
ದುಬೈ, ಅ.3: ದುಬೈನಿಂದ ಇಸ್ರೇಲ್‌ನ ತೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ (Flight FZ1073) ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವನ್ನು ಆಕಾಶದಲ್ಲೇ ಪತನಗೊಳಿಸಲು ಜಿಹಾದಿ ಕೋ-ಪೈಲಟ್ ಭೀಕರ ಸಂಚು ನಡೆಸಿದ್ದ ವೇಳೆ, 170ಕ್ಕೂ ಹೆಚ್ಚು ಅಮಾಯಕರ ಪ್ರಾಣ ಉಳಿದದ್ದು ಪ್ರಯಾಣಿಕರ ರೂಪದಲ್ಲಿದ್ದ ಇಬ್ಬರು ‘ಡೆಡ್‌ಹೆಡಿಂಗ್’ (Deadheading) ಆಫ್-ಡ್ಯೂಟಿ ಪೈಲಟ್‌ಗಳ ಹಠಾತ್ ಪ್ರವೇಶದಿಂದ. ಇದೀಗ ಈ ಡೆಡ್‌ಹೆಡಿಂಗ್ ಎಂಬ ಬಗ್ಗೆ ಭಾರೀ ಚರ್ಚೆಯಾಗುತ್ತದೆ. ವಿಮಾನಯಾನದ ವೇಳೆ ಈ ಡೆಡ್‌ಹೆಡಿಂಗ್ ಪೈಲಟ್‌ಗಳು ಯಾಕೆ? ಇವರ ಕೆಲಸ ಏನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ವಿಮಾನದ ಕಾಕ್‌ಪಿಟ್‌ನಲ್ಲಿ ಕೇವಲ ಇಬ್ಬರು ಪೈಲಟ್‌ಗಳು ಇರಬೇಕಾದ ಜಾಗದಲ್ಲಿ ಒಟ್ಟು ನಾಲ್ವರು ‘ಫ್ಲೈದುಬೈ’ ಪೈಲಟ್‌ಗಳು ಆ ವಿಮಾನದಲ್ಲಿದ್ದರು. ಕಾಕ್‌ಪಿಟ್‌ನಲ್ಲಿ ಕೋ-ಪೈಲಟ್ ಹಮಾಮ್ ಅಲ್-ಹಮಾಮಿ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ಇರಿದಿದ್ದ ಸಮಯದಲ್ಲ ಸಾಧಾರಣ ಪ್ರಯಾಣಿಕರಂತೆ ಕುಳಿತಿದ್ದ ಇಬ್ಬರು ಹೆಚ್ಚುವರಿ ಪೈಲಟ್‌ಗಳು ವಿಮಾನದ ನಿಯಂತ್ರಣ ತೆಗೆದುಕೊಂಡು ಸೌದಿ ಅರೇಬಿಯಾದ ‘ತಬುಕ್’ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.
ರಾಯಿಟರ್ಸ್ ವರದಿಯ ಪ್ರಕಾರ, ಕೋ-ಪೈಲಟ್ ಜಿಹಾದಿ ಅಲ್-ಹಮಾಮಿಯ ಧಾಂದಲೆಯಿಂದ ವಿಮಾನ ಅತ್ಯಂತ ವೇಗವಾಗಿ ಭೂಮಿಯತ್ತ ಹೋಗುತ್ತಿತ್ತು. ತೀವ್ರ ರಕ್ತಸ್ರಾವದಿಂದ ಕಾಕ್‌ಪಿಟ್ ಮೇಲೆ ಬಿದ್ದಿದ್ದ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ವಿಮಾನ ಕೆಳಕ್ಕೆ ಹೋಗುತ್ತಿದ್ದ ಕ್ಷಣದಲ್ಲೇ ಹೆಣಗಾಡಿ ಕಾಕ್‌ಪಿಟ್ ಬಾಗಿಲನ್ನು ಒಳಗಿನಿಂದ ಅನ್‌ಲಾಕ್ ಮಾಡಿದರು. ಬಾಗಿಲು ತೆರೆಯುತ್ತಿದ್ದಂತೆ ಸೀಟಿನಿಂದ ಜಿಗಿದು ಬಂದ ಪ್ರಯಾಣಿಕರು ಒಳಗಡೆ ನುಗ್ಗಿ, ಕ್ಯಾಪ್ಟನ್ ಸ್ಮಿತ್ ಅವರಿಗೆ ಚಾಕು ಇರಿದಿದ್ದ ಕೋ-ಪೈಲಟ್‌ನನ್ನು ಹಿಡಿದು ಉಸಿರುಗಟ್ಟಿಸಿ ಮೆಟ್ಟಿಹಾಕಿದರು.
