ಮಹಾಮಾರಿ ಕೊರೊನಾ ತನ್ನ ರಣಕೇಕೆಯನ್ನು ಕಡಿಮೆ ಮಾಡಿಲ್ಲ. ಗುಪ್ತಗಾಮಿನಿಯಂತೆ ಕಣ್ಣಿಗೆ ಕಾಣಿಸಿದ ಜನರ ದೇಹವನ್ನು ಸೇರುತ್ತಿದೆ. ಫ್ರಾನ್ಸ್ ಮತ್ತು ಜರ್ಮನಿಯಲ್ಲಿ 2ನೇ ಹಂತದಲ್ಲಿ ಕೊರೊನಾ ಅಲೆ ಅಪ್ಪಳಿಸಿದೆ. ಹೀಗಾಗಿ ಈ ಎರಡೂ ರಾಷ್ಟ್ರಗಳಲ್ಲಿ ಮತ್ತೆ ಎರಡನೇ ಹಂತದ ಲಾಕ್ಡೌನ್ ಜಾರಿಯಾಗಿದೆ.
ಡಿಸೆಂಬರ್ 1 ರವರೆಗೆ ಮತ್ತೆ ಲಾಕ್ಡೌನ್ ಜಾರಿ
ನವೆಂಬರ್ 2 ರಿಂದ 30 ರವರಗೆ ಲಾಕ್ಡೌನ್ ಜಾರಿ ಮಾಡಿ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಘೋಷಣೆ ಮಾಡಿದ್ದಾರೆ. ಆದರೆ ಲಾಕ್ಡೌನ್ ವೇಳೆಯೂ ಶಾಲೆಗಳು ತೆರೆದಿರುತ್ತವೆ ಎಂದಿದ್ದಾರೆ. ಇನ್ನು ಫ್ರಾನ್ಸ್ನಲ್ಲಿ ನಿತ್ಯ 36 ಸಾವಿರ ಹೊಸ ಕೊರೊನಾ ಕೇಸ್ಗಳು ಪತ್ತೆಯಾಗುತ್ತಿವೆ. ಇದರಿಂದಾಗಿ ಅಧ್ಯಕ್ಷ ಇಮ್ಯೂನ್ಯುಯಲ್ ಮಾಕ್ರನ್ ಡಿಸೆಂಬರ್ 1 ರವರೆಗೆ ಮತ್ತೆ ಲಾಕ್ಡೌನ್ ಜಾರಿ ಮಾಡಿದ್ದಾರೆ.