದು ಮೈನಸ್ ನಾಲ್ಕು ಡಾಲರ್‌ಗೆ ಕುಸಿತ‌ ಕಂಡಿದೆ. ಇಂದು ಕೂಡ ಕಚ್ಛಾ ತೈಲ ಬೆಲೆ ಶೇ. 300 ರಷ್ಟು ಕುಸಿದಿದೆ.
ಇದರ ಪರಿಣಾಮಗಳೇನು ? ಆಯಾ ದೇಶಗಳಲ್ಲಿ ಭಾಗಶಃ ಹಣದುಬ್ಬರ ಕುಸಿತ‌ ಆಗಲಿದೆ. ತೈಲದ ಅಮದಿಗೆ ಕಡಿಮೆ ವೆಚ್ಚ ತಗುಲಲಿದೆ. ಸರ್ಕಾರದ ವಿತ್ತೀಯ ಕೊರತೆ ಕಡಿಮೆ ಆಗಲಿದೆ.
ತೈಲ ಬೆಲೆ ಕುಸಿತದ ಲಾಭ ಗ್ರಾಹಕರಿಗೂ ಸಿಗಲಿದೆ. ದೇಶದಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಸಿಗಬಹುದು‌.

Published On - 2:39 pm, Tue, 21 April 20