ಈ ಹಂತದಲ್ಲಿ, ವಿಮಾನದಲ್ಲಿದ್ದ ಇಬ್ಬರು ಹೆಚ್ಚುವರಿ ‘ಫ್ಲೈದುಬೈ’ ಪೈಲಟ್‌ಗಳು ಕಾಕ್‌ಪಿಟ್ ಪ್ರವೇಶಿಸಿ ತಕ್ಷಣವೇ ವಿಮಾನದ ಕಂಟ್ರೋಲ್ ತೆಗೆದುಕೊಂಡರು. ಅಪಾರ ಅನುಭವವಿದ್ದ ಇಬ್ಬರೂ ಪೈಲಟ್‌ಗಳು ವಿಮಾನವನ್ನು ಸೌದಿಯ ತಬುಕ್ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ಡೈವರ್ಟ್ ಮಾಡಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.
ಸಾಮಾನ್ಯವಾಗಿ ಒಂದು ವಿಮಾನದಲ್ಲಿ ನಾಲ್ವರು ಪೈಲಟ್‌ಗಳನ್ನು ಕಳುಹಿಸುವುದು ಅತ್ಯಂತ ಅಪರೂಪ. ಮುನ್ನೆಚ್ಚರಿಕೆಯಾಗಿ ಯಾರೂ ಹೆಚ್ಚುವರಿ ಪೈಲಟ್‌ಗಳನ್ನು ನಿಯೋಜಿಸುವುದಿಲ್ಲ. ಹಾಗಿದ್ದರೂ ಈ ವಿಮಾನದಲ್ಲಿ ಇಬ್ಬರು ಹೆಚ್ಚುವರಿ ಪೈಲಟ್‌ಗಳು ಸಾಧಾರಣ ಸೀಟಿನಲ್ಲಿ ಪ್ರಯಾಣಿಕರಂತೆ ಕುಳಿತಿದ್ದರು. ವಿಮಾನಯಾನ ಕ್ಷೇತ್ರದಲ್ಲಿ ಇದನ್ನು ‘ಡೆಡ್‌ಹೆಡಿಂಗ್’ ಎನ್ನಲಾಗುತ್ತದೆ.
ಇದನ್ನೂ ಓದಿ: “ಅತ್ಯಂತ ಭಾರಿ ಬೆಲೆ ತೆರಬೇಕಾಗುತ್ತದೆ”: ಇಸ್ರೇಲ್ ಪ್ರಧಾನಿ ನೆತನ್ಯಾಹು ಖಡಕ್ ಎಚ್ಚರಿಕೆ; ಇದು ಇರಾನ್ ಕೈವಾಡ ಎಂದ ಟ್ರಂಪ್
ವಿಮಾನಯಾನ ಸಂಸ್ಥೆಯೊಂದು ತನ್ನ ಮುಂದಿನ ಬೇರೊಂದು ವಿಮಾನ ಹಾರಾಟಕ್ಕಾಗಿ ಪೈಲಟ್‌ಗಳನ್ನು ಅಥವಾ ವಿಮಾನ ಸಿಬ್ಬಂದಿಯನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ತಲುಪಿಸಬೇಕಿದ್ದಾಗ, ಅವರನ್ನು ಬೇರೊಂದು ನಿಗದಿತ ವಿಮಾನದಲ್ಲಿ ಪ್ರಯಾಣಿಕರಂತೆ ಕಳುಹಿಸುತ್ತದೆ. ‘ಡೆಡ್‌ಹೆಡಿಂಗ್’ ಮಾಡುವ ಪೈಲಟ್‌ಗಳು ಡ್ಯೂಟಿಯಲ್ಲೇ ಇದ್ದಾರೆ ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಪೂರ್ಣ ಪ್ರಮಾಣದ ವೇತನ ದೊರೆಯುತ್ತದೆ ಮತ್ತು ಅವರ ಕೆಲಸದ ಸಮಯ ಗಣನೆಗೆ ಬರುತ್ತದೆ.
ಅವರು ಯಾವುದೇ ಕಾಕ್‌ಪಿಟ್ ಕೆಲಸ ಅಥವಾ ವಿಮಾನ ತಪಾಸಣೆ ಮಾಡುವುದಿಲ್ಲ. ಅವರು ಕನ್ಫರ್ಮ್ ಟಿಕೆಟ್‌ನೊಂದಿಗೆ ಪೂರ್ಣ ಯುನಿಫಾರ್ಮ್‌ನಲ್ಲಿ ಸಾಮಾನ್ಯ ಪ್ರಯಾಣಿಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ಫ್ಲೈದುಬೈ ಸಂಸ್ಥೆಯು ಇದನ್ನು ದೃಢಪಡಿಸಿದ್ದು, ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ನೆರವಾದ ಸಿಬ್ಬಂದಿ “ಮತ್ತೊಂದು ಕಾರ್ಯಕ್ಕಾಗಿ ಪ್ರಯಾಣಿಸುತ್ತಿದ್ದ ಡ್ಯೂಟಿಯಲ್ಲಿದ್ದ ಫ್ಲೈದುಬೈ ಪೈಲಟ್‌ಗಳು” ಎಂದು ಸ್ಪಷ್ಟಪಡಿಸಿದೆ. ಆ ದಿನ ಅವರಿದ್ದದ್ದು ವಿಮಾನದ 170ಕ್ಕೂ ಹೆಚ್ಚು ಜನರ ಪಾಲಿಗೆ ವರಪ್ರದವಾಯಿತು.
ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