ಚರಿತ್ರೆಯಲ್ಲೇ ಮೊದಲು! ಪಾಕ್ ವಾಯುಸೇನೆ ಅಧಿಕಾರಿಯಾಗಿ ಹಿಂದೂ ಯುವಕ ನೇಮಕ

|

Updated on: May 07, 2020 | 5:19 PM

ಇಸ್ಲಮಾಬಾದ್: ಕೊರೊನಾ ಸಮರ ಕಾಲದಲ್ಲಿ ನೆರೆಯ ಪಾಕಿಸ್ತಾನದಿಂದ ಒಂದು ಸಂತೋಷದ ಸಂಗತಿ ಕೇಳಿಬಂದಿದೆ. ಹಿಂದೂ ಯುವಕನೊಬ್ಬ ಪಾಕಿಸ್ತಾನದ ವಾಯುಸೇನೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಸಿಂಧ್ ಪ್ರಾಂತ್ಯದ ಥರ್ಪಾರ್​ಕರ್ ಜಿಲ್ಲೆಯ ಹಳ್ಳಿಯ ಯುವಕ ರಾಹುಲ್​ ದೇವ್ ಜನರಲ್ ಡ್ಯೂಟಿ ಪೈಲಟ್​ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ ಎಂದು ಪಾಕ್ ವಾಯುಸೇನೆ (PAF) ಟ್ವೀಟ್ ಮೂಲಕ ತಿಳಿಸಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯದಿಂದ ಯುವಕನೊಬ್ಬ ಪಾಕ್ ವಾಯುಸೇನೆ ಸೇವೆಗೆ ಮೊದಲ ಬಾರಿಗೆ ನೇಮಕವಾಗಿದ್ದಾರೆ. Good news during #COVID19 tense situation. Thar […]

ಚರಿತ್ರೆಯಲ್ಲೇ ಮೊದಲು! ಪಾಕ್ ವಾಯುಸೇನೆ ಅಧಿಕಾರಿಯಾಗಿ ಹಿಂದೂ ಯುವಕ ನೇಮಕ
Follow us on

ಇಸ್ಲಮಾಬಾದ್: ಕೊರೊನಾ ಸಮರ ಕಾಲದಲ್ಲಿ ನೆರೆಯ ಪಾಕಿಸ್ತಾನದಿಂದ ಒಂದು ಸಂತೋಷದ ಸಂಗತಿ ಕೇಳಿಬಂದಿದೆ. ಹಿಂದೂ ಯುವಕನೊಬ್ಬ ಪಾಕಿಸ್ತಾನದ ವಾಯುಸೇನೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಸಿಂಧ್ ಪ್ರಾಂತ್ಯದ ಥರ್ಪಾರ್​ಕರ್ ಜಿಲ್ಲೆಯ ಹಳ್ಳಿಯ ಯುವಕ ರಾಹುಲ್​ ದೇವ್ ಜನರಲ್ ಡ್ಯೂಟಿ ಪೈಲಟ್​ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ ಎಂದು ಪಾಕ್ ವಾಯುಸೇನೆ (PAF) ಟ್ವೀಟ್ ಮೂಲಕ ತಿಳಿಸಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯದಿಂದ ಯುವಕನೊಬ್ಬ ಪಾಕ್ ವಾಯುಸೇನೆ ಸೇವೆಗೆ ಮೊದಲ ಬಾರಿಗೆ ನೇಮಕವಾಗಿದ್ದಾರೆ.