ಕ್ಯಾಲಿಫೋರ್ನಿಯಾದಲ್ಲಿ 8 ತಿಂಗಳ ಹೆಣ್ಣು ಮಗು ಸೇರಿ ಭಾರತ ಮೂಲದ ನಾಲ್ವರ ಅಪಹರಣ

ಕ್ಯಾಲಿಫೋರ್ನಿಯಾದಲ್ಲಿ 8 ತಿಂಗಳ ಹೆಣ್ಣು ಮಗು ಸೇರಿ ಭಾರತ ಮೂಲದ ನಾಲ್ವರ ಅಪಹರಣ ಮಾಡಲಾಗಿದೆ. ಕಿಡ್ನ್ಯಾಪ್ ಮಾಡಿದವರು ಅತ್ಯಂತ ಅಪಾಯಕಾರಿ ಮತ್ತು ಶಸ್ತ್ರಸಜ್ಜಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ 8 ತಿಂಗಳ ಹೆಣ್ಣು ಮಗು ಸೇರಿ ಭಾರತ ಮೂಲದ ನಾಲ್ವರ ಅಪಹರಣ
ಕ್ಯಾಲಿಫೋರ್ನಿಯಾದಲ್ಲಿ 8 ತಿಂಗಳ ಹೆಣ್ಣು ಮಗು ಸೇರಿ ಭಾರತ ಮೂಲದ ನಾಲ್ವರ ಅಪಹರಣ
Edited By: ಆಯೇಷಾ ಬಾನು

Updated on: Oct 04, 2022 | 3:18 PM

ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕ್ಯಾಲಿಫೋರ್ನಿಯಾದ ಮರ್ಸೆಡ್​​ ಸಿಟಿಯಲ್ಲಿ ಭಾರತೀಯ ಮೂಲದ ನಾಲ್ವರನ್ನು ಸೋಮವಾರ ಕಿಡ್ನ್ಯಾಪ್ ಮಾಡಲಾಗಿದೆ. ಇದರಲ್ಲಿ 8 ತಿಂಗಳ ಹೆಣ್ಣು ಮಗುವೂ ಸೇರಿದೆ. ಜಶ್​ದೀಪ್​ ಸಿಂಗ್​ ಹಾಗೂ ಪತ್ನಿ ಜಸ್ಲೀನ್​ ಕೌರ್​ ಮತ್ತು ಆಕೆಯ ಎಂಟು ತಿಂಗಳ ಮಗಳು ಅರೋಹಿ ಧೇರಿ, ಅಮನ್​ದೀಪ್​ ಸಿಂಗ್ ಸೇರಿ ನಾಲ್ವರ ಅಪಹರಣ ಆಗಿದೆ. ಇನ್ನು ಕಿಡ್ನ್ಯಾಪ್ ಮಾಡಿದವರು ಅತ್ಯಂತ ಅಪಾಯಕಾರಿ ಮತ್ತು ಶಸ್ತ್ರಸಜ್ಜಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಈ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ. ಆದರೆ ದಕ್ಷಿಣ ಹೆದ್ದಾರಿ 59 ರ 800 ಬ್ಲಾಕ್‌ನಿಂದ 4 ಜನರನ್ನು ಬಲವಂತವಾಗಿ ಅಪಹರಿಸಲಾಗಿದೆ. ಚಿಲ್ಲರೆ ವ್ಯಾಪಾರಿಗಳು ಮತ್ತು ರೆಸ್ಟೋರೆಂಟ್‌ಗಳು ಇರುವ ಹೆಚ್ಚು ಜನ ಓಡಾಡುವ ಪ್ರದೇಶದಿಂದಲೇ ಈ ಕುಟುಂಬವನ್ನು ಅಪಹರಿಸಲಾಗಿದೆ. ಅಪಹರಣಕಾರರ ಹೆಸರು ಮತ್ತು ಅವರ ಉದ್ದೇಶವೇನು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಕಿಡ್ನ್ಯಾಪರ್ಸ್​ಗಳ ಬಗ್ಗೆ ಮಾಹಿತಿ ಇದ್ದರೆ 911ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಲು ಸ್ಥಳೀಯರಿಗೆ ತಿಳಿಸಲಾಗಿದೆ. ಇದನ್ನೂ ಓದಿ: ‘ಸೌತ್​ ಇಂಡಿಯನ್​ ಹೀರೋ’ ಬಗ್ಗೆ ನಿಮಗೆಷ್ಟು ಗೊತ್ತು? ಇವನ ಅವತಾರ ಒಂದೆರಡಲ್ಲ

2019 ರ ಹಿಂದೆ ಇದೇ ರೀತಿಯ ಘಟನೆಯೊಂದರಲ್ಲಿ, ಭಾರತೀಯ ಮೂಲದ ಉದ್ಯಮಿ ತುಷಾರ್ ಅತ್ರೆ ತನ್ನ ಗೆಳತಿಯ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯ ಮಾಲೀಕರಾಗಿದ್ದರು. ಕ್ಯಾಲಿಫೋರ್ನಿಯಾದ ಅವರ ಐಷಾರಾಮಿ ಮನೆಯಿಂದ ಅವರನ್ನು ಅಪಹರಿಸಲಾಗಿತ್ತು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us